Daily Crime Reports as on 04/01/2018 at 10:00 Hrs

Daily Crime Reports as on 04/01/2018 at 10:00 Hrs

Daily Information
ಅಪಘಾತ ಪ್ರಕರಣ: ೦3 ಪುತ್ತೂರು ಸಂಚಾರ ಪೊಲೀಸ್ ಠಾಣೆ: ದಿನಾಂಕ 03-01-2018 ರಂದು 16.00 ಗಂಟೆಗೆ ಮೋಟಾರ್‌ ಸೈಕಲ್‌ ಸವಾರ ಯಕ್ಷಿತ್‌ಪೂರ್ಣ ಎಂಬವರು ಮೋಟಾರ್‌ ಸೈಕಲ್‌ ನೋಂದಣಿ ನಂಬ್ರ KA-21-X-1729 ನೇಯದನ್ನು ಜ್ಯೂನಿಯರ್‌ ಕಾಲೇಜ್‌ ಕಡೆಯಿಂದ ಕೊಂಬೆಟ್ಟು ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗಿ ಪುತ್ತೂರು ತಾಲೂಕು ಪುತ್ತೂರು ಕಸ್ಬಾ ಗ್ರಾಮದ ಕೊಂಬೆಟ್ಟು ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಿದವನನ್ನು ಪಿರ್ಯಾದುದಾರರಾದ ಅಜಯ್‌ ಕುಮಾರ್‌ ಪಿಎಸ್‌ಐ ಪುತ್ತೂರು ನಗರ ಪೊಲೀಸ್‌ ಠಾಣೆ ಪುತ್ತೂರು ರವರು ನಿಲ್ಲಿಸಿ ವಿಚಾರಿಸಿದಾಗ ಮೋಟಾರ್‌ ಸೈಕಲ್‌ ಸವಾರನಿಗೆ 17 ವರ್ಷ ಪ್ರಾಯವಾಗಿದ್ದು, ಸದ್ರಿ ಮೋಟಾರ್‌ ಸೈಕಲಿನ ಮಾಲೀಕ ಚೆನ್ನಪ್ಪ ಗೌಡರವರು ಮೋಟಾರ್‌ ಸೈಕಲನ್ನು ಚಲಾಯಿಸಲು ನೀಡಿರುವುದರಿಂದ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  03/2018 ಕಲಂ:  279 ಐಪಿಸಿ  ಮತ್ತು 4, 5 ಮೊ ವಾ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.   ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ದಿನಾಂಕ: 02.01.2018 ರಂದು  ಪಿರ್ಯಾದಿದಾರರಾದ ಕೃಷ್ಣ (63) ತಂದೆ: ಗುರುವ ಮುಗೇರ, ವಾಸ: ಅಲ್ಲಿಪಾದೆ ಪೋಸ್ಟ್, ಸರಪಾಡಿ ಗ್ರಾಮ, ಬಂಟ್ವಾಳ ತಾಲೂಕು. ರವರು   ತೆಂಗಿನ ಕಾಯಿಯನ್ನು ಮಾರಾಟಕ್ಕೆ ಕೊಂಡು ಹೋಗುವರೇ ಅಬ್ದುಲ್  ಕರೀಂ ಎಂಬವರ ಬಾಬ್ತು KA-19-A-6610 ನೇ ಆಟೋ ರಿಕ್ಷಾವನ್ನು ಬಾಡಿಗೆಗೆ ಗೊತ್ತುಪಡಿಸಿ…
Read More