Daily Crime Reports as on 08/01/2018 at 18:00 Hrs

Home / Daily Information / Daily Crime Reports as on 08/01/2018 at 18:00 Hrs

ಅಪಘಾತ ಪ್ರಕರಣ: ೦1

  • ಕಡಬ ಪೊಲೀಸ್ ಠಾಣೆಪಿರ್ಯಾದಿದಾರರಾದ ಯಂ. ಜಿ ಸತ್ಯನಾರಾಯಣ ಪ್ರಾಯ: 55 ವರ್ಷ ತಂದೆ : ಯಂ. ಎಸ್. ಗೋಪಾಲಕೃಷ್ಣ ವಾಸ : ಮೊಗ್ರಿ ದೊಡ್ಡ ಮನೆ, ಗುತ್ತಿಗಾರು ಗ್ರಾಮ,ಸುಳ್ಯ ತಾಲೂಕು ರವರು ದಿನಾಂಕ 26.12.2017 ರಂದು ಬಂಟ್ವಾಳದಲ್ಲಿ ಪೂಜಾ ಕಾರ್ಯಕ್ರಮ ಮುಗಿಸಿ  ರಾತ್ರಿ ತನ್ನ ಬಾಬ್ತು ಕಾರು KA-21-N-3715 ನೇದರಲ್ಲಿ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ರಸ್ತೆಯಲ್ಲಿ ಕಡಬ ಕಡೆಗೆ ಬರುತ್ತಿರುವಾಗ ತನ್ನ ಹಿಂದಿನಿಂದ ಕಾರು KA-21-P-3576 ನೇದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಪಿರ್ಯಾದಿ ಕಾರನ್ನು ಓವರ್‌ಟೇಕ್ ಮಾಡಿ ಪುತ್ತೂರು ತಾಲೂಕು ಕಡಬ ಗ್ರಾಮದ ಕಡಬ ಸಂತೆಕಟ್ಟೆ ಎಂಬಲ್ಲಿ ರಸ್ತೆಯ ಎಡಬದಿಯಿಂದ ಬಲಬದಿಯ ಮಣ್ಣು ರಸ್ತೆಯ ಕಡೆಗೆ ಚಲಾಯಿಸಿ ಹತ್ತಿರದಲ್ಲಿದ್ದ ಕಟ್ಟಡಕ್ಕೆ ರಭಸವಾಗಿ ಡಿಕ್ಕಿಯುಂಟು ಮಾಡಿರುತ್ತಾರೆ. ಇದನ್ನು ನೋಡಿದ ಪಿರ್ಯಾದುದಾರರು ಕೂಡಲೇ ಹತ್ತಿರ ಹೋಗಿ ಕಾರಿನೊಳಗಿದ್ದವರನ್ನು ಹೊರತೆಗೆದು ಉಪಚರಿಸಿ ನೋಡಿದಾಗ ಸದ್ರಿಯವರು ತಮ್ಮ ಸಂಬಂಧಿಕರಾಗಿದ್ದು, ಗಾಯಗೊಂಡವರ ಪೈಕಿ ಪಿರ್ಯಾದಿ ತಂಗಿ ಸತ್ಯಾವತಿ ಹಾಗೂ ಸಂಧ್ಯಾಲಕ್ಷ್ಮಿ ಯಾಗಿದ್ದು ಇಬ್ಬರಿಗೂ ರಕ್ತಗಾಯವಾಗಿರುತ್ತದೆ. ಸದ್ರಿ ಕಾರನ್ನು ಸತ್ಯಾವತಿಯ ಮಗ ಶ್ರೀಶಾ ರವರು ಚಲಾಯಿಸುತ್ತಿದ್ದು, ಸದ್ರಿ ಅಪಘಾತ ರಾತ್ರಿ 11.40 ಗಂಟೆಯಾಗಿರುತ್ತದೆ. ಗಾಯಾಳುಗಳನ್ನು ಕಡಬ ಸರಕಾರಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಯ ಬಗ್ಗೆ 108 ಆಂಬ್ಯುಲೆನ್ಸ್‌ ನಲ್ಲಿ ಮಂಗಳೂರಿನ ಎ.ಜೆ ಆಸ್ಪತ್ರೆಗೆ ಹೋಗಿದ್ದು ಅಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಪಿರ್ಯಾದಿ ಗಾಯಾಳುಗಳ ಆರೈಕೆಯಲ್ಲಿದ್ದುದರಿಂದ ತಡವಾಗಿ ಠಾಣೆಗೆ ಬಂದು ದೂರು ನೀಡಿರುವುದಾಗಿದೆ,ಈ ಬಗ್ಗೆ ಕಡಬ ಪೊಲೀಸ್ ಠಾಣೆ  ಅ.ಕ್ರ. 185/2017 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

Leave a Reply