Daily Crime Reports as on 12/10/2017 at 10:00 Hrs

Home / Daily Information / Daily Crime Reports as on 12/10/2017 at 10:00 Hrs

ಅಪಘಾತ ಪ್ರಕರಣ: 2

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ದಿನಾಂಕ: 11-10-2017 ರಂದು ಫಿರ್ಯಾದಿದಾರರಾದ ವಿಜಯ್(20) ತಂದೆ: ಚಿನ್ನಸ್ವಾಮಿ, ವಾಸ: ಬೋಳಂಗಡಿ ಮನೆ, ಪಾಣೆಮಂಗಳೂರು ಗ್ರಾಮ, ಬಂಟ್ವಾಳ ತಾಲೂಕು ಎಂಬವರು ತನ್ನ ಬಾಬ್ತು FZ ಮೋಟಾರ್ ಸೈಕಲ್ ನಂ: KA-19-EQ-9567 ನೇದರಲ್ಲಿ ಸಹಸವಾರ ಶೈಲೇಶ್ ರವರನ್ನು ಕುಳ್ಳಿರಿಸಿಕೊಂಡು ವಿಟ್ಲ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಸಮಯ ಸುಮಾರು 8.20 ಗಂಟೆಗೆ ಬಂಟ್ವಾಳ ತಾಲೂಕು ಗೋಳ್ತಮಜಲು ಗ್ರಾಮದ ಕುಂಟಿಪಾಪು  ಎಂಬಲ್ಲಿಗೆ ತಲುಪಿದಾಗ ವಿಟ್ಲ ಕಡೆಯಿಂದ ನೊಂದಣಿಯಾಗದ FZ ಮೋಟಾರ್ ಸೈಕಲ್ ಸವಾರ ಸಲ್ಮಾನ್ ಪಾರಿಸ್ ರವರು ಮೋಟಾರ್ ಸೈಕಲನ್ನು ಅತಿವೇಗ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ರಸ್ತೆಯ ತಪ್ಪು ಬದಿಗೆ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋಟಾರ್ ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ ಎರಡೂ ಮೋಟಾರ್ ಸೈಕಲ್ ಸವಾರ ಮತ್ತು ಸಹಸವಾರರು ರಸ್ತೆಗೆ ಬಿದ್ದು ರಕ್ತಗಾಯಗೊಂಡಿದ್ದು, ಫಿರ್ಯಾದಿ ಮತ್ತು ಸಹಸವಾರ ಶೈಲೇಶ್ ರವರು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿದ್ದು, ಆರೋಪಿ ಸವಾರ ಸಲ್ಮಾನ್ ಪಾರಿಸ್ ರವರನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿಗೆ ಕಳಹಿಸಲಾಗಿರುತ್ತದೆ.ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 154/2017 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಉಪ್ಪಿನಂಗಡಿ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಮಧು ಕೆ ಕೆ ಪ್ರಾಯ 45 ತಂದೆ:ಕುಂಞನ್ನ ವಾಸ:ಆರಂಪಾದೆ ಮನೆ ಶಿಬಾಜೆ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರು ದಿನಾಂಕ;10-10-2017 ರಂದು ಪುತ್ತೂರಿನಲ್ಲಿ ಡ್ರೀಲ್ಲಿಂಗ್‌ ಕೆಲಸ ಮುಗಿಸಿಕೊಂಡು ತನ್ನ ಬಾಬ್ತು ಮೋಟಾರು ಸೈಕಲ್ ನಂಬ್ರ ಕೆಎ-19-ಇಎ-6145ನೇದನ್ನು ಚಲಾಯಿಸಿಕೊಂಡು ಹೊರಟು ಉಪ್ಪಿನಂಗಡಿ ಮಾರ್ಗವಾಗಿ ಬೆಳಿಗ್ಗೆ 11-30 ಗಂಟೆಗೆ ಪುತ್ತೂರು ತಾಲೂಕು ನೆಲ್ಯಾಡಿ ಗ್ರಾಮದ ಎಲೈಟ್ ಲಾಡ್ಜಿನ ಬಳಿ ಇರುವ ಪೆಟ್ರೋಲ್ ಪಂಪ್‌ಗೆ ಪೆಟ್ರೋಲ್ ಹಾಕುವರೇ ರಾ ಹೆ 75 ಡಾಮಾರು ರಸ್ತೆಯಲ್ಲಿ ತಾನು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರು ಸೈಕಲ್‌ನ ಇಂಡಿಕೇಟರ್ ಹಾಕಿ ನಿಲ್ಲಿಸಿದಾಗ ಹಿಂಬದಿಯಿಂದ ಕೆಎ-46-ಜೆ-456ನೇ ನಂಬ್ರದ ಮೋಟಾರು ಸೈಕಲ್‌ನ್ನು ಅದರ ಸವಾರ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರು ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಎಸೆಯಲ್ಪಟ್ಟು ತಲೆ,ಮುಖ,ಎದೆಗೆ ಬಲಕಾಲಿನ ಗಂಟಿಗೆ ರಕ್ತ  ಗಾಯವಾಗಿ ಪಿರ್ಯಾದಿದಾರರ ಮೋಟಾರು ಸೈಕಲ್ ಜಖಂಗೊಂಡಿರುತ್ತದೆ ಹಾಗೂ ಹಿಂದಿನಿಂದ ಬಂದ ಮೋಟಾರು ಸೈಕಲ್ ಸವಾರ ತೌಸೀಫ್ ಎಂಬಾತನಿಗೆ ರಕ್ತ ಗಾಯವಾಗಿ ಮೋಟಾರು ಸೈಕಲ್ ಜಖಂಗೊಂಡಿದ್ದು. ಪಿರ್ಯಾದಿದಾರರು ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಫಸ್ಟ್‌ ನ್ಯೂರೊ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿದ್ದು. ಹಾಗೂ ಆಪಾದಿತ  ತೌಸೀಫ್ ಕೂಡಾ  ಮಂಗಳೂರು ಫಸ್ಟ್‌ ನ್ಯೂರೊ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿರುವುದಾಗಿದೆ .ಈ ಬಗ್ಗೆ ಉಪ್ಪಿನಂಗಡಿ ಠಾಣಾ ಅ.ಕ್ರ 179/2017 ಕಲಂ:279,337  ಐ.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 2

  • ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಕರುಣಾಕರ ಕುಲಾಲ್ (30) ತಂದೆ: ಚಂದಪ್ಪ ಮೂಲ್ಯ ವಾಸ: ಅಂತರ ಮನೆ, ನರಿಕೊಂಬು ಗ್ರಾಮ, ಬಂಟ್ವಾಳ ತಾಲೂಕು ಎಂಬವರ ತಂದೆಯವರು ದಿನಾಂಕ 10-10-2017 ರಂದು ಬೆಳಗ್ಗೆ ಮನೆಯಿಂದ ಕೆಲಸಕ್ಕೆ ಹೋದವರು ಮನೆಗೆ ಬಾರದೇ ಇದ್ದು, ದಿನಾಂಕ 11-10-2017 ರಂದು ಬೆಳಗ್ಗೆ 10.30 ಗಂಟೆ ಸಮಯಕ್ಕೆ ದಯಾನಂದ ಎಂಬುವವರು ಪಿರ್ಯಾದಿದಾರರಿಗೆ ಕರೆ ಮಾಡಿ ನಿಮ್ಮ ತಂದೆಯವರು ಅಂತರ ಎಂಬಲ್ಲಿ ಗುಡ್ಡೆಯಲ್ಲಿ ಬಿದ್ದಿರುವುದಾಗಿ ತಿಳಿಸಿದಂತೆ ಪಿರ್ಯಾದಿದಾರರ ಕೂಡಲೇ ಅಲ್ಲಿಗೆ ಹೋಗಿ ನೋಡಿದಾಗ ಪಿರ್ಯಾದಿದಾರರ ತಂದೆಯವರು ಯಾವುದೋ ವಿಷ ಪದಾರ್ಥ ಸೇವಿಸಿ ಮೃತಪಟ್ಟಿರುವುದಾಗಿ ಕಂಡು ಬಂದಿರುತ್ತದೆ.ಈ ಬಗ್ಗೆ ಬಂಟ್ವಾಳ ನಗರ ಠಾಣಾ ಯುಡಿಆರ್ ನಂಬ್ರ 48/2017 ಕಲಂ 174  ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬೆಳ್ತಂಗಡಿ ಪೊಲೀಸ್ ಠಾಣೆ : ದಿನಾಂಕ: 09.10.2017 ರಂದು ಸುಮಾರು 18.00 ಗಂಟೆಗೆ  ಬೆಳ್ತಂಗಡಿ ತಾಲೂಕು ಸವಣಾಲು ಗ್ರಾಮದ ಗುತ್ತಿನ ಬೈಲು ಎಂಬಲ್ಲಿರುವ ಪಿರ್ಯಾದಿದಾರರಾದ ರಾಜು (45 ವರ್ಷ), ತಂದೆ: ಕರಿಯ, ವಾಸ: ಗುತ್ತಿನ ಬೈಲು ಮನೆ, ಸವಣಾಲು ಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ತಾಲೂಕು  ಎಂಬವರ ಮನೆಯಲ್ಲಿ ಪಿರ್ಯಾದುದಾರರ ತಂದೆ ಕರಿಯ  ಎಂಬವರು ಕಾಲುಗಂಟು ನೋವಿನಿಂದ ಬಳಲುತ್ತಿದ್ದುದ್ದಲ್ಲದೇ ವಿಪರೀತ ಅಮಲು ಪದಾರ್ಥ ಸೇವನೆ ಮಾಡುವ ಅಭ್ಯಾಸ ಹೊಂದಿದ್ದವರಾಗಿದ್ದು, ಇದೇ ವಿಚಾರದಲ್ಲಿ  ಜೀವನದಲ್ಲಿ ಜಿಗುಪ್ಸೆಗೊಂಡು ಇಲಿಗಳಿಗೆ ಉಪಯೋಗಿಸುವ ವಿಷ ಪದಾರ್ಥ ಸೇವಿಸಿದವರನ್ನು ಚಿಕಿತ್ಸೆ ಬಗ್ಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್‌ಲಾಕ್‌  ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲು ಮಾಡಿ ಚಿಕಿತ್ಸೆಯಲ್ಲಿರುವ ಸಮಯ  ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 10.10.2017 ರಂದು 17.00 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿದೆ.ಈ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣಾ ಯುಡಿಆರ್‌ 39/2017  ಕಲಂ: 174 ಸಿ ಆರ್‌ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.