Daily Crime Reports as on 09/10/2017 at 10:00 Hrs

Home / Daily Information / Daily Crime Reports as on 09/10/2017 at 10:00 Hrs

ಅಪಘಾತ ಪ್ರಕರಣ: 2

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಫಿರ್ಯಾದಿದಾರರಾದ ಭವ್ಯರಾಜ್ (29), ತಂದೆ: ರಾಮ ಪೂಜಾರಿ, ವಾಸ: ಜಕ್ರಿಬೆಟ್ಟು ಪಲ್ಕೆ ಮನೆ, ಬಂಟ್ವಾಳ ಕಸಬಾ ಗ್ರಾಮ, ಬಂಟ್ವಾಳ ತಾಲೂಕು ಎಂಬವರು ಗುತ್ತಿಗೆದಾರ ಮೇಲ್ವಿಚಾರಕನಾಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ 07/10/2017 ರಂದು ಮಂಗಳೂರಿನಲ್ಲಿ ನಡೆಯುತ್ತಿರುವ ಕಟ್ಟಡ ಕಾಮಾಗಾರಿಯ ಕೆಲಸದ ನಿಮಿತ್ತ ಹೋದವರು ಕೆಲಸ ಮುಗಿಸಿ ವಾಪಾಸ್ ದಿನಾಂಕ 08/10/2017 ರಂದು ಬೆಳಗ್ಗಿನ ಜಾವ ಮಂಗಳೂರಿನಿಂದ ಹೊರಟು ತನ್ನ ಮೋಟಾರು ಸೈಕಲಿನಲ್ಲಿಮನೆ ಕಡೆಗೆ ಬರುತ್ತಾ ಬೆಳಿಗ್ಗೆ ಸಮಯ ಸುಮಾರು 05-45 ಗಂಟೆಗೆ ಬಂಟ್ವಾಳ ತಾಲೂಕು ಅಮ್ಟಾಡಿ ಗ್ರಾಮದ ಭಂಡಾರಿಬೆಟ್ಟು ಎಂಬಲ್ಲಿಗೆ ತಲುಪಿದಾಗ ಬೆಳ್ತಂಗಡಿ ಕಡೆಯಿಂದ ಕಾರೊಂದನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆ ನಿರ್ಲಕ್ಷತನದಿಂದ ರಸ್ತೆಯ ಎಡಬದಿಗೆ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿರವರಿಗೆ  ಢಿಕ್ಕಿ ಹೊಡೆದು ಕಾರನ್ನು ನಿಲ್ಲಿಸದೇ ಪರಾರಿಯಾಗಿರುತ್ತಾರೆ. ಫಿರ್ಯಾದಿದಾರರು ಕಾರಿನ ನಂಬ್ರ ಗಮನಿಸಿದಲ್ಲಿ ಕೆಎ- 1029  ಎಂಬುದಾಗಿದ್ದು ಇಂಡಿಗೋ ಕಾರಿನಂತೆ ಕಂಡು ಬಂದಿರುತ್ತದೆ. ಆಪಘಾತ ಬಳಿಕ ಆಪಘಾತಕ್ಕೋಳಗಾದ ವ್ಯಕ್ತಿಯ ಬಳಿ ಬಂದು ಫಿರ್ಯಾದಿದಾರರು ನೋಡಿದಾಗ ಯಾರೆಂದು ಗೊತ್ತಾಗದಿದ್ದು ನಂತರ ಅವರ ಪರಿಚಯದವರಲ್ಲಿ ತಿಳಿಸಿದ್ದು ಸಾರ್ವಜನಿಕರು ಬಂದು ನೋಡಿದಾಗ ಸದ್ರಿ ವ್ಯಕ್ತಿಯು ಕಾಯಾರ್ ಮಾರ್ ನಿವಾಸಿ ರವೀಂದ್ರ ಎಂಬುದಾಗಿ ಗೊತ್ತಾಗಿದ್ದು ನಂತರ ರವೀಂದ್ರ ರವರ ಮನೆಯಯವರಿಗೆ ತಿಳಿಸಿದ್ದು ಅವರ ಸಹೋದರ ಶಂಕರ ಎಂಬವರು ಬಂದು ನೋಡಿದಾಗ ರವೀಂದ್ರ ರವರ ಕಣ್ಣು ಮೂಗು ವಗೈರೆ ಗಂಭೀರ ಜಖಂಗೊಂಡು ಮೃತಪಟ್ಟಿರುವುದಾಗಿದೆ.ಈ ಬಗ್ಗೆ ಬಂಟ್ವಾಳ ಸಂಚಾರ ಠಾಣಾ ಅ.ಕ್ರ ನಂಬ್ರ 153/2017 ಕಲಂ 279, 304(ಎ) ಐಪಿಸಿ ಮತ್ತು 134(ಎ)(ಬಿ) ಐ.ಎಂ.ವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಉಪ್ಪಿನಂಗಡಿ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ತಪಾಸೀರ್‌ ಪ್ರಾಯ 22 ತಂದೆ:ಪಿ ಹೆಚ್‌ ಅಬ್ಬಾಸ್‌ ವಾಸ:ಹೊಸಮಜಲು ಕಾಲೋನಿ ಕೌಕ್ರಾಡಿ ಗ್ರಾಮ ಪುತ್ತೂರು ತಾಲೂಕು ಎಂಬವರು ದಿನಾಂಕ:14-08-2017 ರಂದು ಬೆಳಿಗ್ಗೆ 09-15 ಗಂಟೆಗೆ ತನ್ನ ಬಾಬ್ತು ಮೋಟಾರು ಸೈಕಲ್‌ ನಂಬ್ರ ಕೆಎ-18-ಇಬಿ-2105ನೇದನ್ನು ಚಲಾಯಿಸಿಕೊಂಡು ನೆಲ್ಯಾಡಿ ಕಾಲೇಜಿನಿಂದ  ನೆಲ್ಯಾಡಿ ಪೇಟೆ ಕಡೆಗೆ ಬರುತ್ತಿರುವಾಗ ರಾ ಹೇ 75 ರ ಪುತ್ತೂರು ತಾಲೂಕು ನೆಲ್ಯಾಡಿ ಗ್ರಾಮದ ನೆಲ್ಯಾಡಿ ಸಂತೆ ಮಾರುಕಟ್ಟೆಯ ಬಳಿ ತಲುಪಿದಾಗ ಸಂತೆ ಮಾರುಕಟ್ಟೆಯ ಕಡೆಯಿಂದ ರಾಷ್ಟ್ರೀಯ ಹೆದ್ದಾರಿಯ ಕಡೆಗೆ ಮೋಟಾರು ಸೈಕಲ್‌ ನಂಬ್ರ ಕೆಎ-21-ಹೆಚ್‌-6831ನೇದನ್ನು ಅದರ ಸವಾರನು ಅತೀವೇಗ ಹಾಗೂ ಅಜಾಗರೂಕತೆಯಿಂದ ಮತ್ತು ಯಾವುದೇ ಸೂಚನೆ ನೀಡದೆ ಚಲಾಯಿಸಿ ಪಿರ್ಯಾಧಿದಾರರ ಮೋಟಾರು ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾಧಿದಾರರು ಗಾಯಗೊಂಡು ಅಶ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಆಸ್ಪತ್ರೆಯ ಖರ್ಚು ವೆಚ್ಚವನ್ನು ಆಪಾದಿತ ಮೋಟಾರು ಸೈಕಲ್‌ ಸವಾರನಾದ ಜೀವನ ಡಿಸೋಜಾ ಭರಿಸುತ್ತೇನೆಂದು ರಾಜಿ ಪಂಚಾಯಿತಿಗೆ ನಡೆಸಿ ಬಳಿಕ ಪಿರ್ಯಾಧಿದಾರರಿಗೆ ಅಪಘಾತದಿಂದ ಆದ ನೋವು ಉಲ್ಬಣಗೊಂಡು ದಿನಾಂಕ:07-10-2017 ರಂದು ನೆಲ್ಯಾಡಿಯ ಅಶ್ವಿನಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಅಪಘಾತದಿಂದಾದ ನೋವಿಗೆ ಅಪಘಾತಪಡಿಸಿದ ಮೋಟಾರು ಸೈಕಲ್‌ ಸವಾರನು ಖರ್ಚುವೆಚ್ಚ ಭರಿಸುತ್ತೇನೆಂದು ಹೇಳಿ ಈಗ ಖರ್ಚನ್ನು ಭರಿಸದೆ ಇದ್ದುದರಿಂದ ತಡವಾಗಿ ದೂರನ್ನು ನೀಡಿರುವುದಾಗಿದ .ಈ ಬಗ್ಗೆ ಉಪ್ಪಿನಂಗಡಿ ಠಾಣಾ ಅ.ಕ್ರ 178/2017 ಕಲಂ:279,337  ಬಾಧಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: ೦5

  • ವೇಣೂರು ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಜನಾರ್ಧನ (40) ತಂದೆ: ದಿ. ಗಂಗಣ್ಣ ಪೂಜಾರಿ, ವಾಸ: ದರ್ಖಾಸು ಮನೆ, ನಿಟ್ಟಡೆ ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ಅಕ್ಕ ಪುಷ್ಪ ಎಂಬವರು ಅವರ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಫಿರ್ಯಾದಿದಾರರ ಮನೆಯಲ್ಲಿಯೇ ಸುಮಾರು 4 ವರ್ಷಗಳಿಂದ ವಾಸವಿದ್ದು, ಅಕ್ಕನ ಹಿರಿಯ ಮಗಳು ಸೌಮ್ಯಾ (23) ಎಂಬವಳು ಸುಮಾರು 4 ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿರುವುದರಿಂದ ಅವಳಿಗೆ ಮಂಗಳೂರು ಮನಸ್ವಿನಿ ಆಸ್ಪತ್ರೆಯಿಂದ ಚಿಕಿತ್ಸೆ ಕೊಡಿಸುತ್ತಿದ್ದುಸೌಮ್ಯಾಳು ದಿನಾಂಕ: 08.10.2017 ರಂದು ಸಂಜೆ 6.30 ಗಂಟೆ ಸಮಯ ಮನೆಯ ಅಂಗಳದಲ್ಲಿದ್ದವಳು ಬಳಿಕ ಕಾಣದೇ ಇದ್ದು, ಫಿರ್ಯಾದಿದಾರರು  ಮನೆಯವರು ಮತ್ತು ನೆರೆಕರೆಯವರೊಂದಿಗೆ ಸೇರಿ  ಹುಡುಕಾಡಿದಾಗ ಮನೆಯ ಸಮೀಪ ಫಿರ್ಯಾದಿದಾರರ ಬಾಬ್ತು ಕೆರೆಯ ನೀರಿನಲ್ಲಿ, ರಾತ್ರಿ 9.30 ಗಂಟೆಯ ಸಮಯ ಮೃತಪಟ್ಟು ಪತ್ತೆಯಾಗಿರುತ್ತಾಳೆ.ಈ ಬಗ್ಗೆ ವೇಣೂರು ಪೊಲೀಸ್ ಠಾಣಾ ಯು ಡಿ ಆರ್ ನಂಬ್ರ: 23/2017  ಕಲಂ: 174  ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ನಗರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಕೆ ದೇವಪ್ಪ ಗೌಡ [40] ತಂದೆ ದಿ| ಶಿವಪ್ಪ ಗೌಡ ಕೆಮ್ಮಾಯಿ ಮನೆ ಬನ್ನೂರು ಗ್ರಾಮ ಮತ್ತು ಅಂಚೆ ಪುತ್ತೂರು ತಾಲೂಕು ಎಂಬವರ ತಮ್ಮ ಪುರಂದರ ಗೌಡ [36] ಎಂಬವರು ದಿನಾಂಕ 06-10-2017 ರಂದು ರಾತ್ರಿ 8-00 ಗಂಟೆಯಿಂದ ದಿನಾಂಕ 07-10-2017 ರಂದು ಬೆಳಿಗ್ಗೆ 07-30 ಗಂಟೆಯ ಮದ್ಯಾವದಿಯಲ್ಲಿ ಪುತ್ತೂರು ತಾಲೂಕು ಬನ್ನೂರು ಗ್ರಾಮದ ಕೆಮ್ಮಾಯಿ ಎಂಬಲ್ಲಿ ತನ್ನ ವಾವಸ್ತವ್ಯದ ಮನೆಯ ಮಲಗುವ ಕೋಣೆಯಲ್ಲಿ ಅಡ್ಡಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು.ಈ ಬಗ್ಗೆ ಪುತ್ತೂರು ನಗರ ಠಾಣಾ ಯು.ಡಿ.ಆರ್ ನಂಬ್ರ 19-2017 ಕಲಂ 174 ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ನಗರ ಪೊಲೀಸ್ ಠಾಣೆ : ದಿನಾಂಕ 07-10-2017 ರಂದು  ಮದ್ಯಾಹ್ನ 3-45  ಗಂಟೆಗೆ ಪಿರ್ಯಾದಿದಾರರಾದ ಪುರಂದರ [34] ತಂದೆ ತಿಮ್ಮಪ್ಪ ಸಪಲ್ಯ ವಾಸ ಪದೆಂಜಾರು ಮನೆ ಕಬಕ ಗ್ರಾಮ ಪುತ್ತೂರು ತಾಲೂಕು ಎಂಬವರ ಅಣ್ಣ ಚಂದ್ರಶೇಖರ [35] ಎಂಬವನು ಪುತ್ತೂರು ತಾಲೂಕು ಕಬಕ ಗ್ರಾಮದ ಪದೆಂಜಾರು  ಎಂಬಲ್ಲಿ ತನ್ನ ವಾಸ್ತವ್ಯದ ಮನೆಯ ಪಕ್ಕದಲ್ಲಿರುವ  ಕೊಟ್ಟಿಗೆಯ ಮರದ ಅಡ್ಡಕ್ಕೆ ಲುಂಗಿಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು,ಈ ಬಗ್ಗೆ ಪುತ್ತೂರು ನಗರ ಠಾಣಾ ಯು.ಡಿ.ಆರ್ ನಂಬ್ರ 20-2017 ಕಲಂ 174 ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಅನಸೂಯ ಪ್ರಾಯ:52 ವರ್ಷ ಗಂಡ ನಾಗರಾಜ ವಾಸ:ಮಂಜುನಾಥ ನಿಲಯ 2ನೇ ಅಡ್ಡರಸ್ತೆ, ಶ್ರೀ ನಗರ ಗುಬ್ಬಿ , ಗುಬ್ಬಿ ನಗರ ,ತುಮಕೂರು ಜಿಲ್ಲೆ ಎಂಬವರ ಗಂಡ ನಾಗರಾಜ ಕೆ ಪ್ರಾಯ:59 ವರ್ಷರವರು ರೈಲ್ವೇ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು ಸುಮಾರು 4 ವರ್ಷಗಳಿಂದ ಪುತ್ತೂರು ನರಿಮೊಗರಿನಲ್ಲಿ ರೈಲ್ವೇ ಪಾಯಿಂಟ್ ಮ್ಯಾನ್ ಆಗಿ ಕೆಲಸಕ್ಕೆ ವರ್ಗಾವಣೆಗೊಂಡಿದ್ದು ಸರ್ವೆಯ ರುಕ್ಮಯ್ಯ ಗೌಡ ಎಂಬವರ ಬಾಬ್ತು ಬಾಡಿಗೆ ರೂಮಿನಲ್ಲಿ ಒಬ್ಬರೇ ವಾಸವಿದ್ದರು. ಫಿರ್ಯಾದಿದಾರರು ದಿನಾಂಕ 04-10-2017 ರಂದು ನಾಗರಾಜರ ಬಾಡಿಗೆ ಮನೆಗೆ ಬಂದು ಹೋಗಿದ್ದು, ಮರುದಿನ ನಾಗರಾಜರವರು  ಫಿರ್ಯಾದಿದಾರರಿಗೆ ಫೊನ್ ಮಾಡಿ ಕರ್ತವ್ಯಕ್ಕೆ ತೆಗೆದುಕೊಂಡಿರುವುದಿಲ್ಲ ಎಂಬುದಾಗಿ ದೂರವಾಣಿ ಮೂಲಕ ತಿಳಿಸಿದ್ದು ಮತ್ತೆ ಫಿರ್ಯಾದಿದಾರರು ದಿನಾಂಕ 06-10-2017 ರಂದು ಬೆಳಿಗ್ಗೆ  ನಾಗರಾಜರವರಿಗೆ ಫೊನ್ ಕರೆಮಾಡಿದಾಗ ಸ್ವೀಕರಿಸದೇ ಇದ್ದಾಗ ರೈಲ್ವೇ ಸ್ಟೇಷನ್ ಗೆ ಫಿರ್ಯಾದಿದಾರರು ಫೊನ್ ಮಾಡಿ ಪಾಯಿಂಟ್ ಮ್ಯಾನ್‌ಗೆ ಹೋಗಿ ನೋಡಿ ಎಂದು ತಿಳಿಸಿದ್ದು ಅವರು ಹೋಗಿ ನೋಡಿದಾಗ ನಾಗರಾಜರವರು ರೂಮಿನಲ್ಲಿ ಮಲಗಿದ್ದು ನೀವು ಹೋಗಿ ನಾನು ಚೆನ್ನಾಗಿ ಇದ್ದೀನಿ ಎಂದು ಹೇಳಿ ಅವರನ್ನು ಕಳುಹಿಸಿದ್ದು, 06-10-2017 ರಂದು ಫಿರ್ಯಾದಿದಾರರು ಇನ್ನೊಬ್ಬ ಪಾಯಿಂಟ್ ಮ್ಯಾನ್‌ಗೆ ಸಂಜೆ ಸುಮಾರು 6-00 ಗಂಟೆಗೆ ಫೊನ್ ಮಾಡಿ ನಾಗರಾಜರವರನ್ನು ನೋಡಿ ಬನ್ನಿ ಎಂದು  ತಿಳಿಸಿದಾಗ ಫಿರ್ಯಾದಿದಾರರ ಗಂಡ ನಾಗರಾಜರವರು ವಾಸ್ತವ್ಯ ಇದ್ದ ಬಾಡಿಗೆ ಮನೆಯಲ್ಲಿ ಮಲಗಿದ್ದಲೇ ತೀರಿಕೊಂಡಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ ಯು ಡಿ ಆರ್ 28/17 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಸುಳ್ಯ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಅನಂತರಾಮ(51) ತಂದೆ. ರಾಮಕೃಷ್ಣ ನಾಯಕ್. ವಾಸ. ಮಾಪಳಕಜೆ ಮನೆ, ನೆಲ್ಲೂರು ಕೆಮ್ರಾಜೆ ಗ್ರಾಮ, ಸುಳ್ಯ ಎಂಬವರ ತಂದೆ ರಾಮಕೃಷ್ಣ ನಾಯಕ್(94) ಎಂಬವರು ಸುಮಾರು ಒಂದು ತಿಂಗಳಿನಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದವರು ಅಲ್ಲದೇ ಸರಿಯಾಗಿ ಕಣ್ಣು ಕಾಣದೆ ಇದ್ದು ಕೃಷಿ ಕೆಲಸಕ್ಕೆ ತೊಂದರೆಯಾಗುತ್ತಿದ್ದುದರಿಂದ  ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 07.10.2017ರಂದು 12.00 ಗಂಟೆಯಿಂದ 13.00 ಗಂಟೆಯ ನಡುವೆ ಕೊಟ್ಟಿಗೆಯ ವಾಲ್ ಪ್ಲೇಟಿಗೆ ನೈಲಾನ್ ಹಗ್ಗವನ್ನು ಕಟ್ಟಿ, ಅದರ ಇನ್ನೂಂದು ತುದಿಯನ್ನು ಕುತ್ತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಮಾಡಿಕೊಂಡಿರುವುದಾಗಿದೆ.ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಯುಡಿಆರ್ ಸಂಖ್ಯೆ 28/2017  ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಾಗಿರುತ್ತದೆ.