Daily Crime Reports as on 06/01/2018 at 10:00 Hrs

Home / Daily Information / Daily Crime Reports as on 06/01/2018 at 10:00 Hrs

ಅಪಘಾತ ಪ್ರಕರಣ: 1

  • ಪುತ್ತೂರು ಸಂಚಾರ ಪೊಲೀಸ್ ಠಾಣೆ. ಪಿರ್ಯಾದಿದಾರರಾದ. ಕೆ.ಸಿ ಈಶ್ವರ ಪ್ರಸಾದ್‌ (50) ತಂದೆ ದಿ|| ವೆಂಕಪ್ಪಯ್ಯ ವಾಸ: ಪೌರ್ಣಮಿ ಮನೆ ಮುಂಡೂರು ಗ್ರಾಮ ಪುತ್ತೂರು ತಾಲೂಕು ನೀಡಿದ ದೂರಿನಂತೆ  ಈ ಬಗ್ಗೆ ದಿನಾಂಕ 04-01-2017 ರಂದು 19-45 ಗಂಟೆಗೆ ಆರೋಪಿ ಅಟೋ ರಿಕ್ಷಾ ಚಾಲಕ ಸತೀಶ್‌ ಕುಮಾರ್‌ ಎಂಬವರು  ಅಟೋ ರಿಕ್ಷಾ ನೋಂದಣಿ ನಂಬ್ರ KA-21-B-1886 ನೇಯದನ್ನು ಮಾಣಿ-ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಿನೆಟ್‌ ಜಂಕ್ಷನ್‌  ಕಡೆಯಿಂದ ತೆಂಕಿಲ ಕ್ರಾಸ್‌ ಕಡೆಗೆ ಚಲಾಯಿಸಿಕೊಂಡು ಹೋಗಿ ಪುತ್ತೂರು ತಾಲೂಕು ಪುತ್ತೂರು ಕಸ್ಬಾ ಗ್ರಾಮದ ತೆಂಕಿಲಾ ಕ್ರಾಸ್‌ ಬಳಿ ಯಾವುದೇ ಸೂಚನೆ ನೀಡದೆ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತಪ್ಪು ಬದಿಗೆ ಚಲಾಯಿಸಿ, ಅಶ್ವಿನಿ ಸರ್ಕಲ್‌ ಕಡೆಯಿಂದ ಲಿನೆಟ್‌ ಜಂಕ್ಷನ್‌ ಕಡೆಗೆ ಪಿರ್ಯಾದಿದಾರರ ಮಗ ವೆಂಕಟೇಶ್‌ ಪವನ್‌ ರವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸೈಕಲ್‌ ನೋಂದಣಿ ನಂಬ್ರ KA-21-U-9871 ಡಿಕ್ಕಿ ಹೊಡೆದ ಪರಿಣಾಮ ಮೋಟಾರ್‌ ಸೈಕಲ್‌ ಸವಾರ ರಸ್ತೆಗೆ ಎಸೆಯಲ್ಪಟ್ಟು, ಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ. ಆರೋಪಿ ರಿಕ್ಷಾ ಚಾಲಕ ರಾಜಿಯಲ್ಲಿ ಇತ್ಯಾರ್ಥ ಮಾಡಿಕೊಳ್ಳುವ ಎಂದು ಹೇಳಿದ್ದು ಈಗ ಖರ್ಚು ಜಾಸ್ತಿಯಾಗುದೆಂದು ತಿಳಿದು ರಾಜಿಗೆ ನಿರಾಕರಿಸಿರುತ್ತಾರೆ ದೂರು ನೀಡಲು ತಡವಾಗಿರುತ್ತದೆ. ಎಂಬಿತ್ಯಾದಿ ಪಿರ್ಯಾದಿಯ ಸಾರಾಂಶ.  ಪುತ್ತೂರು ಸಂಚಾರ ಠಾಣೆ  ಅ.ಕ್ರ:  04/2018 ಕಲಂ:  279 337 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರೆ ಪ್ರಕರಣ: 2

  • ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ. ಕಮಲೇಶ್‌ ಎಸ್‌.ಬಿ, ಪ್ರಾಯ: 30 ವರ್ಷ, ತಂದೆ: ವಸಂತ ಎಸ್‌.ಡಿ, ವಾಸ: ಸರ್ವೆದೋಳ ಮನೆ, ಸರ್ವೆ ಗ್ರಾಮ, ಪುತ್ತೂರು ತಾಲೂಕುರವರು ಮತ್ತು  ಊರಿನ ಸದಸ್ಯರು ಸೇರಿಕೊಂಡು ಸರ್ವೆ ಭಕ್ತಕೋಡಿ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವದ ಕಾರ್ಯಕ್ರಮದ ನಿಮಿತ್ತ ವಾಟ್ಸ್‌ಅಪ್‌ ಗ್ರೂಪ್‌ ಮಾಡಿಕೊಂಡಿದ್ದು, ಚಂದ್ರಶೇಖರ ಎಂಬವರೂ ಕೂಡಾ ಸದಸ್ಯರಾಗಿದ್ದು, ದಿನಾಂಕ 04.01.2018 ರಂದು ಚಂದ್ರಶೇಖರವರು ಅಸಂಬದ್ಧ ರೀತಿಯಲ್ಲಿ ವಾಟ್ಸ್‌ ಅಪ್‌ ಸಂದೇಶವನ್ನು ಕಳಹಿಸಿರುವುದರಿಂದ, ಪಿರ್ಯಾದಿದಾರರು ಆತನನ್ನು ಗ್ರೂಪ್‌ನಿಂದ ತೆಗೆದು ಹಾಕಿದ್ದು, ನಂತರ ರಾತ್ರಿ 8.23 ಗಂಟೆಗೆ ಚಂದ್ರಶೇಖರ ಕಡ್ಯ ಪಿರ್ಯಾದಿದಾರರಿಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ನಿನ್ನನ್ನು ಆ ಮೇಲೆ ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದು, ಈ ಬಗ್ಗೆ ಠಾಣಾ ಎನ್‌ಸಿ ನಂಬ್ರ 7/ ಪಿಟಿಎನ್/ ಪುಗ್ರಾ/2018 ದೂರು ಅರ್ಜಿ ನೋಂದಾಯಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ಪ್ರಕರಣ ದಾಖಲಿಸಿರುವುದಾಗಿದೆ ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಆ.ಕ್ರ 01/18  ಕಲಂ: 504, 506 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಶ್ರೀ ಪ್ರಸನ್ನ ಪೊಲೀಸ್ ಉಪನಿರೀಕ್ಷಕರು ಬಂಟ್ವಾಳ ಗ್ರಾಮಾಂತರ ಠಾಣೆ ರವರು   ದಿನಾಂಕ; ದಿನಾಂಕ;05.01.2018 ರಂದು ಪಿರ್ಯಾದಿದಾರರು ಸಿಬ್ಬಂದಿಗಳೊಂದಿಗೆ ಇಲಾಖಾ ವಾಹನದಲ್ಲಿ  ಠಾಣಾ ಸರಹದ್ದಿನಲ್ಲ  ವಿಶೇಷ ರೌಂಡ್ಸ್  ಕರ್ತವ್ಯದ ಸಮಯ ಸುಮಾರು16.30  ಗಂಟೆಗೆ ಸರಪಾಡಿ ಗ್ರಾಮದ ಸರಪಾಡಿ ನೇತ್ರಾವತಿ ನದಿ ಕಿನಾರೆಯಲ್ಲಿ ಒಂದು ಟಿಪ್ಪರ್ ನಿಂತು ಕೊಂಡಿರುವುದನ್ನು ಕಂಡು ಪಿರ್ಯಾದಿದಾರರು ಸದ್ರಿ ಸ್ಧಳಕ್ಕೆ ಹೋದಾಗ ಲಾರಿಯ ಪಕ್ಕದಲ್ಲಿದ್ದ ಇಬ್ಬರು ಪಿರ್ಯಾದಿದಾರರನ್ನು ಕಂಡು ಓಡಿ ಹೋಗಿದ್ದು ಸದ್ರಿ ಲಾರಿಯ ಹಿಂಬದಿಯನ್ನು ಪರಿಶೀಲಿಸಲಾಗಿ ಲಾರಿಯಲ್ಲಿ ಅರ್ಧ ಮರಳು ತುಂಬಿಸಿರುವುದು ಕಂಡು ಬಂದಿರುತ್ತದೆ. ಲಾರಿಯ ನೋಂದಾಣಿ ಸಂಖ್ಯೆ ಕೆಎ 19 AB 1438  ಸದ್ರಿ ಲಾರಿಯ ಚಾಲಕರು  ಹಾಗೂ ಮಾಲಕರು ಯಾವುದೇ ಪರವಾನಿಗೆ ಇಲ್ಲದೇ ಸರ್ಕಾರಕ್ಕೆ ರಾಜಸ್ವವನ್ನು ಪಾವತಿಸದೇ ಸರಪಾಡಿಯಲ್ಲಿ ನೇತ್ರಾವತಿ ನದಿಯಿಂದ ಮರಳನ್ನು ಕಳವು ಮಾಡಿಕೊಂಡು  ಹೋಗುತ್ತಿರುವುದು ನನಗೆ ದೃಢಪಟ್ಟಿರುವುದರಿಂದ ಪಂಚಾಯತುದಾರರ ಸಮಕ್ಷಮ ಎಲ್ಲಾ ಸ್ವತ್ತುಗಳನ್ನು ಮುಂದಿನ ಕ್ರಮ ಬಗ್ಗೆ ಸ್ವಾಧೀನಪಡಿಸಿಕೊಂಡು. ಮಾನ್ಯ ನ್ಯಾಯಾಲಯದ ಅನುಮತಿ ಪಡೆದು  ಪ್ರಕರಣ ದಾಖಲಿಸಿಕೊಳ್ಳಲು ಸರ್ಕಾರದ ಪರವಾಗಿ ಪಿರ್ಯಾದಿದಾರರೇ ವರದಿಯನ್ನು ನೀಡುತ್ತಿರುವುದಾಗಿ ಎಂಬಿತ್ಯಾದಿಯಾಗಿರುತ್ತದೆ. .ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ  ಅ.ಕ್ರ 03/2018ಕಲಂ: 3,36,42 KMMCRules, 4,4(1A),21(4),  MMRD & 379 IPC ಪ್ರಕರಣ ದಾಖಲಾಗಿರುತ್ತದೆ

ಅಸ್ವಾಭಾವಿಕ ಮರಣ ಪ್ರಕರಣ: 1

  • ವಿಟ್ಲ  ಪೊಲೀಸ್ ಠಾಣೆ : ಪಿರ್ಯಾದಿದಾರರಾದ. ಯನ್ ರವೀಂದ್ರ  ಮೂಲ್ಯ  (35) ತಂದೆ: ಯನ್ ಕೊರಗಪ್ಪ ಮೂಲ್ಯ ವಾಸ: ನಂದರ ಬೆಟ್ಟು  ಕನ್ಯಾನ ಗ್ರಾಮ ಬಂಟ್ವಾಳ ತಾಲೂಕು ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ ಪಿರ್ಯಾದುದಾರರ ಬಾವ ನಾರಾಯಣ ಕೂಲಾಲ್  (52) ಎಂಬವರು ದಿನಾಂಕ 05.01.2018 ರಂದು  ವಿಪರೀತ ಅಮಲು ಪದಾರ್ಥವನ್ನು ಸೇವಿಸಿದ್ದು ತನ್ನ ಮನೆಯಾದ ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ  ನಂದರಬೆಟ್ಟು ನೇರಳಕೋಡಿ ಮನೆಯಲ್ಲಿ ಒಬ್ಬರೆ ಇದ್ದು   ಪಿರ್ಯಾದುದಾರರ ಅಕ್ಕ ಪುಷ್ಪಲತ ರವರು ಮನೆಗೆ ಸಂಜೆ ಸುಮಾರು 5.00 ಗಂಟೆಗೆ ಬಂದು ನೋಡಲಾಗಿ ಚಾಪೆಯಲ್ಲಿ ಮಲಗಿದ್ದವರು  ಏಳದೇ ಇದ್ದು ಕೂಡಲೇ ಪಿರ್ಯಾದುದಾರರು ಬಂದು ಚಿಕಿತ್ಸೆಗೆಂದು ಅಂಬ್ಯುಲೇನ್ಸ್ ನಲ್ಲಿ ವಿಟ್ಲ ಆಸ್ಪತ್ರೆಗೆ ತಂದು ವೈದ್ಯರು ಪರೀಕ್ಷಿಸಿ  ಪಿರ್ಯಾದುದಾರರ ಬಾವ ನಾರಾಯಣ ಕುಲಾಲ್ ರವರು ಮೃತಪಟ್ಟಿರುವುದಾಗಿ ತಿಳಿಸಿದ್ದು  .ಈ ಬಗ್ಗೆ ವಿಟ್ಲ ಠಾಣಾ ಯು ಡಿ ಅರ್ ನಂಬ್ರ 02/2018  ಕಲಂ 174      ಸಿ ಅರ್ ಪಿಸಿ     ಯಂತೆ ಪ್ರಕರಣ ದಾಖಲಾಗಿರುತ್ತದೆ.

Leave a Reply