Daily Crime Reports as on 09/01/2018 at 10:00 Hrs

Home / Daily Information / Daily Crime Reports as on 09/01/2018 at 10:00 Hrs

ಅಪಘಾತ ಪ್ರಕರಣ: 2

  • ಬೆಳ್ಳಾರೆ ಪೊಲೀಸ್ ಠಾಣೆದಿನಾಂಕ 07-01-2017 ರಂದು 21-00 ಗಂಟೆಗೆ ಪುತ್ತೂರು-ನಿಂತಿಕಲ್ಲು ಸಾರ್ವಜನಿಕ ಡಾಮಾರು ರಸ್ತೆಯ ಪುತ್ತೂರು ತಾಲೂಕು ಬೆಳಂದೂರು ಗ್ರಾಮದ ಕೆಲೆಂಬಿರಿ ಎಂಬಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರಾದ ಚಿನ್ನಪ್ಪ ಪೂಜಾರಿ, ಪ್ರಾಯ 63 ವರ್ಷ, ತಂದೆ: ಗಿರಿಯಪ್ಪ ಪೂಜಾರಿ, ವಾಸ: ಕಡಮ್ಮಾಜೆ ಮನೆ, ಕುದ್ಮಾರು ಗ್ರಾಮ, ಪುತ್ತೂರು ತಾಲೂಕು ಎಂಬವರಿಗೆ ಅಪರಿಚಿತ ಮೋಟಾರು ಸೈಕಲ್ ಸವಾರರು ಅವರ ಬಾಬ್ತು ಮೋಟಾರು ಸೈಕಲ್ ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿ ಹಿಂದಿನಿಂದ ಡಿಕ್ಕಿಹೊಡೆಸಿದ ಪರಿಣಾಮ ಜಿನ್ನಪ್ಪ ಪೂಜಾರಿಯವರು ಮಣ್ಣು ರಸ್ತೆಯಲ್ಲಿ ಬಿದ್ದು ಅವರ ಬಲ ಕೈಗೆ, ತಲೆಗೆ, ಬಲ ಕಾಲಿನ ಹೆಬ್ಬೆರಳಿಗೆ, ಗುದ್ದಿದ ಹಾಗೂ ರಕ್ತಗಾಯಗಳಾಗಿದ್ದು, ಅಪಘಾತದ ಮಾಹಿತಿಯನ್ನು ಆರೋಪಿ ಮೋಟಾರು ಸೈಕಲ್ ಸವಾರರು ಪೊಲೀಸರಿಗೆ ತಿಳಿಸದೇ, ಗಾಯಾಳುವಿಗೆ ಚಿಕಿತ್ಸೆಯ ವ್ಯವಸ್ಥೆಯನ್ನು ಮಾಡದೇ ಅಪಘಾತ ಸ್ಥಳದಿಂದ ಮೋಟಾರು ಸೈಕಲ್ ಸಮೇತ ಪರಾರಿಯಾಗಿರುತ್ತಾರೆ.ಮತ್ತು ಗಾಯಾಳು ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ ಆ.ಕ್ರ 03/2018 ಕಲಂ : 279,337 ಐಪಿಸಿ ಮತ್ತು ಕಲಂ 134(ಎ)&(ಬಿ) ಐಎಂವಿ ಆಕ್ಟ್.  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಸುಳ್ಯ ಪೊಲೀಸ್ ಠಾಣೆ: ದಿನಾಂಕ 08.01.2018ರಂದು 16.30 ಗಂಟೆಗೆ ತನ್ನ ಬಾಬ್ತು ಕೆಎ-21-ಪಿ-1330 ನೇ ಓಮ್ನಿ ಕಾರಿನಲ್ಲಿ ಉಬರಡ್ಕ ಎಂಬಲ್ಲಿಗೆ ಬಂದು ಬಳಿಕ ತನ್ನ ಊರಾದ ಬಂದಡ್ಕ ಎಂಬಲ್ಲಿಗೆ ತೆರಳಲು ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ಕೋಲ್ಚಾರ್ ಎಂಬಲ್ಲಿಗೆ ತಲುಪಿದಾಗ ಪಿರ್ಯಾದುದಾರರಾದ ಎಂ.ಎನ್ ರಮೇಶ್ ಭಟ್(33) ತಂದೆ. ಎಂ. ನಾರಾಯಣ ಭಟ್, ವಾಸ. ಕುತ್ತಮೊಟ್ಟೆ ಮನೆ, ಉಬರಡ್ಕಮಿತ್ತೂರು ಗ್ರಾಮ, ಸುಳ್ಯ ತಾಲೂಕು ಎಂಬವರ ಎದುರುನಿಂದ ಬಂದ ಕೆಎಲ್-14-ಎಂ-1670 ನೇದರ ಜೀಪ್ ಚಾಲಕನು ಅತಿವೇಗ ಹಾಗೂ ಅಜಾರೂಕತೆಯಿಂದ ಬಂದು ಪಿರ್ಯಾದುದಾರರ ವಾಹನಕ್ಕೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದುದಾರರಿಗೆ ಎಡಕೈ ಮತ್ತು ಬಲಕಾಲಿಗೆ ಸಾದಾರಣ ಗಾಯವಾಗಿದ್ದು, ಈ ಬಗ್ಗೆ ಸುಳ್ಯ ಕೆ.ವಿ.ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ .ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆ ಅ.ಕ್ರ 04/2018 ಕಲಂ : 279.337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕೊಲೆ ಯತ್ನ  ಪ್ರಕರಣ: 1

  • ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಚರಣ್‌ರಾಜ್ ಪ್ರಾಯ 25 ವರ್ಷ ತಂದೆ: ಬಾಲಕೃಷ್ಣ ರೈ ವಾಸ: ಶಾಂತರತ್ನ ಕಾಂಪ್ಲೆಕ್ಸ್, ಸಂಪ್ಯ, ಅರ್ಯಾಪು ಗ್ರಾಮ ಪುತ್ತೂರು ತಾಲೂಕು ಎಂಬವರು ಅರ್ಯಾಪು ಗ್ರಾಮದ ಸಂಪ್ಯದ ಶಾಂತರತ್ನ ಕಾಂಪ್ಲೆಕ್ಸ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಪುತ್ತೂರಿನ ದರ್ಬೆ ಎಂಬಲ್ಲಿ ಮಾತೃಛಾಯ ಚಿಟ್ಸ್ ಪ್ರೈ ಲಿಮಿಟೆಡ್ ಅನ್ನು ನಡೆಸಿಕೊಂಡಿದ್ದು ದಿನಾಂಕ 08.01.2018 ರಂದು ಪುತ್ತೂರಿನಿಂದ ಕಾರ್ಯಕ್ರಮಕ್ಕೆ ಹೋಗಿ ಕಾರಿನಲ್ಲಿ ಮನೆಗೆ ಬಂದು ಕಾರಿನಿಂದ ಇಳಿದು ಮನೆಗೆ ನಡೆದುಕೊಂಡು ಹೋಗುತ್ತಿದ್ದ ಸಮಯ ಸುಮಾರು ರಾತ್ರಿ 8.00 ಗಂಟೆಗೆ ಪರಿಚಯದ ಕಿಶೋರ್, ಪ್ರೀತಮ್ ಧನಂಜಯ ಶೆಟ್ಟಿ, ಮನೀಶ್ ಸುಜೀತ್ ಹಾಗೂ ಇತರರು ನಿಂತುಕೊಂಡಿದ್ದು, ಪಿರ್ಯಾದಿದಾರರು ನಡೆದುಕೊಂಡು ಹೋಗುತ್ತಿದ್ದಾಗ ಕಿಶೋರ್ ಮತ್ತು ಪ್ರೀತಮ್ ತಡೆದು ನಿಲ್ಲಿಸಿ ಬಾಟ್ಲಿಯಿಂದ ಪಿರ್ಯಾದಿದಾರರ ಎಡ ಕೈ ಭುಜಕ್ಕೆ ಮತ್ತು ಬಲಕೈ ಭುಜಕ್ಕೂ ಹೊಡೆದು, ಮನೀಶ್ ನು ಕತ್ತಿಯಿಂದ ತಲೆಯ ಮೇಲ್ಭಾಗಕ್ಕೆ ಹೊಡೆದಿದ್ದು, ಧನಂಜಯ ಶೆಟ್ಟಿ ಹಾಗೂ ಸುಜೀತ್ ಇಬ್ಬರು ಪಿರ್ಯಾದಿದಾರರ ಎಡ ಮತ್ತು ಬಲಭಾಗಕ್ಕೆ ತುಳಿದಿದ್ದು ಆಷ್ಟರಲ್ಲಿ ಧನಂಜಯ ಶೆಟ್ಟಿಯು ಆತನನ್ನು ಕೊಲ್ಲದೇ ಬಿಡಬೇಡಿ ಎಂಬು ಬೊಬ್ಬೆ ಹಾಕಿದಾಗ, ಆಲ್ಲೇ ಪಕ್ಕದಲ್ಲಿದ್ದ ರಂಜನ್ ಮತ್ತು ಇತರರು ಬೊಬ್ಬೆ ಹೊಡೆಯುತ್ತಾ ಪಿರ್ಯಾದಿದಾರರಲ್ಲಿಗೆ ಬಂದಾಗ ಕೈಯಲ್ಲಿದ್ದ ಬಾಟ್ಲಿಯನ್ನು ಮನೆಯ ಮೇಲ್ಬಾವಣಿಯಿಂದ ನೋಡುತ್ತಿದ್ದವರಿಗೆ ಎಸೆದು ಮುಂದಕ್ಕಾದರೂ ಕೊಲ್ಲದೇ ಬಿಡುವುದಿಲ್ಲ ಎಂದು ಹೇಳಿ ಓಡಿ ಹೋಗಿದ್ದು, ಪಿರ್ಯಾದಿದಾರರನ್ನು ರಂಜನ್ ಹಾಗೂ ಇತರರು ಆರೈಕೆ ಮಾಡಿ ಚಿಕಿತ್ಸೆ ಬಗ್ಗೆ ಪುತ್ತೂರು ಮಹಾವೀರ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದು,ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಅ.ಕ್ರ 02/18 ಕಲಂ; 143, 147, 148, 341, 323, 324 506 307 ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಹಲ್ಲೆ  ಪ್ರಕರಣ: 1

  • ಪುತ್ತೂರು ನಗರ ಪೊಲೀಸ್ ಠಾಣೆ : ದಿನಾಂಕ: 08.01.2018 ರಂದು ಪಿರ್ಯಾದಿದಾರರಾದ ಮಂಜುನಾಥ್ ನಾಯಕ್ (33) ತಂದೆ: ಅಣ್ಣಪ್ಪ ನಾಯಕ್  ವಾಸ: ಸಾಲ್ಮರ ಗೀತಾ ಕ್ಲಿನಿಕ್ಹತ್ತಿರ ಚಿಕ್ಕಮೂಡ್ನೂರು ಗ್ರಾಮ, ಪುತ್ತೂರು ತಾಲೂಕು ಎಂಬವರು ಪುತ್ತೂರು ಪೇಟೆಗೆಂದು ಬಂದವರು ಪುತ್ತೂರು ಕಸಬಾ ಗ್ರಾಮದಲ್ಲಿರುವ ನಿರಾಳ ಬಾರಿನಲ್ಲಿ ಊಟ ಮಾಡಿ ಮದ್ಯಾಹ್ನ ಸುಮಾರು 3.00 ಗಂಟೆಗೆ ಬಾರಿನಿಂದ ಹೊರಗೆ ಬಂದ ಸಮಯ ಅವರ ಪರಿಚಯದ ಆರ್ಲಪದವು ಉದಯ ಕುಮಾರ ಎಂಬುವವರು ಸಿಕ್ಕಿ ಕೆಯ್ಯೂರುನಲ್ಲಿ ನಡೆಯುವ ಕಾರ್ಯಕ್ರಮದ ಕ್ಯಾಂಟರಿಂಗ್ ವಿಚಾರದಲ್ಲಿ ಪಿರ್ಯಾದಿದಾರರನ್ನು  ತಡೆದು ಅವ್ಯಾಚ ಶಬ್ಧಗಳಿಂದ ನಿಂದಿಸಿ, ಕೈಯಿಂದ ಪಿರ್ಯಾದಿದಾರರ  ಎಡ ಕೆನ್ನೆಗೆ ಹೊಡೆದು ದೂಡಿ ಹಾಕಿ ಪರಿಣಾಮ ಪಿರ್ಯಾದಿದಾರರು ನೆಲಕ್ಕೆ ಬಿದ್ದು ನೆಲದ್ದಲ್ಲಿದ್ದ ಕಲ್ಲೊಂದು ಅವರ ತಲೆಯ ಎಡ ಭಾಗಕ್ಕೆ ತಾಗಿ ರಕ್ತಗಾಯವಾಗಿರುತ್ತದೆ. ಗಾಯಗೊಂಡ ಪಿರ್ಯಾದಿದಾರರು  ಚಿಕಿತ್ಸೆಯ ಪುತ್ತೂರು ಆದರ್ಶ ಆಸ್ಪತ್ರೆಗೆ ಹೋಗಿ ಅಲ್ಲಿ ಚಿಕಿತ್ಸೆ ಪಡೆದಿರುವುದಾಗಿದೆ.ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ಅ.ಕ್ರ 06/2018 ಕಲಂ 341,323,504 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 1

  • ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಮಾಲತೇಶ ಪ್ರಾಯ: 32 ವರ್ಷ ತಂದೆ:ಮಲ್ಲಪ್ಪ, ವಾಸ: ವಾಲ್ಮೀಕಿ ಸರ್ಕಲ್ ಬಳಿ,ಭಾಗ್ಯ ನಗರ ,ಕೊಪ್ಪಳ ಜಿಲ್ಲೆ ಎಂಬವರ ದೂರಿನಂತೆ ದಿನಾಂಕ:-07-01-2018 ರಂದು ಬೆ 08.00 ಗಂಟೆಗೆ ಕೊಪ್ಪಳದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 27 ಜನ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ದೇವರ ದರ್ಶನಕ್ಕೆ ಬಂದಿದ್ದು, ದರ್ಶನ ಮುಗಿಸಿ ರಾತ್ರಿ 08.00 ಗಂಟೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಸಾಕೇತ ವಸತಿ ಗೃಹದಲ್ಲಿ ಉಳಕೊಂಡಿದ್ದು ದಿನಾಂಕ 08-01-2018 ರಂದು 01.00 ಗಂಟೆ ಸಮಯಕ್ಕೆ ಜೊತೆಯಲ್ಲಿದ್ದ ದೊಡ್ಡಯ್ಯ ವಸ್ತ್ರದ ಪ್ರಾಯ 65 ವರ್ಷ ಎಂಬವರು ಆಸ್ವಸ್ಥರಾಗಿ ವಾಂತಿ ಮಾಡಿದವರನ್ನು 108 ಅಂಬ್ಯುಲೆನ್ಸ್ ನಲ್ಲಿ ಫಿರ್ಯಾಧಿದಾರರು ಇತರರು ಸೇರಿ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಬೆಳ್ತಂಗಡಿಗೆ ಕರೆದುಕೊಂಡು ಹೋದಾಗ ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಯು.ಡಿ.ಆರ್ ನಂ: 03/2018 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

Leave a Reply