Daily Crime Reports as on 01/12/2017 at 10:00 Hrs

Home / Daily Information / Daily Crime Reports as on 01/12/2017 at 10:00 Hrs

ಅಪಘಾತ ಪ್ರಕರಣ: ೦2

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ದಿನಾಂಕ; 29-11-2017 ರಂದು ಫಿರ್ಯಾದಿದಾರರಾದ ಶ್ರೀಮತಿ ವಿನೋದಾ, ಪ್ರಾಯ 50 ವರ್ಷ, ಜನತಾ ಕಾಲನಿ ಕಾಡಬೆಟ್ಟು ಗ್ರಾಮ, ಬಂಟ್ವಾಳ ತಾಲೂಕು ಎಂಬವರು ತನ್ನ ಮನೆಯ ಕರೆಂಟ್ ಬಿಲ್ ಕಟ್ಟಲೆಂದು ವಗ್ಗ ಕಾರಿಂಜ ಕ್ರಾಸ್‌ಗೆ ಹೋಗಿದ್ದು, ಸಮಯ ಸುಮಾರು 11.00 ಗಂಟೆಗೆ ಬಂಟ್ವಾಳ ತಾಲೂಕು ಕಾವಳಪಡೂರು ಗ್ರಾಮದ ವಗ್ಗ ಪೇಟೆಯಲ್ಲಿರುವ ಡಿಸೋಜಾ ಕಾಂಪ್ಲೆಕ್ಟ್ ಎದುರು ರಸ್ತೆಯಲ್ಲಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿರುವಾಗ ಬಿ ಸಿ ರೋಡ್ ಕಡೆಯಿಂದ KA-19-EP-8557 ನೇ ಆಕ್ಟಿವಾ ಸ್ಕೂಟರನ್ನು ಅದರ ಸವಾರ ಅತಿವೇಗ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರಿಗೆ ಢಿಕ್ಕಿ ಹೊಡೆಸಿ ಅಪಘಾತಪಡಿಸಿದ ಪರಿಣಾಮ ಫಿರ್ಯಾದಿದಾರರು ರಸ್ತೆಗೆ ಬಿದ್ದು, ಬಲಕಣ್ಣಿಗೆ ರಕ್ತಗಾಯ, ಬಲಬದಿ ದವಡೆಗೆ, ಬಲಕಾಲಿನ ಮೊಣಗಂಟಿಗೆ, ಗುದ್ದಿದ ಗಾಯ ಮತ್ತು ಬಲ ಕೈ ತಟ್ಟಿಗೆ ಹಾಗೂ ಎಡಕೈ ತಟ್ಟಿಗೆ ತರಚಿದ ಗಾಯವಾಗಿರುತ್ತದೆ. ಗಾಯಾಳು ಚಿಕಿತ್ಸೆಯ ಬಗ್ಗೆ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು.ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 171/2017 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುಂಜಾಲಕಟ್ಟೆ ಪೊಲೀಸ್ ಠಾಣೆ: ದಿನಾಂಕ 29-11-2017 ರಂದು ಸಂಜೆ 6.00 ಗಂಟೆಗೆ  ಫಿರ್ಯಾದಿದಾರರಾರ ಶ್ರೀಮತಿ ಪದ್ಮಾವತಿ (37), ಗಂಡ: ಕೃಷ್ಣಪ್ಪ ನಾಯ್ಕ,ವಾಸ: ಕುಂಚಾಡಿ ಮನೆ, ಕಾರಿಂಜ ಬೈಲು ,ಕಾವಳ ಮೂಡೂರು ಗ್ರಾಮ,ಬಂಟ್ವಾಳ ತಾಲೂಕು.ಎಂಬವರು ತನ್ನ ತಂದೆಯವರಾದ ವಿಠಲ ನಾಯ್ಕ ರವರೊಂದಿಗೆ ಬಂಟ್ವಾಳ ತಾಲೂಕು ಪಿಲಾತಬೆಟ್ಟು ಗ್ರಾಮದ ಮೂರ್ಜೆ  ಎಂಬಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಡಾಂಬಾರು ರಸ್ತೆಯ  ಎಡಬದಿಯಲ್ಲಿರುವ ಎಡಬಾಗದ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ KSRTC ಬಸ್ಸು ನಂಬ್ರ KA  19  F 3027 ನೇ   ಬಸ್ಸನ್ನು ಮಂಗಳೂರು ಕಡೆಯಿಂದ ಧರ್ಮಸ್ಥಳ ಕಡೆಗೆ ಅದರ ಚಾಲಕನಾದ ಮೃತ್ಯುಂಜಯ ಎಂಬವರು ಒಮ್ಮೆಲೇ  ಅತಿ ವೇಗ ಮತ್ತು ಅಜಾಗರೂಕೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ತಂದೆಯವರಿಗೆ ಡಿಕ್ಕಿ ಹೊಡೆದ ಪರಿಣಾಮ ವಿಠಲ ನಾಯ್ಕ ರವರು   ರಸ್ತೆಗೆ ಬಿದ್ದು ಅವರ ತಲೆಯ ಹಿಂಬದಿಗೆ, ಮುಖಕ್ಕೆ, ಕಾಲಿಗೆ, ಎದೆಗೆ ರಕ್ತಗಾಯ ಹಾಗೂ  ಗುದ್ದಿದ ನೋವಾಗಿರುತ್ತದೆ.   ಗಾಯಾಳು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು  ನಂತರ ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ  ಚಿಕಿತ್ಸೆ ಪಡೆಯುತ್ತಿದ್ದಾರೆ .ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 121/2017 ಕಲಂ: 279,337, ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: ೦3

  • ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಆನಂದ ಪೂಜಾರಿ ಪ್ರಾಯ: 70 ವರ್ಷ, ತಂದೆ: ದಿ.ಓಬಯ್ಯ ಪೂಜಾರಿ, ವಾಸ: ಕೇರ್ಯ ಮನೆ, ಪುದುವೆಟ್ಟು ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ಮಗ ದಿನೇಶ 25 ವರ್ಷ ಎಂಬವರು ಸುಮಾರು 1 ವರ್ಷದಿಂದ ಮಾನಸಿಕವಾಗಿ ಅಸ್ವಸ್ಥನಾಗಿದ್ದು ದಿನಾಂಕ: 29/11/2017 ರಂದು 21.00 ಗಂಟೆಯ ಸಮಯಕ್ಕೆ ಬೆಳ್ತಂಗಡಿ ತಾಲೂಕು ಪುದುವೆಟ್ಟು ಗ್ರಾಮದ ಕೇರ್ಯ ಮನೆ ಎಂಬಲ್ಲಿ, ಯಾವುದೋ ಕಾರಣಕ್ಕಾಗಿ ವಿಷ ಪದಾರ್ಥ ಸೇವಿಸಿ ಅಸ್ವಸ್ಥನಾಗಿ ವಾಂತಿ ಮಾಡಿಕೊಂಡಿದ್ದವನನ್ನು ಕೂಡಲೇ ಚಿಕಿತ್ಸೆಯ ಬಗ್ಗೆ ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದಾಗ ವೈದ್ಯರು ಪರೀಕ್ಷಿಸಿ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ.ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆ  ಯು.ಡಿ.ಆರ್ ನಂಬ್ರ 53/2017 ಕಲಂ: 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಅಪ್ಪು ನಾಯ್ಕ್ 67 ವರ್ಷ ತಂದೆ: ದಿ|| ಪುಟ್ಟ ನಾಯ್ಕ್ ಪಾದೆಕಾರ್ಯ ಮನೆ ಬಡಗನ್ನೂರು ಗ್ರಾಮ ಪುತ್ತೂರು ತಾಲೂಕು  ರವರ ಮಗ ಶೇಷಪ್ಪ ನಾಯ್ಕ್ ಎಂಬವರು ಅಡಿಕೆ ತೆಗೆಯುವ ಕೆಲಸಕ್ಕೆ ಹೋಗುತ್ತಿದ್ದು ದಿನಾಂಕ 29.11.2017 ರಂದು ಕೆದಂಬಾಡಿ ಗ್ರಾಮ ಕಜೆ ಎಂಬಲ್ಲಿಗೆ ಜಯರಾಮ ಎಂಬವರು ನೋಡಿಕೊಳ್ಳುತ್ತಿರುವ ತೋಟಕ್ಕೆ ಅಡಿಕೆ ತೆಗೆಯಲು ಹೋಗಿದ್ದು ಪಿರ್ಯಾದಿದಾರರು ಈಶ್ವರ ಮಂಗಲ ಎಂಬಲ್ಲಿಗೆ ಕೂಲಿ ಕೆಲಸಕ್ಕೆ ಹೋಗಿದ್ದ ಸಮಯ ಸಂಜೆ ಸುಮಾರು 4.00 ಗಂಟೆ ಸಮಯಕ್ಕೆ ಶೇಷಪ್ಪ ನಾಯ್ಕರೊಂದಿಗೆ ಕೆಲಸ ಮಾಡುತ್ತಿದ್ದ ಶ್ರೀಧರ್ ಎಂಬವರು ಪಿರ್ಯಾದಿದಾರರ ಅಳಿಯ ಸತೀಶ ಎಂಬವರಿಗೆ ಕರೆ ಮಾಡಿ ಶೇಷಪ್ಪ ಅಡಿಕೆ ಮರದಿಂದ ಬಿದ್ದು ಗಂಭೀರ ಗಾಯಗೊಂಡು ಮಾತನಾಡುವ ಸ್ಥಿತಿಯಲ್ಲಿ ಇಲ್ಲದೇ ಇದ್ದು ಚಿಕಿತ್ಸೆ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವ ವಿಚಾರ ತಿಳಿಸಿದಂತೆ ಆಸ್ಪತ್ರೆಗೆ ಬಂದು ನೋಡಿದಾಗ ಶೇಷಪ್ಪ ನಾಯ್ಕರವರ ಮೈಮೇಲೆ ಯಾವುದೇ ರಕ್ತಗಾಯ ಕಂಡು ಬಾರದೇ ಇದ್ದು ಶರೀರದ ಯಾವುದೋ ಭಾಗಕ್ಕೆ ಬಲವಾಗಿ ಗುದ್ದಿದ ಅಥವಾ ಜಖಂಗೊಂಡ ಪರಿಣಾಮ ಮೃತಪಟ್ಟಿರಬಹುದು. ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಯುಡಿಅರ್ ನಂಬ್ರ 35/17 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಸುಳ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಉಷಾ ಪ್ರಾಯ 27 ವರ್ಷ, ಗಂಡ: ರಾಮಚಂದ್ರ, ಮಣಿಕಾರ ಮನೆ, ಕೊಳ್ತಿಗೆ ಗ್ರಾಮ, ಪುತ್ತೂರು ತಾಲೂಕು ರವರ ತಂದೆ ನಾರಾಯಣ ಮಣಿಯಾಣಿ (60)  ಎಂಬುವರು ಸುಮಾರು ಎರಡು ವರ್ಷಗಳ ಹಿಂದೆ ಪಾರ್ಶುವಾಯು ಕಾಯಿಲೆಗೆ ತುತ್ತಾಗಿದ್ದು ಸರಿಯಾಗಿ ಕೆಲಸ ಮಾಡಲು ಆಗದೇ ಇದ್ದು ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿರುವುದಾಗಿದೆ. ಪಿರ್ಯಾದಿದಾರರ ತಾಯಿ ಸುಶೀಲ ರವರು ಬೀಡಿ ಕಟ್ಟಿ ಅದರಿಂದ ಬಂದ ಸಂಪಾದನೆಯಿಂದ ಜೀವನ ಮಾಡುತ್ತಿದ್ದರು. ದಿನಾಂಕ 29.11.2017 ರಂದು ರಾತ್ರಿ ಸುಮಾರು 9:00 ಗಂಟೆ ಹೊತ್ತಿಗೆ ಮನೆಗೆ ಅಮಲು ಸೇವನೆ ಮಾಡಿಬಂದು. ತಾಯಿ ಸುಶೀಲರೊಡನೆ ಜಗಳಮಾಡಿ ತಾಯಿಯನ್ನು ಮನೆಯಿಂದ ಹೊರಗೆ ಕಳುಹಿಸಿ ಮನೆಯ ಬಾಗಿಲು ಹಾಕಿಕೊಂಡು ಮನೆಯ ದೇವರ ಕೋಣೆಯ ಮಾಡಿಯ ಬಿದಿರಿನ ಪಕ್ಕಸಾಗೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು.ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಯುಡಿಆರ್ ಸಂಖ್ಯೆ 33/2017  ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.