Daily Crime Reports as on 07/10/2017 at 10:00 Hrs

Home / Daily Information / Daily Crime Reports as on 07/10/2017 at 10:00 Hrs

ಜೀವ ಬೆದರಿಕೆ ಪ್ರಕರಣ: 1

  • ಕಡಬ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀ ಮೊಹಮ್ಮದ್ ಅನ್ಸಾರ್, ಪ್ರಾಯ: 27 ವರ್ಷ, ತಂದೆ: ಅಬ್ದುಲ್ ಖಾದರ್, ವಾಸ: ಅಂಡೆತಡ್ಕ ಮನೆ, ಇಳಂತಿಲ ಗ್ರಾಮ, ಪುತ್ತೂರು ತಾಲೂಕು ರವರು ಮತ್ತು ತನ್ನ ತಂದೆ ಹಾಗೂ ಕೆಲಸದವರೊಂದಿಗೆ ದಿನಾಂಕ 5.10.2017 ರಂದು ಪುತ್ತೂರು ತಾಲೂಕಿನ ಬಂಟ್ರ ಗ್ರಾಮದ ಮರ್ಧಾಳ ಎಂಬಲ್ಲಿನ ಮೀನು ಮಾರುಕಟ್ಟೆಯಲ್ಲಿ ಮೀನು ವ್ಯಾಪಾರ ಮಾಡುತ್ತಿದ್ದಾಗ, ಸದ್ರಿಯವರ ಪಕ್ಕದ ಮೀನು ಮಾರುಕಟ್ಟೆಯಲ್ಲಿ ಮೀನು ಮಾರಾಟ ನಡೆಸುತ್ತಿದ್ದ ಶರೀಫ್  ಮತ್ತು  ಅವರ ತಂದೆ ಅಬ್ದುಲ್ ಖಾದರ್ ಎಂಬವರುಗಳು 11.00 ಗಂಟೆ ಸಮಯಕ್ಕೆ ಮೀನು ಮಾರಾಟ ಮಾಡಿಕೊಂಡಿದ್ದ ಫಿರ್ಯಾಧಿದಾರರನ್ನು ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ ಆರೋಪಿತರ ಪೈಕಿ ಶರೀಫ ನು ಕೈಯಿಂದ ಫಿರ್ಯಾಧಿದಾರರ ಬೆನ್ನಿಗೆ ಮತ್ತು ಕೆನ್ನೆಗೆ ಹೊಡೆದು ಕಾಲಿನಿಂದ ತುಳಿಯುತ್ತಿರುವಾಗ ಅಬ್ದುಲ್ ಖಾದರ್ ನು ಕಲ್ಲಿನಿಂದ ಫಿರ್ಯಾದಿಯ ತಲೆಗೆ ಹೊಡೆಯುತ್ತಿರುವುದನ್ನು ಕಂಡು ಜಗಳ ಬಿಡಿಸಲು ಇರ್ಷಾದ್, ಮುನಾಝ್ ಬರುತ್ತಿರುವಾಗ ನೀವು ಮೀನು ಮಾರುಕಟ್ಟೆಯಲ್ಲಿ ಮೀನು ಮಾರಿದರೆ ಸಾಯಿಸುವುದಾಗಿಬೆದರಿಕೆ ಹಾಕಿ ಹೊರಟು ಹೋಗಿರುತ್ತಾರೆ, ನಂತರ ಚಿಕಿತ್ಸೆ ಬಗ್ಗೆ ಪುತ್ತೂರು ಮಹಾವೀರ ಮೆಡಿಕಲ್ ಸೆಂಟರ್ ಗೆ ಕರೆದುಕೊಂಡು ಬಂದಲ್ಲಿ ಅಲ್ಲಿನ  ವೈಧ್ಯರು ಫಿರ್ಯಾದಿದಾರರನ್ನು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ.ಈ ಬಗ್ಗೆ ಕಡಬ ಠಾಣಾ ಅ.ಕ್ರ 114/2017 ಕಲಂ: 341, 504, 323, 324, 506 ಜೊತೆಗೆ 34 ಐ.ಪಿ.ಸಿ.ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು  ಪ್ರಕರಣ: 1

  • ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಮುನಿರಾಜು ಪ್ರಾಯ: 29 ವರ್ಷ ತಂದೆ: ಗಂಗ ಕದರಯ್ಯ, ವಾಸ: ಬೆಳಗುಂಬ ಮನೆ, ಕಸಬಾ ಹೋಬಳಿ, ಮಾಗಡಿ ತಾಲೂಕು, ರಾಮನಗರ ಜಿಲ್ಲೆ ಎಂಬವರು ದಿನಾಂಕ:01-10-2017 ರಂದು ಕೆ ಎ 44 ಎಂ.2 ಟಾಟಾ ಸುಮಾ ವಾಹನದಲ್ಲಿ ಯಾತ್ರಾರ್ಥಿಯಾಗಿ ಶ್ರೀ ಧರ್ಮಸ್ಥಳಕ್ಕೆ ದಿನಾಂಕ: 04-10-2017 ರಂದು ರಾತ್ರಿ 10:00 ಗಂಟೆಗೆ ಧರ್ಮಸ್ಥಳಕ್ಕೆ ಬಂದಿದ್ದು, ಟಾಟಾ ಸುಮಾವನ್ನು ಧರ್ಮಸ್ಥಳದ ಗಂಗೋತ್ರಿ ವಸತಿ ಗೃಹದ ಬಳಿ ಇರುವ ಪಾರ್ಕಿಂಗ್ ಸ್ಥಳದಲ್ಲಿ  ನಿಲುಗಡೆ ಮಾಡಿ ಗಂಗೋತ್ರಿ ವಸತಿ ಗೃಹದಲ್ಲಿ ಉಳಕೊಂಡು ದಿನಾಂಕ: 05-10-2017 ರಂದು ಬೆಳಿಗ್ಗೆ 07:00 ಗಂಟೆಗೆ  ಪಾರ್ಕಿಂಗ್ ಸ್ಥಳಕ್ಕೆ ನಿಲುಗಡೆ ಮಾಡಿದ ಸ್ಥಳದಲ್ಲಿ ನೋಡಿದಾಗ ವಾಹನವು ಕಂಡು ಬರಲಿಲ್ಲ. ನಂತರ ಸದ್ರಿ ದೇವಸ್ಥಾನದ ಪರಿಸರ ಗಳಲ್ಲಿ ಹುಡುಕಾಡಿದಲ್ಲಿ  ವಾಹನವು ಪತ್ತೆಯಾಗಿರುವುದಿಲ್ಲ. ದಿನಾಂಕ: 04-10-2017 ರಂದು ರಾತ್ರಿ 10:00 ಗಂಟೆಯಿಂದ ದಿನಾಂಕ:05-10-2017 ರಂದು ಬೆಳಿಗ್ಗೆ 07:00 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ಕಳವು ಗೈದಿರುವುದಾಗಿದೆ.ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ 158/2017 ಕಲಂ:379 ಭಾ.ದಂ.ಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 2

  • ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಸುನಿಲ್ ಕುಮಾರ್ ಪ್ರಾಯ 42 ವರ್ಷ ತಂದೆ: ಶಿವರಾಮ ನಾಯರ್ ಕಾವುಗಲ್ ಮನೆ, ಕುಪೋಲ್ ಪೆರಿಂಗಾಮ್ ಗ್ರಾಮ ತಳಿಪರಬು ತಾಲೂಕು ಕಣ್ಣೂರು ಕೇರಳ ಎಂಬವರ ಸುನಿಲ್ ಕುಮಾರ್ ಪ್ರಾಯ 42 ವರ್ಷ ತಂದೆ: ಶಿವರಾಮ ನಾಯರ್ ಕಾವುಗಲ್ ಮನೆ, ಕುಪೋಲ್ ಪೆರಿಂಗಾಮ್ ಗ್ರಾಮ ತಳಿಪರಬು ತಾಲೂಕು ಕಣ್ಣೂರು ಕೇರಳ ಜಿಲ್ಲೆ ರವರ ಅಣ್ಣ ವಿನೋದ್ ಕೆ. ರವರು ಅಗಸ್ಟ್ ತಿಂಗಳಿನಿಂದ ಪುತ್ತೂರು ತಾಲೂಕು ಕುರಿಯ ಗ್ರಾಮದ ಡಮ್ಮಲೆ ಗೋಪಾಲಕೃಷ್ಣ ಜೋಯಿಸರ ಬಾಬ್ತು ರಬ್ಬರ್ ತೋಟದಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡಲು ಬಂದಿದ್ದು, ದಿನಾಂಕ 06.10.2017 ರಂದು ಬೆಳಿಗ್ಗೆ 11.30 ಗಂಟೆಗೆ  ರಬ್ಬರ್ ತೋಟವನ್ನು ಲೀಸಿಗೆ ಪಡೆದುಕೊಂಡಿರುವ ಶಾಜು ಎಂಬವರು ಪಿರ್ಯಾದಿದಾರರ ಗೆಳೆಯ ವಿನೋದ್ ಎಂಬವರಿಗೆ ಕರೆ ಮಾಡಿ ಪಿರ್ಯಾದಿದಾರರ ಅಣ್ಣ ವಿನೋದ್ ತಾನು ಉಳಕೊಳ್ಳುವ ರೂಮಿನಲ್ಲಿ ಮಲಗಿದ್ವರು ಎದ್ದೇಳದೆ ಇದ್ದು ಒಳಗಡೆ ಚಿಲಕ ಹಾಕಿಕೊಂಡಿರುವುದಾಗಿ ಬೇಗ ಬರುವಂತೆ ತಿಳಿಸಿದ ಮೇರೆಗೆ ಪಿರ್ಯಾದಿದಾರರು ಬಂದು ಬಾಗಿಲನ್ನು ಒಡೆದು ಒಳಗೆ ಹೋಗಿ ನೋಡಲಾಗಿ ವಿನೋದ್ ಮಲಗಿದ್ದಲ್ಲೇ ಹೊರಳಾಡಿ ಕವುಚಿ ಬಿದ್ದು ಮೃತಪಟ್ಟಿದ್ದು.ಈ ಬಗ್ಗೆ ಪುತ್ತೂರು ಗ್ರಾಮಾಂತರ  ಪೊಲೀಸ್ ಠಾಣಾ ಯು ಡಿ ಆರ್ 28/17 ಕಲಂ 174 ಸಿ ಆರ್‌ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಲೋಕೇಶ್ ಪೂಜಾರಿ ಪ್ರಾಯ; 39 ವರ್ಷ ತಂದೆ; ದಿ; ಲಿಂಗಪ್ಪ ಪೂಜಾರಿ ವಾಸ; ಶಿವಾಜಿನಗರ ಮನೆ ಬೆಂಜನಪದವು ಅಮ್ಮುಂಜೆ ಗ್ರಾಮ ಬಂಟ್ವಾಳ ತಾಲೂಕು ಎಂಬವರಿಗೆ ದಿನಾಂಕ 05-10-2017 ರಂದು ರಾತ್ರಿ 7.30 ಗಂಟೆಗೆ ಹೊಳೆಬದಿಯ ಸತ್ಯ ಪ್ರಸಾದ್ ರವರು ಪೋನು ಮಾಡಿ ಅಣ್ಣ ಅಶೋಕನು ಮನೆಯ ಒಳಗೆ ಕೋಣೆಯಲ್ಲಿ ಮರದ ಅಡ್ಡಕ್ಕೆ ಬೈರಾಸಿನಿಂದ ನೇಣು ಬಿಗಿದುಕೊಂಡು ಆತ್ಮಹ್ಯತ್ಯೆ ಮಾಡಿಕೊಂಡಿರುತ್ತಾರೆ ಎಂದು ತಿಳಿಸಿದ್ದು, ಪಿರ್ಯಾದಿದಾರರು  ಕೂಡಲೇ ಮನೆಯಿಂದ ಅಮ್ಮುಂಜೆ ಹೊಳೆಬದಿಗೆ ಅಣ್ಣನ ಮನೆಗೆ ಹೋಗಿ ನೋಡಿದಾಗ  ಮನೆಯ ಒಳಗಿನ ಕೋಣೆಯಲ್ಲಿ ಬೈರಾಸಿನಿಂದ ತಾಳೆ ಮರದ ಅಡ್ಡಕ್ಕೆಬೈರಾಸನ್ನು ಕಟ್ಟಿ ಅದರ  ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದು,ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಯು.ಡಿ.ಆರ್ ನಂಬ್ರ: 49/2017 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.