Daily Crime Reports as on 06/12/2017 at 10:00 Hrs

Home / Daily Information / Daily Crime Reports as on 06/12/2017 at 10:00 Hrs

ಕೊಲೆ  ಪ್ರಕರಣ: 1

  • ಪುತ್ತೂರು ನಗರ ಪೊಲೀಸ್ ಠಾಣೆ : ದಿನಾಂಕ 05-12-2017 ರಂದು ಪಿರ್ಯಾದಿದಾರರಾದ ಇ .ರಶೀದ್ [29] ತಂದೆ ಸೂಫಿ ಬ್ಯಾರಿ ವಾಸ ಇಡಿಂಜಿಲ ಮನೆ ಕುಟ್ಟಿನೋಪಿನಡ್ಕ ಒಳಮೊಗ್ರು ಗ್ರಾಮ ಪುತ್ತೂರು ತಾಲೂಕುರವರಿಗೆ, ಶಫೀಕ್ ಎಂ.ಎಂ, ಮುಸ್ತಾಪರವರುಗಳ ಪರವಾಗಿ ಸಾಕ್ಷಿ ಸುಡಿಯುವರೇ ಪುತ್ತೂರು ನ್ಯಾಯಾಲಯಕ್ಕೆ ಬಂದಿದ್ದ ಸಮಯ 12-00 ಗಂಟೆಗೆ ಆರೋಪಿಗಳಾದ ಸಲಾಂ, ರಫೀಕ್, ಎ.ಆರ್ ಆಶಿಕ್  ರವರು ಕೋರ್ಟಿನ ಗೇಟ್ ಬಳಿ ಪಿರ್ಯಾದಿದಾರರನ್ನು ತೆಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದು, ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ಅ.ಕ್ರ: 193/2017 ಕಲಂ: 341,504,506 ಜೊತೆಗೆ 34 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಹಲ್ಲೆ ಪ್ರಕರಣ: 1

  • ಸುಳ್ಯ ಪೊಲೀಸ್ ಠಾಣೆ : ದಿನಾಂಕ 04.12.2017 ರಂದು ಪಿರ್ಯಾದುದಾರರಾದ ಯೋಗೀಶ್ ಪಿ.ಡಿ  ಪ್ರಾಯ:31 ವರ್ಷ ತಂದೆ:ದೇವಪ್ಪ ಗೌಡ  ವಾಸ: ದೇವರಡ್ಕ ಮನೆ ಮಂಡೆಕೋಲು  ಗ್ರಾಮ,ಸುಳ್ಯ ತಾಲೂಕು ಎಂಬವರು ಹಾಗೂ ಪ್ರಭಾಕರ ಎಂಬವರು  ಸುಳ್ಯ  ತಾಲೂಕು ಮಂಡೆಕೋಲು ಗ್ರಾಮದ ಕನ್ಯಾನ ಪ್ರಯಾಣಿಕರ ತಂಗುದಾಣ ಕಟ್ಟಡದಲ್ಲಿ ಇದ್ದ ಸಮಯ ಸುಮಾರು 20.30 ಗಂಟೆಗೆ ಆರೋಪಿಗಳಾದ ಕಿಶನ್ ಕುಮಾರ್, ಅಭಿಲಾಷ್ ಮನೋಜ್ ಮತ್ತು ಚೆಕ್ಕು @ ಪ್ರದೀಶ ಎಂಬವರು ಎರಡು ಮೋಟಾರು ಸೈಕಲ್ ಗಳಲ್ಲಿ ಬಂದು ತಂಗುದಾಣದ ಎದುರು ರಾಜಕೀಯ ಪಕ್ಷವೊಂದರ ಬಾವುಟ ತೆಗೆಯುವ ವಿಚಾರಕ್ಕೆ ಸಂಬಂಧಿಸಿದಂತೆ ವಾಗ್ವಾದ ನಡೆದು ಆರೋಪಿಗಳು ಏಕಾಏಕಿ ಪಿರ್ಯಾದುದಾರರಿಗೂ ಜತೆಗಿದ್ದ ಪ್ರಭಾಕರ ರವರಿಗೂ ಯದ್ವಾ ತದ್ವಾ ಕೈಗಳಿಂದ ಹೊಡೆದಿದಲ್ಲದೇ ಪ್ರಭಾಕರಿಗೆ ಅಭಿಲಾಷ್ ಎಂಬಾತನು ದೊಣ್ಣೆಯಿಂದ ಹೊಡೆದಿರುವುದಾಗಿದೆ.ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆ. ಅ.ಕ್ರ 176/17 ಕಲಂ :323,324ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.