Daily Crime Reports as on 09/01/2018 at 10:00 Hrs

Daily Crime Reports as on 09/01/2018 at 10:00 Hrs

Daily Information
ಅಪಘಾತ ಪ್ರಕರಣ: ೦2 ಬೆಳ್ಳಾರೆ ಪೊಲೀಸ್ ಠಾಣೆ: ದಿನಾಂಕ 07-01-2017 ರಂದು 21-00 ಗಂಟೆಗೆ ಪುತ್ತೂರು-ನಿಂತಿಕಲ್ಲು ಸಾರ್ವಜನಿಕ ಡಾಮಾರು ರಸ್ತೆಯ ಪುತ್ತೂರು ತಾಲೂಕು ಬೆಳಂದೂರು ಗ್ರಾಮದ ಕೆಲೆಂಬಿರಿ ಎಂಬಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರಾದ ಚಿನ್ನಪ್ಪ ಪೂಜಾರಿ, ಪ್ರಾಯ 63 ವರ್ಷ, ತಂದೆ: ಗಿರಿಯಪ್ಪ ಪೂಜಾರಿ, ವಾಸ: ಕಡಮ್ಮಾಜೆ ಮನೆ, ಕುದ್ಮಾರು ಗ್ರಾಮ, ಪುತ್ತೂರು ತಾಲೂಕು ಎಂಬವರಿಗೆ ಅಪರಿಚಿತ ಮೋಟಾರು ಸೈಕಲ್ ಸವಾರರು ಅವರ ಬಾಬ್ತು ಮೋಟಾರು ಸೈಕಲ್ ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿ ಹಿಂದಿನಿಂದ ಡಿಕ್ಕಿಹೊಡೆಸಿದ ಪರಿಣಾಮ ಜಿನ್ನಪ್ಪ ಪೂಜಾರಿಯವರು ಮಣ್ಣು ರಸ್ತೆಯಲ್ಲಿ ಬಿದ್ದು ಅವರ ಬಲ ಕೈಗೆ, ತಲೆಗೆ, ಬಲ ಕಾಲಿನ ಹೆಬ್ಬೆರಳಿಗೆ, ಗುದ್ದಿದ ಹಾಗೂ ರಕ್ತಗಾಯಗಳಾಗಿದ್ದು, ಅಪಘಾತದ ಮಾಹಿತಿಯನ್ನು ಆರೋಪಿ ಮೋಟಾರು ಸೈಕಲ್ ಸವಾರರು ಪೊಲೀಸರಿಗೆ ತಿಳಿಸದೇ, ಗಾಯಾಳುವಿಗೆ ಚಿಕಿತ್ಸೆಯ ವ್ಯವಸ್ಥೆಯನ್ನು ಮಾಡದೇ ಅಪಘಾತ ಸ್ಥಳದಿಂದ ಮೋಟಾರು ಸೈಕಲ್ ಸಮೇತ ಪರಾರಿಯಾಗಿರುತ್ತಾರೆ.ಮತ್ತು ಗಾಯಾಳು ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ ಆ.ಕ್ರ 03/2018 ಕಲಂ : 279,337 ಐಪಿಸಿ ಮತ್ತು ಕಲಂ 134(ಎ)&(ಬಿ) ಐಎಂವಿ ಆಕ್ಟ್.  ಯಂತೆ ಪ್ರಕರಣ ದಾಖಲಾಗಿರುತ್ತದೆ.   ಸುಳ್ಯ ಪೊಲೀಸ್ ಠಾಣೆ: ದಿನಾಂಕ 08.01.2018ರಂದು 16.30 ಗಂಟೆಗೆ ತನ್ನ ಬಾಬ್ತು ಕೆಎ-21-ಪಿ-1330 ನೇ ಓಮ್ನಿ ಕಾರಿನಲ್ಲಿ ಉಬರಡ್ಕ ಎಂಬಲ್ಲಿಗೆ ಬಂದು ಬಳಿಕ ತನ್ನ…
Read More