Daily Crime Reports as on 12/10/2017 at 18:00 Hrs

Daily Crime Reports as on 12/10/2017 at 18:00 Hrs

Daily Information
ಜೀವ ಬೆದರಿಕೆ  ಪ್ರಕರಣ: ೦1 ಧರ್ಮಸ್ಥಳ ಪೊಲೀಸ್ ಠಾಣೆ : ದಿನಾಂಕ: 09/10/2017 ರಂದು ಸಂಜೆ 5.30 ಗಂಟೆಗೆ ಪಿರ್ಯಾದಿದಾರರಾದ ಚಂದ್ರಶೇಖರ ಶೆಟ್ಟಿ ಪ್ರಾಯ:29 ವರ್ಷ ತಂದೆ; ವಿಶ್ವನಾಥ ಶೆಟ್ಟಿ ವಾಸ: ಪಲಸ್ತಡ್ಕ ಮನೆ ಅರಸಿನಮಕ್ಕಿ ಅಂಚೆ ಹತ್ಯಡ್ಕ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರು ಟೀ ಕುಡಿಯಲೆಂದು ತನ್ನ ಮೋಟಾರ ಸೈಕಲ್ ನಲ್ಲಿ ಚಾಲುಕ್ಯ ವೈನ್ಸ ನಿಂದ ಅರಸಿನಮಕ್ಕಿ ಕಡೆಗೆ ಹೋಗುತ್ತಾ ಬೆಳ್ತಂಗಡಿ ತಾಲೂಕು ಹತ್ಯಡ್ಕ ಗ್ರಾಮದ ಅರಸಿನಮಕ್ಕಿ ಸೌಂದರ್ಯ ಪ್ಯಾನ್ಸಿ ಎದುರುಗಡೆ ತಲುಪುತ್ತಿದಂತೆ ಅರಸಿನಮಕ್ಕಿ ಸೇವಾ ಕೇಂದ್ರದ ಕಡೆಯಿಂದ ಕಿರಣ ಎಂಬಾತನು ಇನ್ನೊಬ್ಬನೊಂದಿಗೆ ಮೋಟಾರ ಸೈಕಲ್ ನಲ್ಲಿ ಬಂದು ಪಿರ್ಯಾದಿದಾರರ ಮೋಟಾರ ಸೈಕಲಿಗೆ ತನ್ನ ಮೋಟಾರ ಸೈಕಲನ್ನು  ಅಡ್ಡವಿಟ್ಟು ತಾನು ತಂದಿದ್ದ ರಾಡ್ ನಿಂದ ಪಿರ್ಯಾದಿದಾರರ ತಲೆಗೆ ಹೊಡೆದು ಪಿರ್ಯಾದಿದಾರರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಳೆದನು ಅಲ್ಲದೇ ಜೇಬಿನಲ್ಲಿದ್ದ 3 ಸಾವಿರ ರೂಪಾಯಿಯನ್ನು ತಗೆದಿರುತ್ತಾನೆ. ಆ ಸಮಯ ಕಿರಣನ ಜೊತೆಯಲ್ಲಿದ್ದ ಇನ್ನೊಬ್ಬನು ಪಿರ್ಯಾದಿದಾರರ ಎಡ ಕಿವಿಗೆ ಕೈಯಿಂದ ಹೊಡೆದನು, ಆಗ ಅಲ್ಲೆ ನಿಂತಿದ್ದ ಆರೋಪಿಯ ಸ್ನೆಹಿತ ಶಶಿ ಎಂಬಾತನು ಕಿರಣ ನಲ್ಲಿ ಆತನನ್ನು ಸುಮ್ಮನೆ ಬಿಡಬೇಡ ಎಂದು ಹೇಳಿದಾಗ ಕಿರಣ ನು ಪುನ ರಾಡ್ ನಿಂದ ಪಿರ್ಯಾದುದಾರರ ಬಲ ಕಾಲಿನ ಮಣಿ ಗಂಟಿಗೆ ಹೊಡೆದು ನೋವುನ್ನುಂಟು ಮಾಡಿದ್ದಲ್ಲದೆ ಜೀವ ಬೆದರಿಕೆ  ಹಾಕಿ ಹೋಗಿರುತ್ತಾರೆ, ಗಾಯಗೊಂಡ ಪಿರ್ಯಾದುದಾರರು…
Read More
Daily Crime Reports as on 12/10/2017 at 10:00 Hrs

Daily Crime Reports as on 12/10/2017 at 10:00 Hrs

Daily Information
ಅಪಘಾತ ಪ್ರಕರಣ: ೦2 ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ದಿನಾಂಕ: 11-10-2017 ರಂದು ಫಿರ್ಯಾದಿದಾರರಾದ ವಿಜಯ್(20) ತಂದೆ: ಚಿನ್ನಸ್ವಾಮಿ, ವಾಸ: ಬೋಳಂಗಡಿ ಮನೆ, ಪಾಣೆಮಂಗಳೂರು ಗ್ರಾಮ, ಬಂಟ್ವಾಳ ತಾಲೂಕು ಎಂಬವರು ತನ್ನ ಬಾಬ್ತು FZ ಮೋಟಾರ್ ಸೈಕಲ್ ನಂ: KA-19-EQ-9567 ನೇದರಲ್ಲಿ ಸಹಸವಾರ ಶೈಲೇಶ್ ರವರನ್ನು ಕುಳ್ಳಿರಿಸಿಕೊಂಡು ವಿಟ್ಲ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಸಮಯ ಸುಮಾರು 8.20 ಗಂಟೆಗೆ ಬಂಟ್ವಾಳ ತಾಲೂಕು ಗೋಳ್ತಮಜಲು ಗ್ರಾಮದ ಕುಂಟಿಪಾಪು  ಎಂಬಲ್ಲಿಗೆ ತಲುಪಿದಾಗ ವಿಟ್ಲ ಕಡೆಯಿಂದ ನೊಂದಣಿಯಾಗದ FZ ಮೋಟಾರ್ ಸೈಕಲ್ ಸವಾರ ಸಲ್ಮಾನ್ ಪಾರಿಸ್ ರವರು ಮೋಟಾರ್ ಸೈಕಲನ್ನು ಅತಿವೇಗ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ರಸ್ತೆಯ ತಪ್ಪು ಬದಿಗೆ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋಟಾರ್ ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ ಎರಡೂ ಮೋಟಾರ್ ಸೈಕಲ್ ಸವಾರ ಮತ್ತು ಸಹಸವಾರರು ರಸ್ತೆಗೆ ಬಿದ್ದು ರಕ್ತಗಾಯಗೊಂಡಿದ್ದು, ಫಿರ್ಯಾದಿ ಮತ್ತು ಸಹಸವಾರ ಶೈಲೇಶ್ ರವರು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿದ್ದು, ಆರೋಪಿ ಸವಾರ ಸಲ್ಮಾನ್ ಪಾರಿಸ್ ರವರನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿಗೆ ಕಳಹಿಸಲಾಗಿರುತ್ತದೆ.ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 154/2017 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.   ಉಪ್ಪಿನಂಗಡಿ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಮಧು ಕೆ ಕೆ ಪ್ರಾಯ 45…
Read More