Daily Crime Reports as on 02/12/2017 at 10:00 Hrs

Home / Daily Information / Daily Crime Reports as on 02/12/2017 at 10:00 Hrs

ಅಪಘಾತ ಪ್ರಕರಣ: 4

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ವಸಂತ ಪೂಜಾರಿ (40) ತಂದೆ :ದುಗ್ಗಪ್ಪ ಪೂಜಾರಿ ವಾಸ: ಮಾವಿನಕಟ್ಟೆ ಮನೆ ಚೆನ್ನೈತೋಡಿ ಗ್ರಾಮ ಬಂಟ್ವಾಳ ತಾಲೂಕು ಎಂಬವರು ಹಾಗೂ ತನ್ನ ಗೆಳೆಯ ಮಾಧವ ಪೂಜಾರಿ ರವರೊಂದಿಗೆ ದಿನಾಂಕ: 30.11.2017 ರಂದು ಶಂಭೂರು ಎಂಬಲ್ಲಿ ವಿದ್ಯುತ್ ಕಂಬ ಹಾಕುವ ಕೆಲಸಕ್ಕೆ ಹೋದವರು ಅಲ್ಲಿ ಕೆಲಸ ಮುಗಿಸಿ  ವಾಪಾಸು ಮಾಧವ ಪೂಜಾರಿಯವರ ಬಾಬ್ತು KA-19-EB-2553ನೇ ಮೋಟಾರ್ ಸೈಕಲಿನಲ್ಲಿ ಪಿರ್ಯಾದಿದಾರರು ಸಹಸವಾರನಾಗಿ ಕುಳಿತುಕೊಂಡು ಮಾಧವ ಪೂಜಾರಿ ಮೋಟಾರ್ ಸೈಕಲನ್ನು ಸವಾರಿ ಮಾಡಿಕೊಂಡು  ಬರುತ್ತಾ ಸಮಯ 21.30 ಗಂಟೆಗೆ ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ಪಾಣೆಮಂಗಳೂರು ಜಂಕ್ಷನ್ ನಿಂದ ಸ್ವಲ್ಪ ಮುಂದೆ ತಲುಪಿದಾಗ ಮೆಲ್ಕಾರ್ ಕಡೆಯಿಂದ  KA-53-A-9144 ನೇ ಲಾರಿಯನ್ನು  ಅದರ ಚಾಲಕ ಅತೀ ವೇಗ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು KA-19-EB-2553 ನೇ ಮೋಟಾರ್ ಸೈಕಲಿನ ಹಿಂಬದಿಗೆ  ಡಿಕ್ಕಿ ಹೊಡೆದ ಪರಿಣಾಮ  ಪಿರ್ಯಾದಿದಾರರು ಮೋಟಾರ್ ಸೈಕಲಿನಿಂದ ‌ನಿಂದ ರಸ್ತೆಗೆ ಎಸೆಯಲ್ಪಟ್ಟು ರಸ್ತೆಗೆ ಬಿದ್ದುದಲ್ಲದೆ ಮೋಟಾರ್ ಸೈಕಲ್ ಸವಾರ ವಾಹನ ಸಮೇತ ರಸ್ತೆಗೆ ಬಿದ್ದಿರುವುದಾಗಿದೆ. ಅಪಘಾತದಲ್ಲಿ ಪಿರ್ಯಾದಿಯ ಎಡಕಾಲಿನ ಮಣಿಗಂಟಿಗೆ ಜಜ್ಜಿದ, ಸೊಂಟಕ್ಕೆ ಗುದ್ದಿದ ನೋವು, ಎಡಕಾಲಿನ ತೊಡೆಗೆ,ಬೆನ್ನಿಗೆ, ಎಡಕಾಲಿನ ಮೊಣಗಂಟಿನ ಬಳಿ ತರಚಿದ ಗಾಯವಾಗಿದ್ದು, ಮೋಟಾರ್ ಸೈಕಲ್ ಸವಾರ ಮಾಧವ ಪೂಜಾರಿಯವರಿಗೆ ತರಚಿದ ಗಾಯವಾಗಿರುತ್ತದೆ. ಗಾಯಗೊಂಡ ಪಿರ್ಯಾದಿ ಚಿಕಿತ್ಸೆ ಬಗ್ಗೆ ಮಂಗಳೂರು ಎ.ಜೆ  ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಆರೋಪಿ ಲಾರಿ ಚಾಲಕ ಅಪಘಾತದ ಬಳಿಕ ಲಾರಿಯನ್ನು ಸ್ಥಳದಲ್ಲಿಯೇ ನಿಲ್ಲಸಿ ಪರಾರಿಯಾಗಿರುತ್ತಾನೆ.ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 172/2017 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ದಿನಾಂಕ 30-11-2017 ರಂದು 22.10 ಗಂಟೆಗೆ ಆರೋಪಿ ಇನ್ನೋವಾ ಕಾರು ಚಾಲಕ ಕಾರು ನೋಂದಣಿ ನಂಬ್ರ KA-03-MG-9878 ನೇದನ್ನು ಪುತ್ತೂರು-ಕಾಣಿಯೂರು ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಕಾಣಿಯೂರು ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಬಂದು ಪುತ್ತೂರು ತಾಲೂಕು ನರಿಮೊಗರು ಗ್ರಾಮದ ಪುರುಷರಕಟ್ಟೆ ಎಂಬಲ್ಲಿ  ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಪಿರ್ಯಾದಿದಾರರಾದ ಜಯರಾಜ ಬಿ (35 ವ) ತಂದೆ: ದೇವಪ್ಪ ಗೌಡ , ವಾಸ:    ಪರಂಬೆಟ್ಟು ಮನೆ, ಹಳೆ ನೇರಂಕಿ ಅಂಚೆ ಮತ್ತು  ಗ್ರಾಮ, ಪುತ್ತೂರು ತಾಲೂಕು ಎಂಬವರ ಮುಂದಿನಿಂದ ಪುತ್ತೂರು ಕಡೆಯಿಂದ ಕಾಣಿಯೂರು ಕಡೆಗೆ ಹೋಗುತ್ತಿದ್ದ ಕೋಳಿ ಸಾಗಾಟದ ವಾಹನ ನಂಬ್ರ KL-53-J-9359 ನೇದಕ್ಕೆ, ಅದರ ಹಿಂದಿನಿಂದ ಹೋಗುತ್ತಿದ್ದ ಅಟೋರಿಕ್ಷಾ ನೋಂದಣಿ ನಂಬ್ರ KA-21-B-3798 ನೇದಕ್ಕೆ, ಪಿರ್ಯಾದಿದಾರರ ಮುಂದಿನಿಂದ ರತ್ನ ಕುಮಾರ್‌ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟಾರ್‌ ಸೈಕಲ್‌ ನೋಂದಣಿ ನಂಬ್ರ KA-21-Q-4756 ನೇದಕ್ಕೆ ಹಾಗೂ ಪಿರ್ಯಾದಿದಾರರು ಕೃತಿಕಾ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಕ್ಯಾಂಪ್ಕೋ ಕಡೆಯಿಂದ ಹಳೆನೇರಂಕಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟಾರ್‌ ಸೈಕಲ್‌ ನೋಂದಣಿ ನಂಬ್ರ KA-21-L-9923 ನೇದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರು, ಕೃತಿಕಾರವರು ಹಾಗೂ ರತ್ನ ಕುಮಾರ್‌ ರವರು ಗಾಯಗೊಂಡು ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ  ಚಿಕಿತ್ಸೆಗೆ ದಾಖಲಾಗಿರುತ್ತಾರೆ. ಈ ಅಪಘಾತದಲ್ಲಿ ಎಲ್ಲಾ ವಾಹನಗಳು ಜಖಂಗೊಂಡಿರುತ್ತವೆ .ಈ ಬಗ್ಗೆ ಪುತ್ತೂರು ಸಂಚಾರ ಠಾಣೆ   ಮೊ.ನಂ. 168/2017  ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ದಿನಾಂಕ 30-11-2017 ರಂದು 23.15 ಗಂಟೆಗೆ ಆರೋಪಿ ಮಹಮ್ಮದ್‌ ಶಾಹಿನ್‌ ಎಂಬವರು ಮೋಟಾರ್‌ ಸೈಕಲ್‌ ನೋಂದಣಿ ನಂಬ್ರ KA-21-Q-2787 ನೇಯದನ್ನು ಬೊಳ್ವಾರು ಕಡೆಯಿಂದ ಪುತ್ತೂರು  ಕಡೆಗೆ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಹೋಗಿ ಪುತ್ತೂರು ತಾಲೂಕು ಪುತ್ತೂರು ಕಸ್ಬಾ ಗ್ರಾಮದ ಪ್ರಗತಿ ಆಸ್ಪತ್ರೆಯ ಬಳಿ ತೀರಾ ರಾಂಗ್‌ ಸೈಡ್‌ನಿಂದ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಪಿರ್ಯಾದುದಾರರಾದ ಸುಭಾಶ್ಚಂದ್ರ ರೈ (36 ವ) ತಂದೆ: ಬಟ್ಯಪ್ಪ ರೈ, ವಾಸ: ಸಾರ್ಯಬೀಡು ಮನೆ, ಬೆಳಿಯೂರುಕಟ್ಟೆ ಅಂಚೆಬಲ್ನಾಡು  ಗ್ರಾಮ, ಪುತ್ತೂರು ತಾಲೂಕು ಎಂಬವರ ಎದುರಿನಿಂದ ಪುತ್ತೂರು ಪೇಟೆ ಕಡೆಯಿಂದ ಬೊಳ್ವಾರು ಕಡೆಗೆ ಹೋಗುತ್ತಿದ್ದ KA-21-Q-2271 ನೇ ನೋಂದಣಿ ನಂಬ್ರದ ದ್ವಿ ಚಕ್ರ ವಾಹನಕ್ಕೆ  ಡಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳ ಸವಾರರು ರಸ್ತೆಗೆ ಬಿದ್ದು, ಗಾಯಗೊಂಡವರನ್ನು ಅಲ್ಲಿ ಸೇರಿದವರು ಪುತ್ತೂರು ಪ್ರಗತಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದು, ದ್ವಿ ಚಕ್ರ ವಾಹನ ಸವಾರ ವಸಂತ ಕೋಟ್ಯಾನ್‌ ಎಂಬವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಎ.ಜೆ. ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ   ಮೊ.ನಂ. 169/2017  ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ದಿನಾಂಕ 30.11.2017 ರಂದು ಕೆಎ-19-ಪಿ-7420 ನೇ ಮಾರುತಿ 800 ಕಾರಿನಲ್ಲಿ ಮಲ್ಲೆಶ್‌ರವರನ್ನು ಪ್ರಯಾಣಿಕರನ್ನಾಗಿ ಕುಳ್ಳಿರಿಸಿಕೊಂಡು ಕೌಡಿಚ್ಚಾರಿನಿಂದ ಹೊರಟು ಪುತ್ತೂರು ಕಡೆಗೆ ರಸ್ತೆಯ ಎಡ ಬದಿಯಲ್ಲಿ ಚಲಾಯಿಸಿಕೊಂಡು ಬರುತ್ತಿದ್ದು ರಾತ್ರಿ 11.00 ಗಂಟೆಗೆ ಪುತ್ತೂರು ತಾಲೂಕು ಒಳಮೊಗ್ರು ಗ್ರಾಮದ ಕೊಯಿಲತ್ತಡ್ಕ ಸೇತುವೆ ಬಳಿ ತಲುಪಿದಾಗ ಪುತ್ತೂರು ಕಡೆಯಿಂದ ಸುಳ್ಯ ಕಡೆಗೆ ಕೆಎ-02-ಸಿ-8399 ನೇ ಲಾರಿಯನ್ನು ಅದರ ಚಾಲಕ ಮಂಜುನಾಥರವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಬಲಕ್ಕೆ ಚಲಾಯಿಸಿ ಪಿರ್ಯಾದಿದಾರರಾದ ಶಿವಕುಮಾರ್‌ ಪಿ.ಎಸ್‌, ಪ್ರಾಯ: 28 ವರ್ಷ, ತಂದೆ: ಶೇಷಪ್ಪ, ವಾಸ: ಅಪ್ಪಂಗಳ ಮನೆ ಮತ್ತು ಅಂಚೆ, ಎರವನಾಡು ಗ್ರಾಮ, ಮಡಿಕೇರಿ ತಾಲೂಕು, ಕೊಡಗು ಜಿಲ್ಲೆ ಎಂಬವರ ಕಾರಿನ ಬಲಭಾಗಕ್ಕೆ ಡಿಕ್ಕಿಯನ್ನುಂಟು ಮಾಡಿ ಕಾರು ನಜ್ಜು ಗುಜ್ಜಾಗಿ ಪಿರ್ಯಾದಿದಾರರು ಮತ್ತು ಮಲ್ಲೇಶರವರು ಕಾರಿನ ಒಳಗಡೆ ಸಿಲುಕಿಕೊಂಡವರನ್ನು ಹಿಂದಿನಿಂದ ಬರುತ್ತಿದ್ದ ಪವನ್‌ ಹಾಗೂ ಲಾರಿ ಚಾಲಕ ಆರೈಕೆ ಮಾಡಿದ್ದು, ಅಪಘಾತದ ಪರಿಣಾಮ ಪಿರ್ಯಾದಿದಾರರ ಬಲಮೊಣಕಾಲಿಗೆ, ತಲೆಯ ಮದ್ಯ ಭಾಗ ಹಾಗೂ ಕಿವಿಗೆ ರಕ್ತಗಾಯವಾಗಿದ್ದು, ಗಾಯಗೊಂಡ ಪಿರ್ಯಾದಿದಾರರನ್ನು ಪವನ್‌ರವರು ಚಿಕಿತ್ಸೆ ಬಗ್ಗೆ ಕಾರಿನಲ್ಲಿ ಪುತ್ತೂರು ಪ್ರಗತಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿರುತ್ತಾರೆ.ಈ ಬಗ್ಗೆ ಪುತ್ತೂರು ಗ್ರಾಮಾಂತರ ಆ.ಕ್ರ 146/17 ಕಲಂ: 279, 337 ಐ.ಪಿ.ಸಿ.ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 1

  • ವೇಣೂರು ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಧೂಮಪ್ಪ ದೇವಾಡಿಗ (63) ತಂದೆ: ತುಕ್ರ ದೇವಾಡಿಗ ವೇಣೂರು ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ಮನೆಯ ಪಕ್ಕದಲ್ಲಿ ವಾಸವಿರುವ ಪಿರ್ಯಾದುದಾರರ ಅಣ್ಣನ ಮಗಳು ಭವಾನಿರವರ ಮಕ್ಕಳಿಗೆ ದಿನಾಂಕ 01.12.2017 ರಂದು ರಜೆ ಇದ್ದು ಭವಾನಿಯವರು ವೇಣೂರು ಪೇಟೆಗೆ ಹೋಗಿದ್ದ ಸಮಯ ಭವಾನಿಯ ಮಗ ಶ್ರೀಕಾಂತ (10)  ಎಂಬಾತನು ಬಾವಿಯ ನೀರಿಗೆ ಬಿದ್ದಿರುವುದಾಗಿ ಆತನ ತಂಗಿ ದೀಕ್ಷಿತಾ (08) ಪಿರ್ಯಾದುದಾರರ ಮನೆಗೆ ಬಂದು ಸಂಜೆ ಸುಮಾರು 04.00 ಗಂಟೆಯ ಸಮಯಕ್ಕೆ ಶ್ರೀಕಾಂತನು ನೆರೆಯ ಗಣೇಶ ಎಂಬವರ ಮನೆಯ ಎದುರಿನ ಬಾವಿ ನೀರಿಗೆ ಬಿದ್ದಿರುವುದಾಗಿ ತಿಳಿಸಿದ್ದು ಪಿರ್ಯಾದುದಾರರು ಹಾಗೂ ನೆರೆಕರೆಯವರು ಬಂದು ಬಾವಿಯಲ್ಲಿ ಹುಡುಕಾಡಿ ಬಳಿಕ ನೀರಿಗೆ ಬಿದಿರಿನ ಕೊಕ್ಕೆ ಹಾಕಿ ನೀರಿನ ತಳ ಭಾಗದಲ್ಲಿದ್ದ ಶ್ರೀಕಾಂತನನ್ನು ಮೇಲಕ್ಕೆತ್ತಿ ಸಂಜೆ 05.50 ಗಂಟೆಗೆ ನೋಡಿದಾಗ ಶ್ರೀಕಾಂತನು ಮೃತಪಟ್ಟಿದ್ದು.ಈ ಬಗ್ಗೆ ವೇಣೂರು ಪೊಲೀಸ್ ಠಾಣಾ ಯು ಡಿ ಆರ್ ನಂಬ್ರ: 26/2017  ಕಲಂ: 174  ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.