Daily Crime Reports as on 11/01/2018 at 10:00 Hrs

Home / Daily Information / Daily Crime Reports as on 11/01/2018 at 10:00 Hrs

ಅಪಘಾತ ಪ್ರಕರಣ: 3

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ದಿನಾಂಕ 07-01-2018 ರಂದು 20.05 ಗಂಟೆಗೆ ಆರೋಪಿ ಅಟೋರಿಕ್ಷಾ ಚಾಲಕ ಮೋಹನ ಎಂಬವರು ಅಟೋರಿಕ್ಷಾ ನೋಂದಣಿ ನಂಬ್ರ KA-21-A-7483 ನೇಯದನ್ನು ಪುತ್ತೂರು ಕಡೆಯಿಂದ ಎಪಿಎಂಸಿ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗಿ ಪುತ್ತೂರು ತಾಲೂಕು ಚಿಕ್ಕಮುಡ್ನೂರು ಗ್ರಾಮದ ಎಪಿಎಂಸಿ ಬಳಿಯ ಇಂಡಿಯನ್‌ ಶಾಮಿಯಾನದ ಹತ್ತಿರ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ, ಪಿರ್ಯಾದಿದಾರರಾದ ಸಂಧ್ಯಾ (32) ತಂದೆ: ರಮೇಶ್‌ ನಾಯಕ್‌, ವಾಸ: ಕಾಪು ಮನೆಕೋಡಿಂಬಾಡಿ ಗ್ರಾಮಪುತ್ತೂರು ತಾಲೂಕು ಎಂಬವರು ಮತ್ತು  ರಮೇಶ್‌ ನಾಯಕ್‌ ರವರು ಕೋಡಿಂಬಾಡಿ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ವಾಹನ ನೋಂದಣಿ ನಂಬ್ರ KA-19- EH-9344 ನೇಯದಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಮೇಶ್‌ ನಾಯಕ್‌ ರವರು ಗಂಭೀರ ಗಾಯಗೊಂಡು ಪುತ್ತೂರು ಪ್ರಗತಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  06/2018 ಕಲಂ:  279, 338 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಸುಳ್ಯ ಪೊಲೀಸ್ ಠಾಣೆ: ಪಿರ್ಯಾದುದಾರರಾದ ಶ್ರೀ ಶೇಷಪ್ಪ ಗೌಡ.ಎಂ (78) ತಂದೆ. ದಿ. ಎಂ. ಪದ್ಮಯ್ಯ ಗೌಡ. ವಾಸ. ಮದುವೆಗದ್ದೆ ಮನೆ, ಉಬರಡ್ಕಮಿತ್ತೂರು ಗ್ರಾಮ, ಸುಳ್ಯ ತಾಲೂಕು ಎಂಬವರು ದಿನಾಂಕ 09.01.2018ರಂದು ತನ್ನ ಬಾಬ್ತು ಕೆಎ 21 ಎಲ್ 2226ನೇ ಸ್ಕೂಟರ್ ನಲ್ಲಿ ಮದ್ಯಾಹ್ನ ಸುಮಾರು 14.30 ಗಂಟೆಗೆ ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ಉಬರಡ್ಕಮಿತ್ತೂರು ಕ್ರಾಸ್(ರಾಜ್ಯ ಹೆದ್ದಾರಿ) ಎಂಬಲ್ಲಿಗೆ ತಲುಪಿದಾಗ ಸುಳ್ಯ ಕಡೆಯಿಂದ ಲಾರಿ ನಂಬ್ರ ಕೆಎ21ಸಿ7938ನೇದನ್ನು ಅದರ ಚಾಲಕ ಸುನಿಲ್ ಕುಮಾರ್ ಎಂಬವರು ಅತಿವೇಗ ಹಾಗೂ ಅಜಾರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದುದಾರರ ಬಲಕೈಗೆ,ತಲೆಗೆ,ಬಲಕಾಲು ಹೆಬ್ಬೆರಳುಗಳಿಗೆ ರಕ್ತಗಾಯವಾಗಿರುತ್ತದೆ.  ಈ ಬಗ್ಗೆ ಪಿರ್ಯಾದುದಾರರಿಗೆ ಅಪಘಾತದ ಶಾಕ್ ನಿಂದ ಹಾಗೂ ವಿಪರೀತ ನೋವಿನಿಂದ ಹೇಳಿಕೆಯನ್ನು ನೀಡುವರೇ ಆಗದಿದ್ದು ಮಗನೊಂದಿಗೆ ಚರ್ಚಿಸಿ ವಿಳಂಬವಾಗಿ ದೂರು ನೀಡುತ್ತಿರುವುದಾಗಿದೆ .ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆ ಅ.ಕ್ರ 05/2018 ಕಲಂ : 279.337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾದಿದಾರರಾ ಶ್ರೀಮತಿ ಲವಿಟಾ(26) ತಂದೆ: ಲ್ಯಾನ್ಸ್  ಬರೆಟ್ಟೋ, ವಾಸ: ದೆಚ್ಚಾರು ಮನೆ, ಮೂಡುನಡುಗೋಡು ಗ್ರಾಮ, ಬಂಟ್ವಾಳ ತಾಲೂಕು ಎಂಬವರು  ದಿನಾಂಕ: 10-01-2018 ರಂದು ತಮ್ಮ ಕುಟುಂಬದ ಧರ್ಮಭಗಿನಿ ಬೆನ್ನಿ ಬರೇಟ್ಟೊರವರನ್ನು ಕಾಣುವರೇ ತಮ್ಮ ಕುಟುಂಬದವರಾದ ಶ್ರೀಮತಿ ಸಿಸಿಲಿಯ ಬರೇಟ್ಟೊ,   ರೋಷನ್ ಬರೇಟ್ಟೊ, ಜರೋನ್ ಸಂದೇಶ್ ಬರೇಟ್ಟೋ, ಶ್ರೀಮತಿ ಕ್ಲೇರಾ ಜೆನ್ನಿಕ್ಲಾಸ್ ಮತ್ತು ಮಕ್ಕಳಾದ ರಿಯಾ ಕ್ಲೇರಿನಾ ಬರೇಟ್ಟೋ ಮತ್ತು ಜಾನ್ ಫೆಟ್ರಿಕ್ ಬರೇಟ್ಟೋ ರವರು KA-19-MC-5851 ನೇ ಓಮ್ನಿ ಕಾರಿನಲ್ಲಿ ಚಾಲಕ ರೊಬಿನ್ ಲಾಸ್ರದೋ ರವರೊಂದಿಗೆ    ದೆಚ್ಚಾರು ಮನೆಯಿಂದ ಹೊರಟು ಸೋಮೇಶ್ವರಕ್ಕೆ ಹೋಗಿ ಬೆನ್ನಿ ಬರೇಟ್ಟೋರವರನ್ನು ಭೇಟಿ ಮಾಡಿ ಬೀಜ್ ಪರಿಸರಕ್ಕೆ ಭೇಟಿ ನೀಡಿ ಬಳಿಕ ವಾಪಾಸು ಮನೆ ಕಡೆಗೆ ಬರುತ್ತಾ ಕಾರು ಚಾಲಕ ರೊಬಿನ್ ಲಾಸ್ರದೋ ರವರು ಕಾರು ಚಲಾಯಿಸಿಕೊಂಡು ಸಂಜೆ ಸುಮಾರು 17:15 ಗಂಟೆಗೆ ಬಂಟ್ವಾಳ ತಾಲೂಕು ನಾವೂರು ಗ್ರಾಮದ ಬಡಗುಂಡಿ ಎಂಬಲ್ಲಿಗೆ ತಲುಪಿದಾಗ ತಿರುವು ರಸ್ತೆಯಲ್ಲಿ  ಕಾರನ್ನು  ಅತಿವೇಗ, ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ರಸ್ತೆಯ ರಾಂಗ್ ಸೈಡಿಗೆ  ಚಲಾಯಿಸಿಕೊಂಡು ಹೋಗಿ ರಸ್ತಗೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರು ರಸ್ತೆ ಬದಿಯ ಚರಂಡಿಗೆ ಬಿದ್ದು ಅಪಘಾತಗೊಂಡಿದ್ದು, ಅಪಘಾತದಲ್ಲಿ ಪಿರ್ಯಾದಿಯ ಬಲಬದಿಗೆ ಕೆನ್ನೆಗೆ, ಕಣ್ಣಿಗೆ ಹಾಗೂ ಭುಜಕ್ಕೆ ಗುದ್ದಿದ ನೋವಾಗಿರುತ್ತದೆ. ಶ್ರೀಮತಿ ಕ್ಲೇರಾ ಬರೇಟ್ಟೋ ರವರಿಗೆ ತಲೆಗೆ ರಕ್ತಗಾಯ, ಕುತ್ತಿಗೆಗೆ ಗುದ್ದಿದ ನೋವು, ಬಲ ಕಾಲಿನ ಮೊಣಗಂಟಿಗೆ ಗುದ್ದಿದ ಗಾಯ, ಬಲಕೈಯ ತೋಲಿಗೆ ಗುದ್ದಿದ ನೋವಾಗಿರುತ್ತದೆ. ಜರೋನ್ ಸಂದೇಶ್ ಬರೇಟ್ಟೋ ರವರ ಬಲಕಣ್ಣಿಗೆ, ಬಲ ಕೆನ್ನೆಗೆ, ಬಲ ಕಿವಿಗೆ ರಕ್ತಗಾಯ, ಬಲಕಾಲಿನ ಮೊಣಗಂಟಿಗೆ ಗುದ್ದಿದ ಗಾಯ, ಬಲಕೋಲು ಕೈಗೆ ತರಚಿದ ಗಾಯ, ಶ್ರೀಮತಿ ಸಿಸಿಲಿಯಾ ರವರ ಎದುರು ಹಣೆಗೆ ಗುದ್ದಿದ ಗಾಯ, ಮೂಗಿಗೆ ತರಚಿದ ಗಾಯ, ಎಡಕೈ ಮೊಣಗಂಟಿಗೆ ತರಚಿದ ಗಾಯ, ಬಲಕೈ ಮೊಣಗಂಟಿಗೆ ಮತ್ತು ಕೋಲುಕೈಗೆ ತರಚಿದ ಗಾಯವಾಗಿರುತ್ತದೆ. ಮಗು ಜಾನ್ ಫೆಟ್ರಿಕ್ ಬರೇಟ್ಟೊ ರವರ ಬಲ ಬದಿ ತಲೆಗೆ ಗುದ್ದಿದ ನೋವಾಗಿರುತ್ತದೆ. ಮಗು ಲಿಯಾ ಕ್ಲೇರಿನಾ ಬರೇಟ್ಟೊ ರವರ ತಲೆ ದೇಹ ವಗೈರೆ ಗಾಯವಾಗಿರುತ್ತದೆ. ರೋಷನ್‌‌ಬರೇಟ್ಟೋ ರವರಿಗೆ ಗಾಯ ನೋವಾಗಿರುತ್ತದೆ. ಕಾರು ಚಾಲಕ ರಾಬಿನ್ ಲಾಸ್ರದೋ ಎಡ ಕೈ ಮೊಣಗಂಟಿಗೆ ತರಚಿದ ಗಾಯ, ಬಲಕಾಲಿನ ಮೊಣಗಂಟಿಗೆ ತರಚಿದ ಗಾಯ ಹಾಗೂ ಮಣಿಗಂಟಿಗೆ ಗುದ್ದಿದ ನೋವು ಹಾಗೂ ಎಡಕೋಲು ಕಾಲಿಗೆ ಜಖಂ ಆಗಿರುತ್ತದೆ.  ಗಾಯಾಳುಗಳು ಚಿಕಿತ್ಸೆ ಬಗ್ಗೆ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡ ಮಗು ಜಾನ್ ಫೆಟ್ರಿಕ್ ಬರೇಟ್ಟೊ ರವರು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾ 19:00 ಗಂಟೆಗೆ ಮೃತಪಟ್ಟಿರುವುದಾಗಿದೆ.ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ. 10/2018 ಕಲಂ 279, 337, 304(ಎ) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಾಣೆ ಪ್ರಕರಣ: 1

  • ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಪ್ರಸನ್ನ ಶೆಟ್ಟಿ ಪ್ರಾಯ 47 ವರ್ಷ ತಂದೆ:ಕೆ. ಪದ್ಮನಾಭ ಶೆಟ್ಟಿ ವಾಸ:ಕುಲ್ಲಂಜ ನಿಲಯ ಗರ್ಡಾಡಿ ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ತಂದೆ ಪದ್ಮನಾಭ ಶೆಟ್ಟಿ (75) ರವರು  ವಿದ್ಯಾವಂತರಾಗಿದ್ದು ಅವರು ಹೆಚ್ಚಾಗಿ ಈ ಮೊದಲು ಕೂಡ ಕೆಲವೊಂದು ಬಾರಿ ಮನೆಯಲ್ಲಿ ಹೇಳಿ ದೂರದ ದೇವಸ್ಥಾನಗಳಿಗೆ ಹೋಗಿ ಬರುತ್ತಿದ್ದರು. ಸುಮಾರು 1 ತಿಂಗಳ ಹಿಂದೆ ತಿರುಪತಿಗೆ ಹೋಗಿ ವಾಪಾಸ್ಸು ಬಂದಿರುತ್ತಾರೆ. 1 ವಾರದ ಹಿಂದೆ ಪಿರ್ಯಾದಿದಾರರ ತಂದೆಯವರು ಕಾಶಿಗೆ ಹೋಗಬೇಕು ಎಂದು ಹೇಳುತ್ತಿದ್ದಾಗ  ಮನೆಯವರು ಅದಕ್ಕೆ ಒಪ್ಪದೇ ಹೋಗುವುದು ಬೇಡವೆಂದು ತಿಳಿಸಿದ್ದು. ದಿನಾಂಕ:10-1-2018 ರಂದು ಮದ್ಯಾಹ್ನ ಸುಮಾರು 2-30 ಗಂಟೆಗೆ ಪಿರ್ಯಾದಿದಾರರ ತಂದೆಯವರು ಮನೆಯವರಲ್ಲಿ ಯಾರಲ್ಲಿಯೂ ಹೇಳದೇ ಒಂದು ಚೀಲವನ್ನು ಹಿಡಿದುಕೊಂಡು ಮನೆಯಿಂದ ಹೊರಟು ಹೋದವರು ಈ ವರಗೆ ಮನೆಗೂ ಬಾರದೇ ಸಂಬಂದಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾರೆ.ಈ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣಾ ಅ.ಕ್ರ 08/2018 ಕಲಂ: ಗಂಡಸು ಕಾಣೆ. ಯಂತೆ ಪ್ರಕರಣ ದಾಖಲಾಗಿರುತ್ತದೆ.

Leave a Reply