Daily Crime Reports as on 01/12/2017 at 10:00 Hrs

Daily Crime Reports as on 01/12/2017 at 10:00 Hrs

Daily Information
ಅಪಘಾತ ಪ್ರಕರಣ: ೦2 ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ದಿನಾಂಕ; 29-11-2017 ರಂದು ಫಿರ್ಯಾದಿದಾರರಾದ ಶ್ರೀಮತಿ ವಿನೋದಾ, ಪ್ರಾಯ 50 ವರ್ಷ, ಜನತಾ ಕಾಲನಿ ಕಾಡಬೆಟ್ಟು ಗ್ರಾಮ, ಬಂಟ್ವಾಳ ತಾಲೂಕು ಎಂಬವರು ತನ್ನ ಮನೆಯ ಕರೆಂಟ್ ಬಿಲ್ ಕಟ್ಟಲೆಂದು ವಗ್ಗ ಕಾರಿಂಜ ಕ್ರಾಸ್‌ಗೆ ಹೋಗಿದ್ದು, ಸಮಯ ಸುಮಾರು 11.00 ಗಂಟೆಗೆ ಬಂಟ್ವಾಳ ತಾಲೂಕು ಕಾವಳಪಡೂರು ಗ್ರಾಮದ ವಗ್ಗ ಪೇಟೆಯಲ್ಲಿರುವ ಡಿ’ಸೋಜಾ ಕಾಂಪ್ಲೆಕ್ಟ್ ಎದುರು ರಸ್ತೆಯಲ್ಲಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿರುವಾಗ ಬಿ ಸಿ ರೋಡ್ ಕಡೆಯಿಂದ KA-19-EP-8557 ನೇ ಆಕ್ಟಿವಾ ಸ್ಕೂಟರನ್ನು ಅದರ ಸವಾರ ಅತಿವೇಗ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರಿಗೆ ಢಿಕ್ಕಿ ಹೊಡೆಸಿ ಅಪಘಾತಪಡಿಸಿದ ಪರಿಣಾಮ ಫಿರ್ಯಾದಿದಾರರು ರಸ್ತೆಗೆ ಬಿದ್ದು, ಬಲಕಣ್ಣಿಗೆ ರಕ್ತಗಾಯ, ಬಲಬದಿ ದವಡೆಗೆ, ಬಲಕಾಲಿನ ಮೊಣಗಂಟಿಗೆ, ಗುದ್ದಿದ ಗಾಯ ಮತ್ತು ಬಲ ಕೈ ತಟ್ಟಿಗೆ ಹಾಗೂ ಎಡಕೈ ತಟ್ಟಿಗೆ ತರಚಿದ ಗಾಯವಾಗಿರುತ್ತದೆ. ಗಾಯಾಳು ಚಿಕಿತ್ಸೆಯ ಬಗ್ಗೆ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು, .ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 171/2017 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.   ಪುಂಜಾಲಕಟ್ಟೆ ಪೊಲೀಸ್ ಠಾಣೆ: ದಿನಾಂಕ 29-11-2017 ರಂದು ಸಂಜೆ 6.00 ಗಂಟೆಗೆ  ಫಿರ್ಯಾದಿದಾರರಾರ ಶ್ರೀಮತಿ ಪದ್ಮಾವತಿ (37), ಗಂಡ: ಕೃಷ್ಣಪ್ಪ ನಾಯ್ಕ,ವಾಸ: ಕುಂಚಾಡಿ…
Read More