Daily Crime Reports as on 12/10/2017 at 18:00 Hrs

Home / Daily Information / Daily Crime Reports as on 12/10/2017 at 18:00 Hrs

ಜೀವ ಬೆದರಿಕೆ  ಪ್ರಕರಣ: 1

  • ಧರ್ಮಸ್ಥಳ ಪೊಲೀಸ್ ಠಾಣೆ : ದಿನಾಂಕ: 09/10/2017 ರಂದು ಸಂಜೆ 5.30 ಗಂಟೆಗೆ ಪಿರ್ಯಾದಿದಾರರಾದ ಚಂದ್ರಶೇಖರ ಶೆಟ್ಟಿ ಪ್ರಾಯ:29 ವರ್ಷ ತಂದೆ; ವಿಶ್ವನಾಥ ಶೆಟ್ಟಿ ವಾಸ: ಪಲಸ್ತಡ್ಕ ಮನೆ ಅರಸಿನಮಕ್ಕಿ ಅಂಚೆ ಹತ್ಯಡ್ಕ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರು ಟೀ ಕುಡಿಯಲೆಂದು ತನ್ನ ಮೋಟಾರ ಸೈಕಲ್ ನಲ್ಲಿ ಚಾಲುಕ್ಯ ವೈನ್ಸ ನಿಂದ ಅರಸಿನಮಕ್ಕಿ ಕಡೆಗೆ ಹೋಗುತ್ತಾ ಬೆಳ್ತಂಗಡಿ ತಾಲೂಕು ಹತ್ಯಡ್ಕ ಗ್ರಾಮದ ಅರಸಿನಮಕ್ಕಿ ಸೌಂದರ್ಯ ಪ್ಯಾನ್ಸಿ ಎದುರುಗಡೆ ತಲುಪುತ್ತಿದಂತೆ ಅರಸಿನಮಕ್ಕಿ ಸೇವಾ ಕೇಂದ್ರದ ಕಡೆಯಿಂದ ಕಿರಣ ಎಂಬಾತನು ಇನ್ನೊಬ್ಬನೊಂದಿಗೆ ಮೋಟಾರ ಸೈಕಲ್ ನಲ್ಲಿ ಬಂದು ಪಿರ್ಯಾದಿದಾರರ ಮೋಟಾರ ಸೈಕಲಿಗೆ ತನ್ನ ಮೋಟಾರ ಸೈಕಲನ್ನು  ಅಡ್ಡವಿಟ್ಟು ತಾನು ತಂದಿದ್ದ ರಾಡ್ ನಿಂದ ಪಿರ್ಯಾದಿದಾರರ ತಲೆಗೆ ಹೊಡೆದು ಪಿರ್ಯಾದಿದಾರರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಳೆದನು ಅಲ್ಲದೇ ಜೇಬಿನಲ್ಲಿದ್ದ 3 ಸಾವಿರ ರೂಪಾಯಿಯನ್ನು ತಗೆದಿರುತ್ತಾನೆ. ಆ ಸಮಯ ಕಿರಣನ ಜೊತೆಯಲ್ಲಿದ್ದ ಇನ್ನೊಬ್ಬನು ಪಿರ್ಯಾದಿದಾರರ ಎಡ ಕಿವಿಗೆ ಕೈಯಿಂದ ಹೊಡೆದನು, ಆಗ ಅಲ್ಲೆ ನಿಂತಿದ್ದ ಆರೋಪಿಯ ಸ್ನೆಹಿತ ಶಶಿ ಎಂಬಾತನು ಕಿರಣ ನಲ್ಲಿ ಆತನನ್ನು ಸುಮ್ಮನೆ ಬಿಡಬೇಡ ಎಂದು ಹೇಳಿದಾಗ ಕಿರಣ ನು ಪುನ ರಾಡ್ ನಿಂದ ಪಿರ್ಯಾದುದಾರರ ಬಲ ಕಾಲಿನ ಮಣಿ ಗಂಟಿಗೆ ಹೊಡೆದು ನೋವುನ್ನುಂಟು ಮಾಡಿದ್ದಲ್ಲದೆ ಜೀವ ಬೆದರಿಕೆ  ಹಾಕಿ ಹೋಗಿರುತ್ತಾರೆ, ಗಾಯಗೊಂಡ ಪಿರ್ಯಾದುದಾರರು ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ 161/2017 ಕಲಂ:- 341,323,324,392,506 ಜೊತೆಗೆ 34  ಐ ಪಿ ಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 1

  • ಪುಂಜಾಲಕಟ್ಟೆ ಪೊಲೀಸ್ ಠಾಣೆ : ದಿನಾಂಕ 12-10-2017 ರಂದು ಮಧ್ಯಾಹ್ನ 12.00 ಗಂಟಗೆ ಪಿರ್ಯಾದಿದಾರರಾದ ವಿಠಲ ಪೂಜಾರಿ, ಪ್ರಾಯ 39 ವರ್ಷ, ತಂದೆ ಸೋಮಪ್ಪ ಪೂಜಾರಿ, ವಾಸ: ಮಡಂತಡೆ ಮನೆ, ಕುಕ್ಕಳ ಗ್ರಾಮ, ಬೆಳ್ತಂಗಡಿ ತಾಲೂಕು,ಎಂಬವರ ತಂದೆ ಸೋಮಪ್ಪ ಪೂಜಾರಿ ಪ್ರಾಯ 75 ವರ್ಷ ಇವರು ಸುಮಾರು 2 ವರ್ಷಗಳಿಂದ ಮಾನಸಿಕಕಾಯಿಲೆಯಿಂದ ಬಳಲುತ್ತಿದ್ದು  ಮಂಗಳೂರಿನಿಂದ ಔಷದಿ ಮಾಡಿಸಿದರೂ ಗುಣಮುಖರಾಗದೇ ಇದುದರಿಂದ ಜೀವನದಲ್ಲಿ ಜಿಗುಪ್ಸೆ ಬಂದು ತನ್ನ ವಾಸ್ತವ್ಯದ ಮನೆಯಾದ ಬೆಳ್ತಂಗಡಿ ತಾಲೂಕು, ಕುಕ್ಕಳ ಗ್ರಾಮ, ಮಡಂತಡೆ ಮನೆಯಲ್ಲಿ ಯಾವುದೋ ಕೀಟ ನಾಶಕ ಔಷದಿಯನ್ನು ಸೇವಿಸಿದ್ದು 108 ಅಂಬ್ಯುಲೆನ್ಸಸ್ ನಲ್ಲಿ ಚಿಕಿತ್ಸೆಗಾಗಿ ಬಂಟ್ವಾಳ ತಾಲೂಕು ಸರ್ಕಾರಿ ಆಸ್ಪತ್ರೆಗೆ  ಸಾಗಿಸಿದ್ದು ನಂತರ ಮದ್ಯಾಹ್ನ 2.00 ಗಂಟೆಗೆ ಸೋಮಪ್ಪಪೂಜಾರಿಯವರು ಸಾವನ್ನಪ್ಪಿರುತ್ತಾರೆ.ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣಾ ಯು ಡಿ ಆರ್ ಸಂಖ್ಯೆ 21/2017 ಕಲಂ: 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.