Daily Crime Reports as on 05/12/2017 at 10:00 Hrs

Home / Daily Information / Daily Crime Reports as on 05/12/2017 at 10:00 Hrs

ಅಪಘಾತ ಪ್ರಕರಣ: 3

  • ಉಪ್ಪಿನಂಗಡಿ ಪೊಲೀಸ್ ಠಾಣೆ: ಫಿರ್ಯಾಧಿದಾರರಾದ ರಮೇಶ್ ಪೂಜಾರಿ (67) ತಂದೆ:ದಿ||ಜನಾರ್ದನ ಪೋಜಾರಿ ವಾಸ:ಕುಶಾಲನಗರ ಮನೆ ಸಕಲೆಶಪುರ ಗ್ರಾಮ & ಅಂಚೆ ಹಾಸನ ಜಿಲ್ಲೆ ಎಂಬವರು ಕೋಲ್ಪೆಯ ಹಮೀದ್ ಎಂಬವರ ಬಾಬ್ತು ಲಾರಿ ನಂಬ್ರ ಕೆಎ-19-ಎಎ-7539ನೇದರಲ್ಲಿ ಲೋಡಿಂಗ್‌ ,ಅನ್‌ಲೋಡಿಂಗ್‌ ಕೆಲಸ ಮಾಡಿಕೊಂಡಿದ್ದು. ದಿನಾಂಕ:03-12-2017 ರಂದು ಕಲ್ಲುಗುಡ್ಡೆಯಿಂದ ಕಟ್ಟಿಗೆ ಲೋಡು ಮಾಡಿ ಮಂಗಳೂರು ಕಡೆಗೆ ಲಾರಿ ಚಾಲಕ ಅನ್ಸಿಫ್‌ ಎಂಬವರು ಚಲಾಯಿಸಿಕೊಂಡು ಬರುತ್ತಾ ಸಂಜೆ 5-30 ಗಂಟೆಗೆ ನೆಲ್ಯಾಡಿಗೆ ತಲುಪಿದಾಗ ಬೆಂಗಳೂರು ಕಡೆಗೆ ಹೋಗುತ್ತಿದ ಟ್ಯಾಂಕರನ್ನು  ಮಂಗಳೂರಿನಿಂದ  ಬೆಂಗಳೂರು ಕಡೆಗೆ ಹೋಗುತ್ತಿದ್ದ  ಕೆಎಸ್‌ಆರ್‌ಟಿಸಿ ಬಸ್ ನಂಬ್ರ ಕೆಎ-19-ಎಫ್‌  3337 ನೇಯದನ್ನು ಅದರ ಚಾಲಕ ಅತೀವೇಗ  ಹಾಗೂ ಅಜಾಗರೂಕತೆಯಿಂದ  ಚಲಾಯಿಸಿ ಟ್ಯಾಂಕರ್ ಒಂದನ್ನು ಒವರ್ ಟೆಕ್ ಮಾಡಿದ ಪರಿಣಾಮ ಪಿರ್ಯಾದಿದಾರರು ಹೋಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಲಾರಿ ಪಲ್ಟಿಯಾಗಿ ಲಾರಿಯ ಚಾಲಕ ಅನ್ಸಿಪ್ ರವರಿಗೆ ಸಣ್ಣಪುಟ್ಟ ಗಾಯ ಉಂಟಾಗಿರುವುದಲ್ಲದೆ ಪಿರ್ಯಾದಿದಾರರಿಗೆ ಭುಜಕ್ಕೆ, ಲಾರಿಯ ಕ್ಲಿನರ್ ಕರೀಂ ಸಾಹೇಬವರಿಗೆ ಸೊಂಟಕ್ಕೆ ನೋವು ಉಂಟಾಗಿದ್ದು  ಚಿಕಿತ್ಸೆ ಬಗ್ಗೆ ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ಒಳರೋಗಿ ದಾಖಲಾಗಿದ್ದು. ಈ ಬಗ್ಗೆ ಉಪ್ಪಿನಂಗಡಿ ಠಾಣಾ ಅ.ಕ್ರ 234/2017 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಫಿರ್ಯಾದುದಾರರಾದ ವೆಂಕಪ್ಪ ಪೂಜಾರಿ ಪ್ರಾಯ: 61 ವರ್ಷ, ಅರಬಿಗುಡ್ಡೆ ಮನೆ, ಬ ಕಸ್ಬಾ ಗ್ರಾಮ, ಬಂಟ್ವಾಳ ತಾಲೂಕು ಎಂಬವರು ದಿನಾಂಕ: 04-12-2017 ರಂದು ತನ್ನ ಬಾಬ್ತು KA 19 EQ 4499 ನೇ  ಸ್ಕೂಟರ್‌ನಲ್ಲಿ ಬಿ ಸಿ ರೋಡ್‌ನಿಂದ ಬಂಟ್ವಾಳ ಗೆಸ್ಟ್ ಹೌಸ್‌ಗೆ ಹೋಗುತ್ತಾ ಸುಮಾರು 14.40 ಗಂಟೆ ಸಮಯಕ್ಕೆ ಬಂಟ್ವಾಳ ತಾಲೂಕು ಬಿ ಕಸ್ಬಾ ಗ್ರಾಮದ ಮೆಸ್ಕಾಂ ಕಛೇರಿ ಎದುರು ತಲುಪಿದಾಗ ಫಿರ್ಯಾದುದಾರರ ಹಿಂದಿನಿಂದ ಓರ್ವ ಮೋಟಾರ್ ಸೈಕಲ್ ಸವಾರ ಮೋಟಾರ್ ಸೈಕಲನ್ನು  ಅತಿವೇಗ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಸ್ಕೂಟರ್‌ಗೆ ಢಿಕ್ಕಿ ಹೊಡೆಸಿ, ಅಪಘಾತಪಡಿಸಿದ್ದು, ಫಿರ್ಯಾದುದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಬಲಕಾಲಿನ ಪಾದಕ್ಕೆ, ಬಲ ಕೈ ಮೊಣಗಂಟಿಗೆ, ಬಲ ಅಂಗೈಗೆ, ಎಡಕೈ ಹೆಬ್ಬೆರಳಿಗೆ, ಹಣೆಗೆ ರಕ್ತಗಾಯವಾಗಿದ್ದು, ಮೋಟಾರ್ ಸೈಕಲ್ ಸವಾರ ಮೋಟಾರ್ ಸೈಕಲನ್ನು ಸ್ಥಳದಲ್ಲಿ ನಿಲ್ಲಿಸದೇ, ಫಿರ್ಯಾದಿಯನ್ನು ಆಸ್ಪತ್ರೆಗೂ ಸಾಗಿಸದೇ ಹೊರಟು ಹೋಗಿರುತ್ತಾರೆ.  ಗಾಯಾಳು ಫಿರ್ಯಾದಿ ಚಿಕಿತ್ಸೆ ಬಗ್ಗೆ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು,ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 180/2017 ಕಲಂ: 279, 337 ಐಪಿಸಿ ಮತ್ತು 134 a & b ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಉಮ್ಮರ್‌ ಫಾರೂಕ್‌ (28 ವ), ತಂದೆ: ಆದಂ, ವಾಸ: 7-331, ಮರಿಕೆ ಮನೆರಾಮನಗರ, ಉಪ್ಪಿನಂಗಡಿ ಗ್ರಾಮ, ಪುತ್ತೂರು ತಾಲೂಕು ಎಂಬವರ ದೂರಿನಂತೆ  ದಿನಾಂಕ 04-12-2017 ರಂದು 16.00 ಗಂಟೆ ಸಮಯಕ್ಕೆ ಆರೋಪಿ ಲಾರಿ ಚಾಲಕ ಲಾರಿ ನಂಬ್ರ AP-21-TX-7143 ನೇಯದನ್ನು ಮಂಗಳೂರು-ಬೆಂಗಳೂರು ರಾ.ಹೆ 75 ರಲ್ಲಿ ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿ ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಬೈಪಾಸ್‌ ರಸ್ತೆಯ ಉಲ್ಲಾಸ್ ಜಂಕ್ಷನ್‌ ಬಳಿ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿ, ಉಪ್ಪಿನಂಗಡಿ ಕಡೆಯಿಂದ ಪುತ್ತೂರು ಕಡೆಗೆ ಜಾನ್‌ ಫೆರ್ನಾಂಡಿಸ್‌ರವರು ಈರಪ್ಪ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಸವಾರಿ ಮಾಡಿಕೊಂಡು ಹೋಗುತ್ತಿದ್ದ ದ್ವಿ ಚಕ್ರ ವಾಹನ ನಂಬ್ರ KA-19-V-1522 ನೇಯದಕ್ಕೆ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ಸವಾರರಿಬ್ಬರೂ ರಸ್ತೆಗೆ ಬಿದ್ದು, ಈರಪ್ಪರವರು ಗಂಭೀರ ಗಾಯಗೊಂಡು  ಸ್ಥಳದಲ್ಲಿಯೇ ಮೃತಪಟ್ಟಿದ್ದುಗಂಭೀರ ಗಾಯಗೊಂಡ ಜಾನ್‌ ಫೆರ್ನಾಂಡಿಸ್‌ರವರು ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವುದಾಗಿದೆ.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ   ಮೊ.ನಂ. 173/2017  ಕಲಂ: 279, 338 304(ಎ) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕೊಲೆ ಯತ್ನ  ಪ್ರಕರಣ: ೦1

  • ಬೆಳ್ತಂಗಡಿ ಪೊಲೀಸ್ ಠಾಣೆ : ದಿನಾಂಕ: 04-12-2017ರಂದು ಈ ಪ್ರಕರಣದ ಪಿರ್ಯಾದಿದಾರರಾದ ಹ್ಯಾರಿಸ್‌ ಪ್ರಾಯ: 32 ವರ್ಷ ತಂದೆ: ಅಹಮ್ಮದ್‌ ಬ್ಯಾರಿ ವಾಸ: 5 ಸೆಂಟ್ಸ್‌ ಮನೆ, ಕಳಿಯ ಗ್ರಾಮ ಗೇರುಕಟ್ಟೆ ಅಂಚೆ, ಬೆಳ್ತಂಗಡಿ ತಾಲೂಕು ಎಂಬವರು ಮಹಮ್ಮದ್ ತಸ್ಲೀಮ್‌, ಸಿಯಾಬ್‌, ಹಾಗೂ ಇತರರೊಂದಿಗೆ ಬೆಳ್ತಂಗಡಿ ತಾಲೂಕು ಕಳಿಯ ಗ್ರಾಮದ ಗೇರುಕಟ್ಟೆ  ಪೇಟೆಯಲ್ಲಿರುವ ಸಿರಿಲ್‌ ಪಿಂಟೋ  ಎಂಬವರ ಮುಚ್ಚಿಕೊಂಡಿರುವ ಗೂಡಂಗಡಿಯ ಹೊರಗಿರುವ ಬೆಂಚಿಯಲ್ಲಿ ಕೂತು ಮಾತನಾಡುತ್ತಿದ್ದಾಗ ರಾತ್ರಿ ಸುಮಾರು 7.30 ಗಂಟೆಯ ವೇಳೆಗೆ ಮೂರು ಕಾರುಗಳಲ್ಲಿ ಆರೋಪಿತರುಗಳು ಬಂದು ಪಿರ್ಯಾದಿ ಹಾಗೂ ಇತರರು ಕೂತು ಮಾತನಾಡಿಕೊಂಡಿದ್ದ ಗೂಡಂಗಡಿ ಬಳಿಯಲ್ಲಿ ಕಾರುಗಳನ್ನು ನಿಲ್ಲಿಸಿ ಕೈಗಳಲ್ಲಿ ತಲವಾರುಗಳು, ಮಚ್ಚುಗಳು ಮತ್ತು ಕಬ್ಬಿಣದ ರಾಡ್‌ಗಳ ಸಮೇತ ಕಾರಿನಿಂದ ಇಳಿದು ಬಂದು ಪಿರ್ಯಾದಿದಾರು ಮತ್ತು ಇತರರು ಕೂತಿದ್ದಲ್ಲಿಗೆ ಏಕಾಏಕಿ ಬಂದು ಅವ್ಯಾಚ ಶಬ್ದಗಳಿಂದ ಬೈದು ಕೊಂದು ಹಾಕುತ್ತೇವೆ ಎಂದು ಜೀವಬೆದರಿಕೆ ಒಡ್ಡಿ, ತಲವಾರು, ಮಚ್ಚುಗಳಿಂದ ಪಿರ್ಯಾದಿ ಹಾಗೂ ಮಹಮ್ಮದ್‌ ತಸ್ಲಿಂ ಹಾಗೂ ಸಿಯಾಬ್‌ಗೆ ಕಡಿದು ಮೂವರಿಗೂ ಕಭ್ಭಿಣದ ರಾಡ್‌ಗಳಿಂದ ಹಲ್ಲೆಮಾಡಿದ ಪರಿಣಾಮ ಪಿರ್ಯಾದಿದಾರರ ತಲೆಯ ಎಡಬದಿಗೆ ರಕ್ತಗಾಯ, ಎಡ ಕಾಲಿನ ಮೊಣಗಂಟಿನ ಅಡಿಭಾಗದಲ್ಲಿ ರಕ್ತಗಾಯ ಹಾಗೂ ಎಡಕೋಲುಕೈಗೆ ತರಚಿದ ಗಾಯ ಮತ್ತು ಒಳನೋವು, ಮಹಮ್ಮದ್‌ ತಸ್ಲಿಂನ  ಹಿಂಬದಿ  ತಲೆಗೆ ಸೀಳಿದ ತರದ ರಕ್ತಗಾಯ, ಎಡಕಾಲಿನ ಮೊಣಗಂಟಿನ ಬಳಿ ಮೂರು ಕಡೆ ರಕ್ತಗಾಯಗಳು, ಎಡಕೈ ಕೋಲು ಕೈಯಲ್ಲಿ ಊತವಾಗಿ ಒಳನೋವು,ಮೈ,ಕೈಗೆ ಒಳನೋವು ಹಾಗೂ ಸಿಯಾಬ್‌ ಎಂಬಾತನಿಗೆ ಬಲಕೈ ತೋರುಬೆರಳಿಗೆ ರಕ್ತಗಾಯ, ಕೆಳ ಹಾಗೂ ಮೇಲ್ಬದಿ ತುಟಿಯಿಂದ ಮೂಗಿನ ವರಗೆ ಕ್ತಗಾಯ ಹಾಗೂ ಎಡಕೈ ಮೊಣಗಂಟಿಗೆ ಒಳನೋವುವುಂಟಾಗಿ ಚಿಕಿತ್ಸೆಯ ಬಗ್ಗೆ ಮಂಗಳೂರಿನ ಏ.ಜೆ ಆಸ್ಪತ್ರೆಯಲ್ಲಿ ದಾಖಲಾಗಿರುವುದು.ಈ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣಾ ಅ.ಕ್ರ 219/2017 ಕಲಂ: 143,147,148,504,506,324,326,307 ಜೊತೆಗೆ 149  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಜೀವ ಬೆದರಿಕೆ  ಪ್ರಕರಣ: ೦1

  • ಪುಂಜಾಲಕಟ್ಟೆ ಪೊಲೀಸ್ ಠಾಣೆ : ದಿನಾಂಕ:03-12-2017 ರಂದು ಮದ್ಯಾಹ್ನ 03-00 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಆಸೀಫ್(32) ತಂದೆ: ಹಾಮದ್, ವಾಸ: ಕಾವಳಮೂಡೂರು, ಬಂಟ್ವಾಳ ತಾಲೂಕು ರವರು ಸಾದಿಕ್ ಮತ್ತು ಮಹಮ್ಮದ್ ಅಸ್ಲಮ್ ಎಂಬವರ ಜೊತೆ ಕಾವಳ ಕಟ್ಟೆ ಮಸೀದಿಯಲ್ಲಿ ನಮಾಜ್ ಮಾಡಿಕೊಂಡು ವಾಪಾಸು ಮನೆಗೆ ನಡೆದುಕೊಂಡು ಮಸೀದಿಯ ಎದುರು ರಸ್ತೆ ಬದಿಯಲ್ಲಿ ಹೋಗುತ್ತಿರುವಾಗ ಪಿರ್ಯಾದಿದಾರರಿಗೆ ಪರಿಚಯದ ಆರೋಪಿಗಳಾದ ರಿಜ್ವಾನ್, ಹನೀಪ್, ಖುರ್ಷಿದ್, ಜೈನುದ್ದೀನ್ ಎಂಬವರು ಕೃತ್ಯ ಮಾಡುವ ಸಮಾನ ಉದ್ದೇಶದಿಂದ ಆರೋಪಿಗಳ ಪೈಕಿ  ರಿಜ್ವಾನ್  ಮಾರಾಕಾಯುಧವಾದ ಸೋಡಾ ಬಾಟ್ಲಿಯನ್ನು ಹಿಡಿದುಕೊಂಡು ಆರೋಪಿಗಳೆಲ್ಲರೂ ಪಿರ್ಯಾದಿದಾರರು ಹಾಗೂ ಅವರ ಜೊತೆಯಲ್ಲಿದ್ದವರನ್ನು ಅಕ್ರಮವಾಗಿ ತಡೆದು ನಿಲ್ಲಿಸಿ ಆರೋಪಿಗಳ ಪೈಕಿ  ಖುರ್ಷಿದ್  ಅವರನ್ನುದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ರಿಜ್ವಾನ್ ಎಂಬವನು ಅವನ ಕೈಯಲ್ಲಿದ್ದ  ಸೋಡಾ ಬಾಟ್ಲಿ ತುಂಡಿನಿಂದ ಸಾದಿಕ್ ಎಂಬವರ  ಹಣೆಗೆ ಮತ್ತು ಮೂಗಿಗೆ ಹೊಡೆದು ರಕ್ತ ಗಾಯವನ್ನುಂಟು ಮಾಡಿದ್ದಲ್ಲದೇ ಆತನ ಜೊತೆಯಲ್ಲಿದ್ದ ಉಳಿದ ಆರೋಪಿಗಳು  ಕೈಯಿಂದ ಸಾದಿಕ್‌ರವರಿಗೆ ಕೈಯಿಂದ ಬೆನ್ನಿಗೆ ಮತ್ತು ಮೈಗೆ ಹೊಡೆದುದ್ದಲ್ಲದೇ ಪಿರ್ಯಾದಿದಾರರಿಗೆ ಮತ್ತು ಅಸ್ಲಮ್‌ರವರಿಗೂ ಕೂಡ ಕೈಯಿಂದ ಹಲ್ಲೆ ನಡೆಸಿರುತ್ತಾರೆ. ಈ  ಸಮಯದಲ್ಲಿ ಪಿರ್ಯಾದಿದಾರರು ಮತ್ತು ಅವರ ಜೊತೆಯಲ್ಲಿದ್ದವರು ಬೊಬ್ಬೆ ಹೊಡೆದಾಗ ಅಝಿಝ್ ಮತ್ತು ಹೈದರ್ ರವರು ಅಲ್ಲಿಗೆ ಬರುವುದನ್ನು ನೋಡಿ ಆರೋಪಿಗಳೆಲ್ಲರೂ ಜೀವ ಬೆದರಿಕೆ ಒಡ್ಡಿ ರಿಜ್ವಾನ್‌ನ ಕೈಯಲ್ಲಿದ್ದ ಕೃತ್ಯಕ್ಕೆ ಉಪಯೋಗಿಸಿದ ಸೋಡಾ ಬಾಟ್ಲಿಯನ್ನು ಅಲ್ಲೇ ಬಿಸಾಡಿ ಓಡಿ ಹೋಗಿರುತ್ತಾರೆ.ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 122/2017  ಕಲಂ: 341,504,324,323,506, ಜೊತೆಗೆ 34  ಐ.ಪಿ.ಸಿ.   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಾಣೆ  ಪ್ರಕರಣ: 1

  • ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀ ಮತಿ ಅಪ್ಪಿ (65) ಗಂಡ : ಜಾರಪ್ಪ ಮೂಲ್ಯ ವಾಸ: ನಾಟಿ ಮನೆ, ನರಿಕೊಂಬು ಗ್ರಾಮ ಬಂಟ್ವಾಳ ತಾಲೂಕು ರವರ ಮಗನಾದ ದಿನೇಶ್ ಎಂಬಾತನು 02-11-2017 ರಂದು ಬೆಳಗ್ಗೆ 8.00 ಗಂಟೆಗೆ ಹೋಟೇಲ್ ಕೆಲಸಕ್ಕೆ ಹೋಗುತ್ತೇನೆ ಎಂಬುದಾಗಿ ಹೇಳಿ ಹೋದವರು ಈ ತನಕ ಮನೆಗೆ ವಾಪಸ್ಸು ಮನೆಗೆ ಬಂದಿರುವುದಿಲ್ಲ. ಪಿರ್ಯಾದಿದಾರರ ಮಗನಾದ ದಿನೇಶ್ ನು ಅಂಗವಿಕಲನಾಗಿದ್ದು, ಈ ಹಿಂದೆಯು ಸಹ ಮನೆಯನ್ನು ಬಿಟ್ಟು ಹೋಗಿದ್ದು ಸುಮಾರು 1 ½ ತಿಂಗಳ ನಂತರ ಮನೆಗೆ ವಾಪಸ್ಸು ಬಂದಿರುತ್ತಾರೆ.ಆದುದ್ದರಿಂದ ಈತನಕ ಎಲ್ಲಾ ಕಡೆ ಹುಡುಕಾಡಲಾಗಿ ಎಲ್ಲಿಯೂ ಪತ್ತೆಯಾಗಿರುವುದಿಲ್ಲ.ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣಾ ಅಕ್ರ 286/2017 ಕಲಂ ಗಂಡಸು ಕಾಣೆ ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 2

  • ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಕೆ. ಹರೀಶ ಗೌಡ, ಪ್ರಾಯ: 28 ವರ್ಷ, ತಂದೆ: ದಿ. ಕೃಷ್ಣಪ್ಪ ಗೌಡ, ವಾಸ: ಕಡ್ಯ ಮನೆ, ಮುಂಡೂರು  ಗ್ರಾಮ, ಪುತ್ತೂರು ತಾಲೂಕುರವರ ಅಣ್ಣ 32 ವರ್ಷ ಪ್ರಾಯದ ಜಗದೀಶ ಗೌಡ ಎಂಬವರು ಮದ್ಯಪಾನ ಮಾಡುವ ಚಟವುಳ್ಳವರಾಗಿದ್ದು, ದಿನಾಂಕ 03.12.2017 ರಂದು ಪಾನಮತ್ತನಾಗಿ ಮನೆಗೆ ಬಂದು ರಾತ್ರಿ 7.00 ಗಂಟೆಗೆ ಊಟವನ್ನೂ ಮಾಡದೇ ರೂಮಿನಲ್ಲಿ ಮಲಗಿದ್ದವರು ಮರುದಿನ ಬೆಳಗ್ಗೆ 6.30 ಗಂಟೆಗೆ ಪಿರ್ಯಾದಿದಾರರ ತಾಯಿ ಜಗದೀಶರವರನ್ನು ಎಬ್ಬಿಸಲು ನೋಡಿದಾಗ ಏಳದೇ ಇದ್ದು, ರೂಮಿನಲ್ಲಿ ಯಾವುದೋ ವಿಷ ಪದಾರ್ಥದ ಘಾಟು ವಾಸನೆ ಬರುತ್ತಿದ್ದು ಜಗದೀಶರವರು ಮಲಗಿದಲ್ಲೇ ಮೃತಪಟ್ಟಿರುವುದು ಕಂಡುಬಂದಿದ್ದು.ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆ ಯು ಡಿ ಆರ್ 36/17 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಉಪ್ಪಿನಂಗಡಿ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಜಯಂತಿ ಗಂಡ:ವಿಶ್ವನಾಥ ಪೂಜಾರಿ ವಾಸ:ಪೆರಾಬೆ ಅಡೆಕಲ್‌ ಮನೆ ಹಿರೇಬಂಡಾಡಿ ಗ್ರಾಮ ಪುತ್ತೂರು ತಾಲೂಕು ಎಂಬುವರ ಗಂಡ ವಿಶ್ವನಾಥ ಪೂಜಾರಿ ರವರು ವಿಪರೀತ ಅಮಲು ಪದಾರ್ಥ ಸೇವಿಸುವ ಅಭ್ಯಾಸದವರಾಗಿದ್ದು, ದಿನಾಂಕ 02-12-2017 ರಂದು ರಾತ್ರಿ 7-30 ಗಂಟೆಯಿಂದ ದಿನಾಂಕ 04-12-2017 ರಂದು ಬೆಳಗ್ಗೆ 9-30 ಗಂಟೆಯ ಮದ್ಯೆ ವಿಪರೀತ ಅಮಲು ಪದಾರ್ಥ ಸೇವಿಸಿ ಪುತ್ತೂರು ತಾಲೂಕು ಹಿರೇಬಂಡಾಡಿ ಗ್ರಾಮದ ಬೋಳಮೆ ಎಂಬಲ್ಲಿ ರಸ್ತೆಯ ಬದಿಯಲ್ಲಿ ಇರುವ ಮೋರಿಯ ಪೂರ್ವ ಬದಿಯ ಎತ್ತರದ ತಿಟ್ಟೆಯಲ್ಲಿ ಕುಳಿತವರು ಆಯ ತಪ್ಪಿ ಕೆಳಗೆ ಬಿದ್ದು, ಮೇಲಕ್ಕೆ ಏಳಲಾಗದೇ ಅಲ್ಲಿಯೇ ಮೃತಪಟ್ಟಿರುವುದಾಗಿದೆ.ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಯುಡಿಆರ್‌ ನಂಬ್ರ 30/2017 ಕಲಂ:174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.