Daily Crime Reports as on 04/07/2017 at 11:00 Hrs

Home / Daily Information / Daily Crime Reports as on 04/07/2017 at 11:00 Hrs

ಅಪಘಾತ ಪ್ರಕರಣ: 2

  • ಪುತ್ತೂರು ಗ್ರಾಮಾಂತರ  ಪೊಲೀಸ್ ಠಾಣೆ. ಪಿರ್ಯಾದಿದಾರರಾದ ಉಮೈರಾ, ಪ್ರಾಯ: 19 ವರ್ಷ, ತಂದೆ: ಹಸೈನಾರ್‌, ವಾಸ: ಸಂಪ್ಯ ಮಸೀದಿ ಎದುರು ಮನೆ, ಆರ್ಯಾಪು ಗ್ರಾಮ, ಪುತ್ತೂರು ತಾಲೂಕುರವರು ದಿನಾಂಕ 02.12.2017 ರಂದು ರಾತ್ರಿ ತಂದೆ, ತಾಯಿ, ಅಜ್ಜಿ ಮತ್ತು ತಮ್ಮಂದಿರೊಂದಿಗೆ ಸಂಪ್ಯ ಮಸೀದಿಗೆ ಈದ್‌ ಮಿಲಾದ್‌ ಕಾರ್ಯಕ್ರಮದ ಬಗ್ಗೆ ಹೋಗಿದ್ದವರು, ಕಾರ್ಯಕ್ರಮದ ಮದ್ಯದಲ್ಲಿಯೇ ಮಸೀದಿಯಿಂದ ಅಜ್ಜಿ ಖತೀಜಮ್ಮರವರೊಂದಿಗೆ ಮನೆಗೆ ಹೊರಟು ರಾತ್ರಿ ಸುಮಾರು 10.30 ಗಂಟೆ ಸಮಯಕ್ಕೆ ಸಂಪ್ಯ ಮಸೀದಿ ಕಡೆಯಿಂದ ಮನೆ ಕಡೆಗೆ ಹೋಗಲು ಪಿರ್ಯಾದಿದಾರರು ಅಜ್ಜಿ ಖತೀಜಮ್ಮರವರೊಂದಿಗೆ ರಸ್ತೆ ದಾಟುತ್ತಿದ್ದ ಸಮಯ ಪುತ್ತೂರು ಕಡೆಯಿಂದ ಕೆಎ-19-ಎನ್‌-5849 ನೇ ಓಮಿನಿ ಕಾರನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುತ್ತಿರುವುದನ್ನು ಕಂಡು ಪಿರ್ಯಾದಿದಾರರ ಖತೀಜಮ್ಮರವರನ್ನು ಬಿಟ್ಟು ರಸ್ತೆ ದಾಟಿದ್ದು, ರಸ್ತೆ ಅಂಚಿಗೆ ತಲುಪಿದ್ದ ಖತೀಜಮ್ಮರವರಿಗೆ ಓಮಿನಿ ಕಾರು ಡಿಕ್ಕಿಯಾಗಿ ರಸ್ತೆಗೆ ಬಿದ್ದು, ತಲೆಗೆ, ಕೈಗೆ, ಕಾಲಿಗೆ, ಎದೆಗೆ ಮತ್ತು ಸೊಂಟಕ್ಕೆ ಗುದ್ದಿದ ಹಾಗೂ ರಕ್ತ ಗಾಯವಾಗಿದ್ದು ಗಾಯಗೊಂಡ ಖತೀಜಮ್ಮರವರನ್ನು ಪಿರ್ಯಾದಿದಾರರ ದೊಡ್ಡಪ್ಪ ಹಾಗೂ ಅಲ್ಲಿ ಸೇರಿದವರು ಚಿಕಿತ್ಸೆ ಬಗ್ಗೆ ಪುತ್ತೂರು ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಯುನಿಟಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆಯಲ್ಲಿದ್ದು, ಗಾಯಾಳು ಖತೀಜಮ್ಮರವರು ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲ  ಈ ಬಗ್ಗೆ ಪುತ್ತೂರು ಗ್ರಾಮಾಂತರ  ಅ.ಕ್ರ 191/16 ಕಲಂ: 279,337 ಐಪಿ ಆ.ಕ್ರ 149/17 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಡಬ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಗೋಪಾಲಕೃಷ್ಣ ಪ್ರಾಯ: 39 ವರ್ಷ, ತಂದೆ: ಲಕ್ಷ್ಮಣ ಗೌಡ, ವಾಸ: ಬಾಲಡ್ಕ ಮನೆ, ಕೈಕಂಬ, ಬಿಳಿನೆಲೆ ಗ್ರಾಮ, ಪುತ್ತೂರು ತಾಲೂಕು. ದಿನಾಂಕ:03.12.2017 ರಂದು ಸುಬ್ರಹ್ಮಣ್ಯಕ್ಕೆ ತೆರಳಲು ಪುತ್ತೂರು ತಾಲೂಕು ಬಿಳಿನೆಲೆ ಗ್ರಾಮದ ಕೈಕಂಬ ಜಂಕ್ಷನ್‌ ಎದುರಿನಲ್ಲಿರುವ ಬಸ್ ನಿಲ್ದಾಣದಲ್ಲಿ ನಿಂತಿರುವಾಗ ಸಮಯ ಸುಮಾರು ಸಂಜೆ 7:15 ಗಂಟೆಗೆ ಗುಂಡ್ಯ-ಸುಬ್ರಹ್ಮಣ್ಯ ರಾಜ್ಯ ರಸ್ತೆಯಲ್ಲಿ ಗುಂಡ್ಯ ಕಡೆಯಿಂದ ಸುಬ್ರಹ್ಮಣ್ಯ ಕಡೆಗೆ ಕೆ.ಎಸ್.ಆರ್.ಟಿ.ಸಿ ಬಸ್ಸನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಾ ಬಂದು ರಾಜ್ಯ ರಸ್ತೆಯ ಬದಿಯ ಕಚ್ಚಾ ಮಣ್ಣು ರಸ್ತೆಯ ಬದಿಯಲ್ಲಿ ಸುಬ್ರಹ್ಮಣ್ಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿ ಅಣ್ಣ ಬಾಲಚಂದ್ರ ಬಿ ಎಂಬವರಿಗೆ ಡಿಕ್ಕಿ ಉಂಟುಮಾಡಿದ ಪರಿಣಾಮ ಬಾಲಚಂದ್ರ ರವರು ರಸ್ತೆಗೆ ಎಸೆಯಲ್ಪಟ್ಟಿದ್ದು, ಕೂಡಲೇ ಪಿರ್ಯಾದಿ ಹಾಗೂ ಇತರರು ಆತನನ್ನು ಎತ್ತಿ ಉಪಚರಿಸಿ ತಲೆಗೆ ರಕ್ತಗಾಯವಾಗಿದ್ದು, ಚಿಕಿತ್ಸೆಯ  ಬಗ್ಗೆ ಕಡಬ ಸರಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಡಿಕ್ಕಿಯುಂಟುಮಾಡಿದ ಕೆ.ಎಸ್.ಆರ್.ಟಿ.ಸಿ ಬಸ್ ನಂಬ್ರ ಕೆಎ-19-ಎಫ್-3313 ನೇದಾಗಿದ್ದು, ಅದರ ಚಾಲಕ ಯಲ್ಲಪ್ಪ ಕಲ್ಲೇಶಿ ಎಂಬವರು ಬಸ್ಸನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿರುವುದೇ ಈ ಅಪಘಾತಕ್ಕೆ ಕಾರಣವಾಗಿದ್ದು ಈ ಬಗ್ಗೆ ಕಡಬ ಠಾಣಾ ಅ.ಕ್ರ 153/2017 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಹಲ್ಲೆ ಪ್ರಕರಣ: 2

  • ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ. ಚಂದ್ರಶೇಖರ ಪ್ರಾಯ 28 ವರ್ಷ ತಂದೆ: ವಾಸುದೇವ ಮೊಟ್ಟೆತ್ತಡ್ಕ ಮನೆ, ಕೆಮ್ಮಿಂಜೆ ಗ್ರಾಮ ಪುತ್ತೂರು ತಾಲೂಕು  ತನ್ನ ಮಾವನ ಬಾಬ್ತು ಓಮಿನಿ ಕಾರು ನಂಬ್ರ ಕೆಎ-19-ಎನ್-5849 ನೇದನ್ನು ಚಲಾಯಿಸಿಕೊಂಡು ದರ್ಬೆ ಎಂಬಲ್ಲಿ ಪೆಟ್ರೋಲ್ ಹಾಕಿಸಿ ಮೊಟ್ಟೆತ್ತಡ್ಕಕ್ಕೆ ಹೋಗಿ ವಾಪಾಸು ಸಂಪ್ಯ ಬಾರಿಕೆಗೆ ಕಾರನ್ನು ಚಲಾಯಿಸಿಕೊಂಡು ಬರುತ್ತಿದ್ದ ಸಮಯ ಸುಮಾರು 10.30 ಗಂಟೆಗೆ ಅರ್ಯಾಪು ಗ್ರಾಮದ ಸಂಪ್ಯ ಮಸೀದಿ ಎದುರು ಬ್ಯಾರಿಕೇಡ್ ದಾಟಿ ಮುಂದೆ ಬರುತ್ತಿದ್ದಂತೆ ರಸ್ತೆ ಎಡಬದಿಯಲ್ಲಿ ಇಬ್ಬರು ಹೆಂಗಸು ನಡೆದುಕೊಂಡು ಬರುತ್ತ ಅವರ ಪೈಕಿ ಒಬ್ಬ ಹೆಂಗಸು ರಸ್ತೆಯ ಬಲಬದಿಗೆ ಒಮ್ಮೆಲೆ ಬಂದಾಗ ಕಾರು ಹೆಂಗಸಿಗೆ ತಾಗಿ ರಸ್ತೆಗೆ ಬಿದ್ದವರನ್ನು ಪಿರ್ಯಾದಿದಾರರು ಹೋಗಿ ನೋಡಿದಾಗ ತಲೆಗೆ ಹಾಗೂ ಇತರ ಕಡೆ ರಕ್ತಗಾಯವಾದವರನ್ನು ಚಿಕಿತ್ಸೆ ಬಗ್ಗೆ ಪುತ್ತೂರಿಗೆ ಕಳುಹಿಸಿಕೊಟ್ಟಿದ್ದು, ಅಷ್ಟರಲ್ಲಿ ಪಿರ್ಯಾದಿದಾರರಿಗೆ ನೋಡಿ ಪರಿಚಯವಿದ್ದ ಫಾರೂಕ್, ಅಬೀಬ್, ನೌಫಾಲ್, ಅಶ್ರಫ್ ಆಲಿ ಹಾಗೂ ಇತರರು ಬಂದು ಅವಾಚ್ಯವಾಗಿ ಬೈದು ಕೈಯಿಂದ ಹೊಡೆದು ಕಾರಿನ ಗಾಜುಗಳನ್ನು ಪುಡಿಮಾಡಿ ಎದುರು ಬಾಡಿಯನ್ನು ಜಖಂಗೊಳಿಸಿದ್ದು, ಅಲ್ಲದೇ ವಾಪಾಸು ಹೊಡೆಯಲು ಬಂದಾಗ ಪಿರ್ಯಾದಿದಾರರು ಅವರಿಂದ ತಪ್ಪಿಸಿಕೊಂಡು ಓಡಿ ಹೋಗುವ ಸಮಯ ಫಾರೂಕ್ ಪಿರ್ಯಾದಿದಾರರಿಗೆ  ಜೀವ ಬೆದರಿಕೆ ಹಾಕಿದ್ದು ರಾತ್ರಿ ಠಾಣೆಗೆ ಬರುವರೇ ಹೆದರಿಕೆ ಆಗಿದ್ದರಿಂದ ಈ ದಿನ ತಡವಾಗಿ ದೂರನ್ನು ನೀಡುತ್ತಿದ್ದು ಕಾರನ್ನು ಜಖಂಗೊಳಿಸಿದ್ದರಿಂದ ರೂ 50,000/- ನಷ್ಟ ಆಗಬಹುದು ಎಂಬಿತ್ಯಾದಿಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಆ.ಕ್ರ 148/17 ಕಲಂ: 143, 147, 504, 323, 427, 506, ಜೊತೆಗೆ 149 ಐ.ಪಿ.ಸಿ.. ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ವೇಣೂರು ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಸಂಜೀವ ಪೂಜಾರಿ (55) ತಂದೆ: ದಿ| ಚನಮು ಪೂಜಾರಿ, ವಾಸ: ತಿಮರಡ್ಡ ಹೊಸಮನೆ, ಸಾವ್ಯ ಗ್ರಾಮ, ಬೆಳ್ತಂಗಡಿ ತಾಲೂಕು ರವರು ನೀಡಿದ ದೂರಿನಂತೆ ಕುಮ್ಕಿ ಮಿತಿಯ ಸರಕಾರಿ ಸ್ಥಳ ಸಾವ್ಯ ಗ್ರಾಮದ ಸರ್ವೆ ನಂಬ್ರ 71/1 ರಲ್ಲಿ ಆರೋಪಿಗಳು ಈ ಹಿಂದೆ ಮಾಡಿದ ರಸ್ತೆಯನ್ನು ದುರಸ್ತಿಗೊಳಿಸಲು ದಿನಾಂಕ 01.12.2017 ರಂದು 16.00 ಗಂಟೆಗೆ ಜೆಸಿಬಿ ಯಂತ್ರವನ್ನು ತಂದಾಗ ರಸ್ತೆ ದುರಸ್ತಿ ಕೆಲಸ ಮಾಡದಂತೆ ಪಿರ್ಯಾದುದಾರರು ಆಕ್ಷೇಪಿಸಿರುವುದರಿಂದ ಜೆಸಿಬಿ ಯಂತ್ರವನ್ನು ಆರೋಪಿ ಲೋಕಯ್ಯ ಪೂಜಾರಿಯವರ ಮನೆಬಳಿ ಕೊಂಡು ಹೋಗಿ ಅಲ್ಲಿ ಕೆಲಸ ಮಾಡಿ ಬಳಿಕ 18.45 ಗಂಟೆಗೆ ಪುನಃ ರಸ್ತೆ ರಿಪೇರಿಗೆ ಜೆಸಿಬಿ ಯಂತ್ರವನ್ನು ತಂದಿರುವ ಬಗ್ಗೆ ಪಿರ್ಯಾದುದಾರರು ಆಕ್ಷೇಪಿಸಿದಾಗ ಆರೋಪಿಗಳಾದ .1 ಸದಾಶಿವ ಹೆಗ್ಡೆ 2. ಹರೀಶ 3. ಲೋಕಯ್ಯ ಪೂಜಾರಿ ಪಿರ್ಯಾದುದಾರರಿಗೆ  ಪರಿಚಯವಿಲ್ಲದ ಇತರ 6 ಜನರು ಅಲ್ಲಿ ಇದ್ದು ಅವರ ಪೈಕಿ ಹರೀಶನು ಪಿರ್ಯಾದುದಾರರ ಮುಖಕ್ಕೆ ಅಲ್ಲೇ ಇದ್ದ ಕಲ್ಲನ್ನು ಎಸೆದು ಗಾಯಗೊಳಿಸಿ ಆರೋಪಿಗಳೆಲ್ಲರೂ ಪಿರ್ಯಾದುದಾರರನ್ನು ತಡೆದು ನಿಲ್ಲಿಸಿ ಕೈಗಳಿಂದ ಎಡಕಾಲಿನ ತೊಡೆಗೆ ಎಡಬದಿ ಬೆನ್ನಿಗೆ, ಬಲಬದಿ ಮುಖಕ್ಕೆ ಹಲ್ಲೆ ನಡೆಸಿದ್ದು ಪಿರ್ಯಾದುದಾರರ ಮಗ ಹರಿಪ್ರಸಾದ್ ನಿಗೂ ಕೈಗಳಿಂದ ಬೆನ್ನಿಗೆ ಹಾಗೂ ಮುಖಕ್ಕೆ ಹಲ್ಲೆ ನಡೆಸಿ ಪಿರ್ಯಾದುದಾರರು ಮನೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡಾಗ ಆರೋಪಿಗಳು ಬಾಗಿಲಿಗೆ ಕಾಲಿನಿಂದ ತುಳಿದು ಜೀವಬೆದರಿಕೆ ಹಾಕಿರುತ್ತಾರೆ ಈ ಬಗ್ಗೆ ಪಿರ್ಯಾದುದಾರರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿರುತ್ತಾರೆ ಈ ಬಗ್ಗೆ . ಈ ವೇಣೂರು ಠಾಣಾ ಅ.ಕ್ರ ನಂಬ್ರ 109/2017ಕಲಂ: 143, 147, 148, 504, 324, 341, 323, 506 ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ