Daily Crime Reports as on 07/12/2017 at 10:00 Hrs

Home / Daily Information / Daily Crime Reports as on 07/12/2017 at 10:00 Hrs

ಕಳವು ಪ್ರಕರಣ: 1

  • ವಿಟ್ಲ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಮಹಮ್ಮದ್ ಕೆ (30) ತಂದೆ: ಹಸೈನಾರ್ ವಾಸ: ಉಕ್ಕುಡ ದರ್ಬೆ ಮನೆ  ವಿಟ್ಲ ಕಸಬಾ ಗ್ರಾಮ ಬಂಟ್ವಾಳ ತಾಲೂಕು ಎಂಬವರು ತನ್ನ ಮನೆಯವರೊಂದಿಗೆ ದಿನಾಂಕ 06.12.2017 ರಂದು ಸಂಜೆ 5.30 ಗಂಟೆಗೆ ಮನೆಗೆ ಬೀಗ ಹಾಕಿ ಸಂಬಂದಿಕರ ಮನೆಗೆ ಮದುವೆಗೆ ಹೋದವರು ವಾಪಾಸ್ಸು ಮನೆಗೆ ದಿನಾಂಕ 07.12.2017 ರಂದು ರಾತ್ರಿ 12.30 ಗಂಟೆಗೆ  ಬಂದು ನೋಡಲಾಗಿ ಮನೆಯ ಹಿಂದಿನ ಬಾಗಿಲನ್ನು ಒಡೆದು  ಮನೆಯ ಅಕ್ಕಿ ಡಬ್ಬದಲ್ಲಿ ಅಡಗಿಸಿಟ್ಟ  ಸುಮಾರು 23 ಪವನ್ ತೂಕದ ಚಿನ್ನದ ಸರ,12 ಪವನ್ ತೂಕದ  ಚಿನ್ನದ ಬಳೆಗಳು ,ಸುಮಾರು 7 ವರೆ  ಪವನ್ ತೂಕದ ಸೊಂಟದ ಪಟ್ಟಿ  ಮತ್ತು 1 ಪವನ್ ತೂಕದ  ಮಣಿ ಸರ ಕಳವಾಗಿದ್ದು ಇದರ ಒಟ್ಟು  ಮೌಲ್ಯ  1050000/- ಲಕ್ಷ ರೂಪಾಯಿಗಳು  ಆಗಿರುತ್ತದೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅಕ್ರ 256/2017 ಕಲಂ 454, 457, 380ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 1

  • ಧರ್ಮಸ್ಥಳ ಪೊಲೀಸ್ ಠಾಣೆ : ದಿನಾಂಕ: 04/12/2017 ರಂದು 19.30 ಗಂಟೆಗೆ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ  ಶ್ರೀ ಕ್ಷೇತ್ರ ಧರ್ಮಸ್ಥಳದ ಬಾಬ್ತು  ಶರಾವತಿ ವಸತಿ ಗೃಹದಲ್ಲಿ 343 ನಂಬ್ರದ ಕೊಠಡಿಯಲ್ಲಿ ಬಾಡಿಗೆಗೆ ಪಡೆದಿದ್ದ ಉಮಾಶಂಕರ್ ಎಂಬವರು ದಿನಾಂಕ 06-12-2017 ರಂದು 06.00 ಗಂಟೆಗೆ ಪಿರ್ಯಾದಿದಾರರಾದ ಕೆ.ಮಹಾಲಿಂಗ ಭಟ್  ಪ್ರಾಯ: 63 ವರ್ಷ, ತಂದೆ: ದಿ.ಎಸ್.ಕೆ.ವೆಂಕಟರಮಣ ಭಟ್, ವಾಸ:ಶರಾವತಿ ವಸತಿ ಗೃಹ, ಧರ್ಮಸ್ಥಳ ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರು  ನೋಡುವಾಗ ಕೊಠಡಿಯಲ್ಲಿ ಮೃತ ಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದು ಮೃತರು ಮಲಗಿದ್ದಲ್ಲೆ  ಹೃದಯಾಘಾತದಿಂದ ಅಥವಾ ಇನ್ನಾವುದೇ ಕಾರಣದಿಂದ ಮೃತಪಟ್ಟಿರಬಹುದು.ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆ  ಯು.ಡಿ.ಆರ್ ನಂಬ್ರ 55/2017 ಕಲಂ: 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

Leave a Reply