Daily Crime Reports as on 10/01/2018 at 10:00 Hrs

Home / Daily Information / Daily Crime Reports as on 10/01/2018 at 10:00 Hrs

ಬೆದರಿಕೆ ಪ್ರಕರಣ: ೦1

  • ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ರಾಜೇಶ್ವರಿ ಗಂಡ: ವಸಂತಕುಮಾರ್ ವಾಸ:  ಕೀರ್ತನಾ ರೆಸಿಡೆನ್ಸಿ ಬೊಳ್ವಾರ್ ಪುತ್ತೂರು ಕಸ್ಬಾ ಗ್ರಾಮ ಪುತ್ತೂರು ತಾಲೂಕು ಎಂಬವರು ಪುತ್ತೂರು  ತಾಲೂಕು ಕೆಮ್ಮಿಂಜೆ ಗ್ರಾಮದ ಮಿಷನ್ ಮೂಲೆ ಎಂಬಲ್ಲಿ ಒಟ್ಟು 4.97 ಎಕ್ರೆ ಜಮೀನನ್ನು ಹೊಂದಿದ್ದು ಹಣದ ಅವಶ್ಯಕತೆಗಾಗಿ ಸದ್ರಿ ಜಮೀನಿನ ಪೈಕಿ ಸ್ವಲ್ಪ ಭಾಗವನ್ನು  2010 ನೇ ಇಸವಿಯಲ್ಲಿ ಮಾರಾಟ ಮಾಡುವ ಸಮಯ ನೆರೆಯ ಲ್ಯಾಂಡ್ ಲಿಂಕ್ಸ್  ಬ್ರೋಕರ್  ಕೆಲಸ ಮಾಡುತ್ತಿದ್ದ ಹಸೈನಾರ್  ತಂದೆ: ಮೊಯ್ದೀನ್ ಬ್ಯಾರಿ  ರವರು ಅತ್ಯಧಿಕ ಬೆಲೆಗೆ ಮಾರಾಟ ಮಾಡಿಸಿಕೊಟ್ಟಿದ್ದು ಆ ಮೂಲಕ ಪಿರ್ಯಾದಿದಾರರಿಗೆ ಪರಿಚಿತರಾದ ಹಸೈನಾರ್ ರವರು ಉಳಿದ ಜಾಗದ ದಾಖಲೆ ಪತ್ರಗಳನ್ನು ಸರಿಪಡಿಸಿಕೊಡುವ ಬಗ್ಗೆ ಕನ್ ವರ್ಸನ್ ಮಾಡುವ ಬಗ್ಗೆ ಇನ್ನಿತರ ಕಛೇರಿ ಕೆಲಸಗಳಿಗೆಂದು ಪಿರ್ಯಾದಿದಾರರ ಮನೆಗೆ ಬಂದು ಪಿರ್ಯಾದಿದಾರರಲ್ಲಿ ಹಾಗೂ ಅವರ ಗಂಡನವರಲ್ಲಿ  ಪದೇ ಪದೇ 10,000, 20,000,50,000 ದಂತೆ ಸುಮಾರು 1 ಕೋಟಿ ಹಣವನ್ನು ಪಡೆದುಕೊಂಡಿದ್ದಲ್ಲದೇ ದಿನಾಂಕ: 02-08-2015 ರಂದು ಹಗಲು ಸುಮಾರು 12:30 ಗಂಟೆ ವೇಳೆಗೆ ಮನೆಗೆ ಬಂದ ಹಸೈನಾರ್ ಪಿರ್ಯಾದಿ ಮತ್ತು ಅವರ ಗಂಡನಿಗೆ ಚೂರಿ ತೋರಿಸಿ ಬೆದರಿಸಿ ಪಿರ್ಯಾದಿದಾರರ ಹೆಸರಿನಲ್ಲಿದ್ದ ಎರಡು ಒರಿಜಿನಲ್ ವೀಲ್ ನಾಮೆ ಪತ್ರಗಳನ್ನು ಮತ್ತು  ರೂಪಾಯಿ 50,000 ವನ್ನು ತೆಗೆದುಕೊಂಡು ಹೋಗಿದ್ದು ದಿನಾಂಕ: 23-09-2015 ರಂದು ಪಿರ್ಯಾದಿದಾರರ ಮಗನಿಗೆ ಕೂಡಾ ಬೆದರಿಕೆ ಒಡ್ಡಿ ಆತನಿಂದಲೂ ರೂ 2 ಲಕ್ಷವನ್ನು ಪಡೆದುಕೊಂಡು ಹೋಗಿದ್ದಲ್ಲದೇ ವೀಲ್ ನಾಮೆ ಪತ್ರಗಳನ್ನು  ವಶದಲ್ಲಿರಿಸಿಕೊಂಡು ಹಣ ಕೊಡದಿದ್ದರೆ ವೀಲ್ ನಾಮೆ ಜಾಗವನ್ನು ಬೇರೆಯವರಿಗೆ ಮಾರಾಟ ಮಾಡುವುದಾಗಿ ಪಿರ್ಯಾದಿದಾರರನ್ನು , ಪಿರ್ಯಾದಿದಾರರ ಗಂಡನನ್ನು ಹೆದರಿಸಿ ಸುಮಾರು 80 ಲಕ್ಷ ಹಣವನ್ನು ಪಡೆದುಕೊಂಡಿದ್ದು , ಪಡೆದುಕೊಂಡಿರುವ ಒಟ್ಟು 1, 82, 50,000 ಹಣವನ್ನು ಮತ್ತು ವೀಲು ನಾಮೆ ಪತ್ರಗಳನ್ನು ಹಿಂತಿರುಗಿಸುವಂತೆ ಕೇಳಿದಾಗ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಒಡ್ಡುತ್ತಿರುವುದಾಗಿದೆ.ಈ ಬಗ್ಗೆ ಪುತ್ತೂರು ನಗರ ಠಾಣಾ ಅ.ಕ್ರ 07/2018 ಕಲಂ  384, 504  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

Leave a Reply