Daily Crime Reports as on 08/01/2018 at 10:00 Hrs

Home / Daily Information / Daily Crime Reports as on 08/01/2018 at 10:00 Hrs

ಅಪಘಾತ ಪ್ರಕರಣ: 2

  • ಕಡಬ ಪೊಲೀಸ್ ಠಾಣೆ: ಪಿರ್ಯಾದುದಾರರಾದ ಯಾಕುಬ್‌ ಪ್ರಾಯ 62 ವರ್ಷ, ತಂದೆ : ದಿ| ಇಬ್ರಾಹಿಂ, ವಾಸ : ಬಡ್ಡಮೆ ಮನೆ, ಕೆಮ್ಮಾರ, ಕೊಯಿಲ ಗ್ರಾಮ, ಪುತ್ತೂರು ತಾಲೂಕು ರವರು ದಿನಾಂಕ : 02.01.2018 ರಂದು ಮದ್ಯಾಹ್ನ ಬೀಡಿ ಸಂಗ್ರಹಿಸುವರೇ ಹಿರೇಬಂಡಾಡಿ ಗ್ರಾಮದ ಅಡೆಕ್ಕಲ್‌‌ಗೆ ಹೋಗಿದ್ದು ಬಳಿಕ ಬೀಡಿ ಸಂಗ್ರಹಿಸಿಕೊಂಡು ಸಂಜೆ ಅವರ ಬಾಬ್ತು M-80 ದ್ವಿಚಕ್ರ ವಾಹನ ಕೆಎ19-ಕೆ-3854 ನೇದರಲ್ಲಿ ಹಿರೇಬಂಡಾಡಿ-ಕೊಯಿಲ ಡಾಮಾರು ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಬರುತ್ತಿರುವಾಗ ಸಮಯ ಸಂಜೆ 6.00 ಗಂಟೆಗೆ ಪುತ್ತೂರು ತಾಲೂಕು ಕೊಯಿಲ ಗ್ರಾಮ, ಶಾಖೆಪುರ ಸಮೀಪ ಪಳ್ಳತ್ತೋಡಿ ಎಂಬಲ್ಲಿ ಪಿರ್ಯಾದುದಾರರ ಎದುರುಗಡೆಯಿಂದ ಕೊಯಿಲ ಕಡೆಯಿಂದ ಕೆಎ18-ಎ-3734 ನಂಬ್ರದ ಪಿಕ್ಅಪ್‌ ವಾಹನವೊಂದನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಡಾಮಾರು ರಸ್ತೆಯ ತೀರಾ ಬಲ ಬದಿಗೆ ಬಂದು ಪಿರ್ಯಾದುದಾರರ ದ್ವಿಚಕ್ರ ವಾಹನಕ್ಕೆ ರಭಸವಾಗಿ ಢಿಕ್ಕಿಯುಂಟು ಮಾಡಿರುವುದರಿಂದ ಪಿರ್ಯಾದುದಾರರು ದ್ವಿಚಕ್ರ ವಾಹನ ಸಮೇತ ಡಾಮಾರು ರಸ್ತೆಗೆ ಬಿದ್ದು ಗಾಯಗೊಂಡಿದ್ದವರನ್ನು ಸದ್ರಿ ರಸ್ತೆಯಲ್ಲಿ ಹೋಗುತ್ತಿದ್ದ ಇತರ ವಾಹನದ ಪ್ರಯಾಣಿಕರು ಉಪಚರಿಸಿದ್ದು ಬಳಿಕ ಇಕ್ಬಾಲ್‌ ಎಂಬವರು ಚಿಕಿತ್ಸೆ ಬಗ್ಗೆ ಪಿರ್ಯಾದುದರರನ್ನು ಪುತ್ತೂರು ಸಿಟಿ ಆಸ್ಪತ್ರೆಗೆ ಕರೆತಂದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ಚಿಕಿತ್ಸೆ ನೀಡಿ ಒಳರೋಗಿಯನ್ನಾಗಿ ದಾಖಲು ಮಾಡಿಕೊಂಡಿರುವುದಾಗಿದೆ.ಈ ಬಗ್ಗೆ ಕಡಬ ಪೊಲೀಸ್‌‌‌ ಠಾಣಾ ಅ.ಕ್ರ 03/2018 ಕಲಂ : 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ವಿಟ್ಲ ಪೊಲೀಸ್ ಠಾಣೆ: ದಿನಾಂಕ: 30.12.2017 ರಂದು ಸಂಜೆ ಸುಮಾರು 7.15 ಗಂಟೆ ಸಮಯಕ್ಕೆ ಬಂಟ್ವಾಳ ತಾಲೂಕು ವಿಟ್ಲ ಕಸಬ ಗ್ರಾಮದ ವಿಟ್ಲ ಚರ್ಚ್‌ ಬಳಿ ವಿಟ್ಲ-ಸಾಲೆತ್ತೂರು ರಸ್ತೆಯ ಬದಿಯಲ್ಲಿ  ವಿಟ್ಲದಿಂದ ಮನೆಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಅಂದರೆ ವಿಟ್ಲ ಕಡೆಯಿಂದ ಸಾಲೆತ್ತೂರು ಕಡೆಗೆ ಮೋಟಾರು ಸೈಕಲ್‌ ನಂ ಕೆ.ಎ.19.ಇಇ.4752 ನೇದನ್ನು ಸವಾರ ಮಹಮ್ಮದ್‌ ರಪೀಕ್‌ರವರು ಅಜಾಗರುಕತೆ ಮತ್ತು ದುಡುಕುತನದಿಂದ ಸವಾರಿ ಮಾಡಕೊಂಡು ಬಂದು ಡಿಕ್ಕಿ ಹೊಡೆದುದರಿಂದ ಪಳ್ಳಿಕುಂಞರವರಿಗೆ ಬಲಕಾಲ ಪಾದಕ್ಕೆ ರಕ್ತಗಾಯವಾಗಿದ್ದು ಚಿಕಿತ್ಸೆ ಬಗ್ಗೆ  ಮಂಗಳೂರು ಹೈಲಾಂಡ್‌ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಪಿರ್ಯಾದಿದಾರರಾದ ಶ್ರೀಮತಿಹಾಜಿರ ಪ್ರಾಯ(32),ಗಂಡ: ಸುಲೈಮಾನ್‌, ವಾಸ: ಮಾರ್ನೆಮಿಗುಡ್ಡೆ ಮನೆ, ಗಾಂಧಿನಗರ, ವಿಟ್ಲ ಕಸಬಾ ಗ್ರಾಮ, ಬಂಟ್ವಾಳ ತಾಲೂಕು ರವರು  ಗಾಯಾಳುವಿನ ಆರೈಕಿಯಲ್ಲಿದ್ದದರಿಂದ ತಡವಾಗಿ ಬಂದು  ಪಿರ್ಯಾದಿಯನ್ನು ನೀಡಿರುವುದಾಗಿದೆ.ಈ ಬಗ್ಗೆ ವಿಟ್ಲ ಠಾಣಾ ಅಕ್ರ 02/2018 ಕಲಂ 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಾಣೆ  ಪ್ರಕರಣ: 1

  • ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಸೌಧತ್ ಪ್ರಾಯ 3೦ ಗಂಡ:ಮಹಮ್ಮದ್ ಇಕ್ಬಾಲ್ ವಾಸ:ಮೂರುಗೋಳಿ ಮನೆ ಬಾರ್ಯ ಗ್ರಾಮ  ಬೆಳ್ತಂಗಡಿ ತಾಲೂಕು ರವರ ಗಂಡ ಮಹಮ್ಮದ್‌ ಇಕ್ಬಾಲ್‌ ಪ್ರಾಯ 35 ವರ್ಷ ಎಂಬಾತನು ದಿನಾಂಕ:08-01-2016 ರಂದು ಬೆಳ್ತಂಗಡಿ ತಾಲೂಕು ಬಾರ್ಯ ಗ್ರಾಮದ ಮೂರಗೋಳಿಯಿಂದ ಲಾರಿಯಲ್ಲಿ ಚಾಲಕರಾಗಿ ಉಡುಪಿಗೆ ಹೋಗಿದ್ದು. ಅಲ್ಲಿಂದ ಪಿರ್ಯಾಧಿದಾರರಿಗೆ ಫೋನ್‌ ಮೂಲಕ ಕರೆ ಮಾಡಿ 01 ತಿಂಗಳೊಳಗಾಗಿ ಮನೆಗೆ ಬರುತ್ತೆನೆಂದು ತಿಳಿಸಿದವರು ಈವರೆಗೂ ಫೋನ್‌ ಕರೆ ಮಾಡದೆ ಮನೆಗೂ ಬಾರದೆ, ಸಂಬಂಧಿಕರ ಮನೆಗೂ ಹೋಗದೆ ಇದ್ದು. ಇವರನ್ನು ಸಂಬಂದಿಕರ ಮನೆ, ಹಾಗೂ ಪರಿಚಯದವರ ಮನೆ ಮತ್ತು ಇತರ ಕಡೆಗಳಲ್ಲಿ ಹುಡುಕಾಡಿದ್ದು. ಈ ವರೆಗೆ ಪತ್ತೆಯಾಗಿರುವುದಿಲ್ಲ.ಈ ಬಗ್ಗೆ ಉಪ್ಪಿನಂಗಡಿ ಠಾಣಾ ಅ.ಕ್ರ 01/2018 ಕಲಂ:ಮನುಷ್ಯ ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

Leave a Reply