Daily Crime Reports as on 09/10/2017 at 18:00 Hrs

Daily Crime Reports as on 09/10/2017 at 18:00 Hrs

Daily Information
ಇತರೆ  ಪ್ರಕರಣ: ೦1 ವಿಟ್ಲ ಪೊಲೀಸ್ ಠಾಣೆ : ದಿನಾಂಕ: 09-10-2017 ರಂದು ಬೆಳಿಗ್ಗೆ ಸುಮಾರು 11-00 ಗಂಟೆ ಸಮಯಕ್ಕೆ ಪಿರ್ಯಾದುದಾರರಾದ ಜಿ. ರುಕ್ಮಯ್ಯ ಮೂಲ್ಯ ಸಹಾಯಕ ಪೊಲೀಸ್ ಉಪ ನಿರೀಕ್ಷಕರು, ವಿಟ್ಲ ಪೊಲೀಸ್ ಠಾಣೆ,ರವರಿಗೆ ದೊರೆತ ಖಚಿತ ಮಾಹಿತಿಯಂತೆ ಬಂಟ್ವಾಳ ತಾಲೂಕು ಅನಂತಾಡಿ ಗ್ರಾಮದ ಗೋಳಿಕಟ್ಟೆ ಎಂಬಲ್ಲಿಗೆ ಬೆಳಿಗ್ಗೆ ಸುಮಾರು 11-30 ಗಂಟೆ ಸಮಯಕ್ಕೆ ತಲುಪಿ ಸಿಬ್ಬಂಧಿಗಳ ಜೊತೆಗೆ ದಾಳಿ ನಡೆಸಲಾಗಿ ಗುಡ್ಡ ಜಾಗದಲ್ಲಿ ಆರೋಪಿಗಳು ಹಣವನ್ನು ಪಣವಾಗಿ ಇಟ್ಟುಕೊಟ್ಟು 2 ಕೋಳಿಗಳ ಕಾಲುಗಳಿಗೆ ಬಾಳುಗಳನ್ನು ಕಟ್ಟಿ ಜೂಜು ಆಟ ಆಡುತ್ತಿದ್ದ 3 ಜನ ಆರೋಪಿಗಳು ಓಡಿ ಹೋಗಿದ್ದು, ಅಲ್ಲದೇ ಸ್ಥಳದಲ್ಲಿ ಜೂಜು ಆಟಕ್ಕೆ ಉಪಯೋಗಿಸಿದ 6 ಕೋಳಿಗಳನ್ನು, 2 ಬಾಳುಗಳನ್ನು ಹಾಗೂ ನಗದು ರೂ. 200/- ನ್ನು ಪಂಚರ ಸಮಕ್ಷಮ ಸ್ವಾಧೀನಪಡಿಸಿಕೊಂಡಿರುವುದಾಗಿದೆ.ಈ ಬಗ್ಗೆ ವಿಟ್ಲ ಠಾಣಾ ಅಕ್ರ 209/2017 ಕಲಂ 87 ಕೆ.ಪಿ ಆಕ್ಟ್  ಯಂತೆ ಪ್ರಕರಣ ದಾಖಲಾಗಿರುತ್ತದೆ.
Read More
Daily Crime Reports as on 09/10/2017 at 10:00 Hrs

Daily Crime Reports as on 09/10/2017 at 10:00 Hrs

Daily Information
ಅಪಘಾತ ಪ್ರಕರಣ: ೦2 ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಫಿರ್ಯಾದಿದಾರರಾದ ಭವ್ಯರಾಜ್ (29), ತಂದೆ: ರಾಮ ಪೂಜಾರಿ, ವಾಸ: ಜಕ್ರಿಬೆಟ್ಟು ಪಲ್ಕೆ ಮನೆ, ಬಂಟ್ವಾಳ ಕಸಬಾ ಗ್ರಾಮ, ಬಂಟ್ವಾಳ ತಾಲೂಕು ಎಂಬವರು ಗುತ್ತಿಗೆದಾರ ಮೇಲ್ವಿಚಾರಕನಾಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ 07/10/2017 ರಂದು ಮಂಗಳೂರಿನಲ್ಲಿ ನಡೆಯುತ್ತಿರುವ ಕಟ್ಟಡ ಕಾಮಾಗಾರಿಯ ಕೆಲಸದ ನಿಮಿತ್ತ ಹೋದವರು ಕೆಲಸ ಮುಗಿಸಿ ವಾಪಾಸ್ ದಿನಾಂಕ 08/10/2017 ರಂದು ಬೆಳಗ್ಗಿನ ಜಾವ ಮಂಗಳೂರಿನಿಂದ ಹೊರಟು ತನ್ನ ಮೋಟಾರು ಸೈಕಲಿನಲ್ಲಿಮನೆ ಕಡೆಗೆ ಬರುತ್ತಾ ಬೆಳಿಗ್ಗೆ ಸಮಯ ಸುಮಾರು 05-45 ಗಂಟೆಗೆ ಬಂಟ್ವಾಳ ತಾಲೂಕು ಅಮ್ಟಾಡಿ ಗ್ರಾಮದ ಭಂಡಾರಿಬೆಟ್ಟು ಎಂಬಲ್ಲಿಗೆ ತಲುಪಿದಾಗ ಬೆಳ್ತಂಗಡಿ ಕಡೆಯಿಂದ ಕಾರೊಂದನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆ ನಿರ್ಲಕ್ಷತನದಿಂದ ರಸ್ತೆಯ ಎಡಬದಿಗೆ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿರವರಿಗೆ  ಢಿಕ್ಕಿ ಹೊಡೆದು ಕಾರನ್ನು ನಿಲ್ಲಿಸದೇ ಪರಾರಿಯಾಗಿರುತ್ತಾರೆ. ಫಿರ್ಯಾದಿದಾರರು ಕಾರಿನ ನಂಬ್ರ ಗಮನಿಸಿದಲ್ಲಿ ಕೆಎ- 1029  ಎಂಬುದಾಗಿದ್ದು ಇಂಡಿಗೋ ಕಾರಿನಂತೆ ಕಂಡು ಬಂದಿರುತ್ತದೆ. ಆಪಘಾತ ಬಳಿಕ ಆಪಘಾತಕ್ಕೋಳಗಾದ ವ್ಯಕ್ತಿಯ ಬಳಿ ಬಂದು ಫಿರ್ಯಾದಿದಾರರು ನೋಡಿದಾಗ ಯಾರೆಂದು ಗೊತ್ತಾಗದಿದ್ದು ನಂತರ ಅವರ ಪರಿಚಯದವರಲ್ಲಿ ತಿಳಿಸಿದ್ದು ಸಾರ್ವಜನಿಕರು ಬಂದು ನೋಡಿದಾಗ ಸದ್ರಿ ವ್ಯಕ್ತಿಯು ಕಾಯಾರ್ ಮಾರ್ ನಿವಾಸಿ ರವೀಂದ್ರ ಎಂಬುದಾಗಿ ಗೊತ್ತಾಗಿದ್ದು ನಂತರ ರವೀಂದ್ರ ರವರ ಮನೆಯಯವರಿಗೆ ತಿಳಿಸಿದ್ದು ಅವರ ಸಹೋದರ…
Read More