Daily Crime Reports as on 12/01/2018 at 10:00 Hrs

Home / Daily Information / Daily Crime Reports as on 12/01/2018 at 10:00 Hrs

ಅಪಘಾತ ಪ್ರಕರಣ: 2

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆಪಿರ್ಯಾದಿದಾರರಾದ ದೀಪಕ್ (26) ತಂದೆ: ತಿಮ್ಮಪ್ಪ  , ವಾಸ: ಅಂಕರಗುಂಡಿ  ಮನೆ, ಸರಪಾಡಿ ಗ್ರಾಮ, ಬಂಟ್ವಾಳ ತಾಲೂಕು ಎಂಬವರು  ದಿನಾಂಕ: 11-01-2018 ರಂದು ತಾನು ಕೆಲಸ ಮಾಡುವ ಕಂಪನಿಗೆ ಅಗತ್ಯವಾಗಿ ಬೇಕಾದ ಸಾಮಾನುಗಳನ್ನು ಖರೀದಿಸುವ ಸಲುವಾಗಿ KA-19-EQ-5551 ನೇ ಸ್ಕೂಟರ್‌ ನ್ನು ಚಲಾಯಿಸಿಕೊಂಡು ಸರಪಾಡಿಯಿಂದ ಬಂಟ್ವಾಳಕ್ಕೆ ಬರುತ್ತಾ ಸಮಯ ಸುಮಾರು 11.30 ಗಂಟೆಗೆ ಬಂಟ್ವಾಳ ತಾಲೂಕು ಬಂಟ್ವಾಳ ಕಸ್ಬಾ ಗ್ರಾಮದ ಬೈಪಾಸ್ ರಸ್ತೆ ಎಂಬಲ್ಲಿಗೆ ತಲುಪಿದಾಗ ಬಿ ಸಿ ರೋಡ್ ಕಡೆಯಿಂದ ಯಾವುದೋ ಒಂದು ಟೆಂಪೊ ಟ್ರಾವೆಲರ್ ಚಾಲಕ ತನ್ನ ವಾಹನವನ್ನು ಅತಿವೇಗ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ರಸ್ತೆಯ ರಾಂಗ್‌ ಸೈಡಿಗೆ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಸ್ಕೂಟರ್‌ಗೆ ಢಿಕ್ಕಿ ಹೊಡೆಸಿ, ಅಪಘಾತಗೊಳಿಸಿ ತನ್ನ ವಾಹನವನ್ನು ನಿಲ್ಲಿಸದೇ ವಾಹನ ಸಮೇತ ಪರಾರಿಯಾಗಿರುತ್ತಾರೆ. ಅಪಘಾತದ ಪರಿಣಾಮ ಫಿರ್ಯಾದಿದಾರರ ಎರಡೂ ಕೈಗಳ ಮುಂಗೈಗೆ ಗುದ್ದಿದ ನೋವು ಹಾಗೂ ಎರಡೂ ಕಾಲುಗಳ ಮೊಣಗಂಟಿಗೆ ತರಚಿದ ಗಾಯ ಮತ್ತು ಗುದ್ದಿದ ನೋವು ಆಗಿರುತ್ತದೆ. ಅಪಘಾತಪಡಿಸಿ ವಾಹನವನ್ನು ನಿಲ್ಲಿಸದೇ ಪರಾರಿಯಾಗಿದ್ದು,ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ. 11/2018 ಕಲಂ 279, 337, ಐಪಿಸಿ ಮತ್ತು 134 ಎ&ಬಿ ಮೋಟಾರು ವಾಹನ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ವಿಟ್ಲ ಪೊಲೀಸ್ ಠಾಣೆ: ಪಿರ್ಯಾದುದಾರರಾದ ಇಮ್ರಾನ್ (23)ತಂದೆ: ದಿ/ ಅಬೂಬಕ್ಕರ್ ವಾಸ: ಮಂಗಿಲಪದವು ಮನೆ ವೀರಕಂಭ ಗ್ರಾಮ ಬಂಟ್ವಾಳ ತಾಲೂಕು ಎಂಬವರು ದಿನಾಂಕ 10.01.2018 ರಂದು  ವಿಟ್ಲದಲ್ಲಿ ನಡೆಯುತ್ತಿದ್ದ ಧಾರ್ಮಿಕ ಕಾರ್ಯಕ್ರಮವನ್ನು ಮುಗಿಸಿ  ಮನೆಗೆ ಹೋಗುತ್ತಿರುವಾಗ ರಾತ್ರಿ ಸುಮಾರು 11.00 ಗಂಟೆಗೆ ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಒಟ್ಟೆಶಾಂತಿ  ತಿರುವು ರಸ್ತೆಯಲ್ಲಿ  ಕೆಎ 19 ಯಮ್ ಜಿ 4640 ನೇ ಕಾಂಕ್ರೀಟ್  ಮಿಕ್ಸ್ ಕ್ರಷರ್ ಲಾರಿಯನ್ನು ಅದರ ಚಾಲಕ  ಅಜಾಗರೂಕತೆಯಿಂದ ಮತ್ತು ನಿರ್ಲಕ್ಷತನದಿಂದ  ಚಲಾಯಿಸಿಕೊಂಡು ಬಂದು ಒಮ್ಮಲೆ ಬ್ರೇಕ್ ಹಾಕಿದ ಪರಿಣಾಮ ಲಾರಿಯು  ಹತೋಟಿ ತಪ್ಪಿ  ಎಡ ಬದಿಗೆ  ಮಗುಚಿ ಬಿದ್ದು  ಕೂಡಲೇ ಪಿರ್ಯಾದುದಾರರು ಮತ್ತು ಬಕುಟ ಬಶೀರ್ ಎಂಬವರು  ಲಾರಿಯನ್ನು ನೋಡಲಾಗಿ ಚಾಲಕ ಮತ್ತು ಸಹ ಪ್ರಯಾಣಿಕ ರಾಗಿದ್ದವರಿಗೆ  ಯಾವುದೇ ಗಾಯಗಳಾಗಿರುವುದಿಲ್ಲ ನಂತರ ಲಾರಿಯ ಚಾಲಕರ ಹೇಸರು ಕೇಳಲಾಗಿ ಬ್ಲಿಮೇಶ್ ಕುಮಾರ್ (22) ಮತ್ತು ಸಹ ಪ್ರಯಾಣಿಕರಾಗಿ ಉದಯ್ ಎಂದು ತಿಳಿಸಿರುತ್ತಾರೆ .ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅಕ್ರ 04/2018 ಕಲಂ 279 ಭಾ.ದಂ.ಸಂ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಾಣೆ ಪ್ರಕರಣ: 1

  • ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಪಿ. ಸೀತಾ ಪ್ರಾಯ 30 ವರ್ಷ ಗಂಡ: ರಾಮ ನಲಿಕೆ ವಾಸ ಕುಕ್ಕುಪುಣಿ ಮನೆ ನಿಡ್ಪಳ್ಳಿ ಗ್ರಾಮ ಪುತ್ತೂರು ತಾಲೂಕು   ರವರ ಗಂಡ 50 ವರ್ಷ ಪ್ರಾಯದ ರಾಮ ನಲಿಕೆ ಎಂಬವರಿಗೆ ವಾತ ಕಾಯಿಲೆ ಇದ್ದು, ದಿನಾಂಕ 09.01.2018 ರಂದು ಮನೆಯಲಿ ಬೋರ್‌ವೆಲ್ ತೆಗೆಯಲು ಇರುತ್ತದೆ ಎಂಬುದಾಗಿ ಹೇಳುತ್ತಿದ್ದವರು ಬೆಳಿಗ್ಗೆ 10.00 ಗಂಟೆಗೆ ಮನೆಯಿಂದ ಜಮೀನಿನ ನಕ್ಷೆಯನ್ನು ತೆಗದುಕೊಂಡು ಪುತ್ತೂರಿಗೆ ಹೋಗಿ ಬರುವುದಾಗಿ ಹೇಳಿ ಹೋದವರು ಈ ತನಕ ಮನೆಗೆ ಬಾರದೇ ಇದ್ದು ಪಿರ್ಯಾದಿದಾರರು ಸಂಬಂದಿಕರ ಮನೆಯಲ್ಲಿ ಹಾಗೂ ನೆರೆಕರೆಯವರಲ್ಲಿ ವಿಚಾರಿಸಿದ್ದಲ್ಲಿ ಪತ್ತೆಯಾಗದೇ ಇರುವುದಾಗಿದೆ.ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಅ.ಕ್ರ 03/18 ಕಲಂ ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 1

  • ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ನಯನ ಕುಮಾರಿ 34 ವರ್ಷ ಗಂಡ: ಜಗದೀಶ್ ಮಾಯಿಲಂಕೋಟೆ ಮನೆ, ಕುಮಟಾರು ಅದೂರು ಗ್ರಾಮ ಕಾಸರಗೋಡು ತಾಲೂಕು ಕೇರಳ ಎಂಬವರ ತಾಯಿ ಪುತ್ತೂರು ತಾಲೂಕು ನೆಟ್ಟಣಿಗೆ ಮುಡ್ನೂರು ಗ್ರಾಮದ ಗಾಳಿಮುಖ ಖಲೀಲ್ ಸಲಾಹ್ ಶಾಲೆಯಲ್ಲಿ ಆಯಾ ಆಗಿ ಕೆಲಸ ಮಾಡಿಕೊಂಡಿದ್ದು ಎಂದಿನಂತೆ ದಿನಾಂಕ 11.01.2018 ರಂದು ಬೆಳಿಗ್ಗೆ 08.00 ಗಂಟಗೆಗೆ ಕೆಲಸಕ್ಕೆ ಹೋಗಿದ್ದು, ಪಿರ್ಯಾದಿದಾರರು ಕೆಲಸ ಮಾಡಿಕೊಂಡಿದ್ದ ಆಸ್ಪತ್ರೆಯಲ್ಲಿರುವ ಸಮಯ ಮಧ್ಯಾಹ್ನ 1.30 ಗಂಟೆಗೆ ತಾಯಿ ಕೆಲಸ ಮಾಡಿಕೊಂಡಿದ್ದ ಗಾಳಿಮುಖ ಖಲೀಲ್ ಸಲಾಹ್ ಶಾಲೆಯಿಂದ ಮೊಬೈಲ್‌ಗೆ ಕರೆ ಮಾಡಿ ತಾಯಿಗೆ ಎದೆನೋವು ಬಂದು ಕುಸಿದು ಬಿದ್ದವರನ್ನು ಚಿಕಿತ್ಸೆ ಬಗ್ಗೆ ಮುಳ್ಳೇರಿಯಾ ಕೃಷ್ಣ ನರ್ಸಿಂಗ್ ಹೋಂ ಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿದಂತೆ ಪಿರ್ಯಾದಿದಾರರು ಕೂಡಲೇ ಕೃಷ್ಣ ನರ್ಸಿಂಗ್ ಹೋಂಗೆ ಬಂದಾಗ ತಾಯಿ ಮೃತಪಟ್ಟಿರುವುದಾಗಿ ತಿಳಿಸಿದ್ದು, ಪಿರ್ಯಾದಿದಾರರ ತಾಯಿಗೆ 6 ವರ್ಷದಿಂದ ಬಿ.ಪಿ ಕಾಯಿಲೆ ಇದ್ದು ಶಾಲೆಯಲ್ಲಿ ಕೆಲಸ ಮಾಡಿಕೊಂಡಿದ್ದ ಸಮಯ ಎದೆನೋವು ಬಂದು ಹೃದಯಾಘಾತದಿಂದಲೋ ಅಥವಾ ಇನ್ನಾವುದೋ ಕಾರಣದಿಂದ ಮೃತಪಟ್ಟಿದ್ದು.ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಯುಡಿಅರ್ ನಂಬ್ರ 01/18 ಕಲಂ 174  ಸಿ ಆರ್‌ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

Leave a Reply