Daily Crime Reports as on 10/10/2017 at 10:00 Hrs

Home / Daily Information / Daily Crime Reports as on 10/10/2017 at 10:00 Hrs

ಅಪಘಾತ ಪ್ರಕರಣ: 3

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ದಿನಾಂಕ 07-10-2017 ರಂದು 21-00 ಗಂಟೆ ಸಮಯಕ್ಕೆ ಆರೋಪಿ ಲಾರಿ ಚಾಲಕ ರಾಜಣ್ಣ ಎಂಬವರು ಲಾರಿ ನೋಂದಣಿ ನಂಬ್ರ KA-41-B-5112 ನೇಯದನ್ನು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿ ಪುತ್ತೂರು ತಾಲೂಕು ಬಜತ್ತೂರು ಗ್ರಾಮದ, ನೀರಕಟ್ಟೆ ಎಂಬಲ್ಲಿ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಲಾಯಿಸಿದ ಪರಿಣಾಮ ಆರೋಪಿ ಚಾಲಕನ ಹತೋಟಿ ತಪ್ಪಿ ರಸ್ತೆ ಬದಿಯ ತೋಡಿಗೆ ಮಗುಚಿ ಬಿದ್ದು ವಾಹನ ಜಖಂ ಗೊಂಡಿದ್ದು ಸದ್ರಿ ವಾಹನದ ಕ್ಲೀನರ್‌ ಮಂಜುನಾಥ ರವರು ಗಾಯಗೊಂಡು ಹಾಸನ ಜನಪ್ರಿಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ. ಪಿರ್ಯಾದಿದಾರರಾದ ಪ್ರಶಾಂತ್‌  (22) ಗೋಪಾಲ ವಾಸ: ಜನತಾ ಕಾಲೋನಿ ಮನೆ ತವರಕೆರೆ ಕುವೆಂಪು ನಗರ ಬೆಂಗಳೂರು ಎಂಬವರು ಅಪಘಾತದ ವಿಷಯವನ್ನು ಕ್ಲೀನರ್‌ ಹಾಗೂ ಚಾಲಕರಿಂದ ತಿಳಿದುಕೊಂಡು ಅಪಘಾತ ಸ್ಥಳಕ್ಕೆ ಬಂದು ತಡವಾಗಿ ದೂರು ನೀಡಿರುವುದಾಗಿದೆ .ಈ ಬಗ್ಗೆ ಪುತ್ತೂರು ಸಂಚಾರ ಠಾಣೆ   ಮೊ.ನಂ. 137/2017  ಕಲಂ 279, 337  ಐಪಿಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ದಿನಾಂಕ 08-10-2017 ರಂದು 21-00 ಗಂಟೆ ಸಮಯಕ್ಕೆ ಆರೋಪಿ ಮೋಟಾರ್‌ ಸೈಕಲ್‌ ಸವಾರ ಪುಂಡರೀಕ ಎಂಬವರು ಮೋಟಾರ್‌ ಸೈಕಲ್‌ ನೋಂದಣಿ ನಂಬ್ರ KA-21-W-3623 ಪುತ್ತೂರು ಪೇಟೆ- ಪರ್ಲಡ್ಕ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಪರ್ಲಡ್ಕ ಕಡೆಯಿಂದ ಪುತ್ತೂರು ಪೇಟೆ ಕಡೆಗೆ ಸವಾರಿ ಮಾಡಿಕೊಂಡು ಬಂದು ಪುತ್ತೂರು ತಾಲೂಕು ಪುತ್ತೂರು ಕಸ್ಬಾ ಗ್ರಾಮದ ಕಲ್ಲಿಮಾರು ಎಂಬಲ್ಲಿ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ರಸ್ತೆಯ ಬಲ ಬದಿಗೆ ಬಂದು ಪಿರ್ಯಾದುದಾರರಾದ ಕಿರಣ್‌ ಎಸ್‌ (29) ತಂದೆ ಬಾಲಕೃಷ್ಣ ಆಚಾರ್ಯ ವಾಸ: ಒಳತ್ತಡ್ಕ ಮನೆ, ಆರ್ಯಾಪು ಗ್ರಾಮ ಪುತ್ತೂರು ತಾಲೂಕು ಎಂಬವರು ಅವರ ಬಾಬ್ತು ಮೋಟಾರ್‌ ಸೈಕಲ್‌  ನಂಬ್ರ KA-21-V-5765 ನೇಯದನ್ನು ರಸ್ತೆಯ ಎಡಬದಿಯ ಕಚ್ಚಾ ರಸ್ತೆಯಲ್ಲಿ ನಿಲ್ಲಿಸಿದ್ದಕ್ಕೆ ಡಿಕ್ಕಿ ಹೊಡೆದ ಪರಿಣಾಮ  ವಾಹನಗಳು ಜಖಂಗೊಂಡಿದ್ದು, ಪಿರ್ಯಾದಿದಾರ ಕಿರಣ್‌ ಎಸ್‌ ರವರ ಕಾಲಿಗೆ  ತೀವ್ರ ಸ್ವರೂಪದ ಕಾಲಿನ ಮೂಳೆ ಮುರಿತದ ಗಾಯ ತರಚಿದ ಗಾಯ ಹಾಗೂ ಆರೋಪಿ ಸವಾರ ಹಾಗೂ ಆರೋಪಿ ವಾಹನದಲ್ಲಿದ್ದ ಸಹ ಸವಾರ ಕಿರಣ್‌ ಕುಮಾರ್‌ ರವರಿಗೆ ತರಚಿದ ಗಾಯವಾಗಿದ್ದು, ಈ ಬಗ್ಗೆ ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ   ಮೊ.ನಂ. 138/2017  ಕಲಂ 279, 337, 338 ಐಪಿಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಸುಳ್ಯ ಪೊಲೀಸ್ ಠಾಣೆ: ಪಿರ್ಯಾದುದಾರರಾದ ಗೋಪಾಲ ಶೇಟ್(47) ತಂದೆ. ದಿ, ವೆಂಕಟ್ರಮಣ ಶೇಟ್. ವಾ. ಕಲ್ಲಾಪು ಮನೆ, ಕರಾಯ ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರು ದಿನಾಂಕ 06.10.2017ರಂದು ಸಮಯ 18.55 ಗಂಟೆಗೆ ತನ್ನ ಬಾಬ್ತು ಆಕ್ಟೀವಾ ಸ್ಕೂಟರ್ ನಂಬ್ರ ಕೆಎ-21-ಡಬ್ಲೂ-5094 ನೇದರಲ್ಲಿ ಮೊಬೈಲ್ ಕರೆನ್ಸಿ ಹಾಕಿ ಪುನ: ವಾಪಸ್ಸು ತೆರಳುತಿದ್ದ ಸಮಯ ಸುಳ್ಯ ತಾಲೂಕು ಜಾಲ್ಸೂರು ಗ್ರಾಮದ ಜಾಲ್ಸೂರು ಪೇಟೆಗೆ( ಮಾಣಿ-ಮೈಸೂರು ಹೆದ್ದಾರಿ) ತಲುಪಿ, ಮುಳ್ಳೇರಿಯ ರಸ್ತೆಯ ಕಡೆಗೆ ಇಂಡಿಕೇಟರ್ ಹಾಕಿ ತಿರುಗಿಸಿದಾಗ, ಪುತ್ತೂರು ಕಡೆಯಿಂದ ಬಂದ ಮಾರುತಿ ಆಲ್ಟೋ ಕಾರು ಕೆಎ-03-ಎಂಕೆ-7568 ನೇದರ ಚಾಲಕ ಅತಿವೇಗ ಹಾಗೂ ಅಜಾರೂಕತೆಯಿಂದ ಬಂದು ಪಿರ್ಯಾದುದಾರರ ಸ್ಕೂಟರ್ ಗೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದುದಾರರು ವಾಹನ ಸಮೇತ ರಸ್ತೆಗೆ ಎಸೆಯಲ್ಪಟ್ಟು ಎಡಕಾಲಿನ ಮೊಣಗಂಟಿಗೆ ಮೂಳೆಮುರಿತದ ಗಾಯವಾಗಿರುತ್ತದೆ .ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ  ಅ.ಕ್ರ 140 /2017. ಕಲಂ : 279.337 ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 1

  • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಎಸ್ ನಂಜುಂಡಯ್ಯ ಪಿಡಿಒ ಮಣಿನಾಲ್ಕೂರು ಗ್ರಾಮ ಪಂಚಾಯತ್ ಎಂಬವರು ಮಣಿನಾಲ್ಕೂರು ಗ್ರಾಮ ಪಂಚಾಯತ್‌ನ ಪಂಚಾಯತ್‌ ಅಭಿವೃದ್ದಿ ಅಧಿಕಾರಿಯಾಗಿದ್ದು, ಪಿರ್ಯಾದಿದಾರರು ದಿನಾಂಕ: 09-10-2017 ರಂದು ಬೆಳಿಗ್ಗೆ 10-00 ಗಂಟೆಗೆ ಕಛೇರಿಯಲ್ಲಿರುವಾಗ ಪಂಚಾಯತ್‌ ಸದಸ್ಯರಾದ ಆದಂ ಕುಂಞ್ಞ ಎಂಬವರು ಅಜಿಲಮೊಗರು ಮಸೀದಿ ಪಕ್ಕ ನೇತ್ರವತಿ ನದಿಯಲ್ಲಿ  ಒಂದು ಅಪರಿಚಿತ ಗಂಡಸಿನ ಶವವೊಂದು ನೀರಿನಲ್ಲಿರುವುದಾಗಿ ತಿಳಿಸಿದ್ದು, ಪಿರ್ಯಾದಿದಾರರು ಸ್ಥಳ ವಿಕ್ಷೀಸಿದಾಗ  ನದಿ ನೀರಿನಲ್ಲಿ ಒಂದು ಗಂಡಸಿನ ಮೃತ ದೇಹವಿದ್ದು, ಸುಮಾರು 40 ವರ್ಷ ವಯಸ್ಸಾಗಿರಬಹುದು ಸದ್ರಿ ವ್ಯಕ್ತಿ ಯಾವುದೋ ಕಾರಣದಿಂದ ಅಥವಾ ಆಕಸ್ಮಿಕವಾಗಿ ನೀರಿಗೋ ಬಿದ್ದು ಮೃತಪಟ್ಟಿರಬಹುದು.ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಯು.ಡಿ.ಆರ್ ನಂಬ್ರ: 50/2017 ಕಲಂ: 174C ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.