Daily Crime Reports as on 07/12/2017 at 18:00 Hrs

Daily Crime Reports as on 07/12/2017 at 18:00 Hrs

Daily Information
ಅಪಘಾತ ಪ್ರಕರಣ: ೦1 ವಿಟ್ಲ ಪೊಲೀಸ್ ಠಾಣೆ: ದಿನಾಂಕ: 05-12-2017 ರಂದು ಕೆಎ-19-ಎಫ್-2726 ನೇ ನಂಬ್ರದ ಕೆ.ಎಸ್‌.ಆರ್‌.ಟಿ.ಸಿ ಬಸ್ಸನ್ನು ಅದರ ಚಾಲಕ ವಿಟ್ಲ ಕಡೆಯಿಂದ ಪುತ್ತೂರು ಕಡೆಗೆ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬೆಳಿಗ್ಗೆ ಸುಮಾರು 10-50 ಗಂಟೆ ಸಮಯಕ್ಕೆ ಬಂಟ್ವಾಳ ತಾಲೂಕು ವಿಟ್ಲ ಮುಡ್ನೂರು ಗ್ರಾಮದ ಕಂಬಳಬೆಟ್ಟು ಜಂಕ್ಷನ್ ಬಳಿ ತಲುಪಿದಾಗ ಸದ್ರಿ ಬಸ್ಸನ್ನು ಅದರ ಚಾಲಕ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಸದ್ರಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪಿರ್ಯಾದುದಾರರಾದ ಲೋಕೇಶ್ ನಾಯ್ಕ ತಂದೆ: ಕೃಷ್ಣಪ್ಪ ನಾಯ್ಕ ವಾಸ: ಮೇರೋಟ್ಟು ಮನೆ, ಕನ್ಯಾನ ಗ್ರಾಮ, ಬಂಟ್ವಾಳ ತಾಲೂಕು.ಎಂಬವರ ಪರಿಚಯದ ಸತೀಶ ಯಾನೆ ಉದಯ ಎಂಬವರು ಬಸ್ಸಿನಿಂದ ಎಸೆಯಲ್ಪಟ್ಟು ರಸ್ತೆಗೆ ಬಿದ್ದು ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಕೆ.ಎಸ್.ಆರ್.ಟಿ.ಸಿ ಬಸ್ಸಿನ ಚಾಲಕ ಹಾಗೂ ಪಿರ್ಯಾದುದಾರರು ಖಾಸಗಿ ವಾಹನದಲ್ಲಿ ವಿಟ್ಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಿ ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಸಾಗಿಸಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿ  ಒಳರೋಗಿಯಾಗಿ ದಾಖಲಿಸಿಕೊಂಡಿದ್ದು,ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅಕ್ರ 257/2017 ಕಲಂ 279,337 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.
Read More
Daily Crime Reports as on 07/12/2017 at 10:00 Hrs

Daily Crime Reports as on 07/12/2017 at 10:00 Hrs

Daily Information
ಕಳವು ಪ್ರಕರಣ: ೦1 ವಿಟ್ಲ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಮಹಮ್ಮದ್ ಕೆ (30) ತಂದೆ: ಹಸೈನಾರ್ ವಾಸ: ಉಕ್ಕುಡ ದರ್ಬೆ ಮನೆ  ವಿಟ್ಲ ಕಸಬಾ ಗ್ರಾಮ ಬಂಟ್ವಾಳ ತಾಲೂಕು ಎಂಬವರು ತನ್ನ ಮನೆಯವರೊಂದಿಗೆ ದಿನಾಂಕ 06.12.2017 ರಂದು ಸಂಜೆ 5.30 ಗಂಟೆಗೆ ಮನೆಗೆ ಬೀಗ ಹಾಕಿ ಸಂಬಂದಿಕರ ಮನೆಗೆ ಮದುವೆಗೆ ಹೋದವರು ವಾಪಾಸ್ಸು ಮನೆಗೆ ದಿನಾಂಕ 07.12.2017 ರಂದು ರಾತ್ರಿ 12.30 ಗಂಟೆಗೆ  ಬಂದು ನೋಡಲಾಗಿ ಮನೆಯ ಹಿಂದಿನ ಬಾಗಿಲನ್ನು ಒಡೆದು  ಮನೆಯ ಅಕ್ಕಿ ಡಬ್ಬದಲ್ಲಿ ಅಡಗಿಸಿಟ್ಟ  ಸುಮಾರು 23 ಪವನ್ ತೂಕದ ಚಿನ್ನದ ಸರ,12 ಪವನ್ ತೂಕದ  ಚಿನ್ನದ ಬಳೆಗಳು ,ಸುಮಾರು 7 ವರೆ  ಪವನ್ ತೂಕದ ಸೊಂಟದ ಪಟ್ಟಿ  ಮತ್ತು 1 ಪವನ್ ತೂಕದ  ಮಣಿ ಸರ ಕಳವಾಗಿದ್ದು ಇದರ ಒಟ್ಟು  ಮೌಲ್ಯ  1050000/- ಲಕ್ಷ ರೂಪಾಯಿಗಳು  ಆಗಿರುತ್ತದೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅಕ್ರ 256/2017 ಕಲಂ 454, 457, 380,  ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.   ಅಸ್ವಾಭಾವಿಕ ಮರಣ ಪ್ರಕರಣ: ೦1 ಧರ್ಮಸ್ಥಳ ಪೊಲೀಸ್ ಠಾಣೆ : ದಿನಾಂಕ: 04/12/2017 ರಂದು 19.30 ಗಂಟೆಗೆ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ  ಶ್ರೀ ಕ್ಷೇತ್ರ ಧರ್ಮಸ್ಥಳದ ಬಾಬ್ತು  ಶರಾವತಿ ವಸತಿ ಗೃಹದಲ್ಲಿ 343 ನಂಬ್ರದ ಕೊಠಡಿಯಲ್ಲಿ ಬಾಡಿಗೆಗೆ ಪಡೆದಿದ್ದ ಉಮಾಶಂಕರ್ ಎಂಬವರು…
Read More